ಹಿರೇಕೆರೂರ: ವಿದ್ಯಾರ್ಥಿಗಳು ಕಠಿಣ ಶ್ರಮ ಹಾಗೂ ಏಕಾಗ್ರತೆಯಿಂದ ಓದಿ ವ್ಯಾಸಂಗ ಮಾಡಿ, ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬೇಸಾಯ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ಚಿದಾನಂದ ಮನ್ಸೂರ ಹೇಳಿದರು.
ಮಾಸೂರು ಗ್ರಾಮದ ಸರ್ವಜ್ಞ ಫೌಂಡೇಶನ್ ದ್ವಿತೀಯ ವಾರ್ಷಿಕೋತ್ಸವ, ಕಂಪ್ಯೂಟರ್ ತರಬೇತಿ ಶಿಬಿರದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಸರ್ವಜ್ಞ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ಅದನ್ನು ವ್ಯರ್ಥ ಮಾಡದೇ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತರು ಸಾವಯವ ಕೃಷಿಗೆ ಆದ್ಯತೆ ಕೊಡಬೇಕು. ರಸಗೊಬ್ಬರ ನಿಗದಿತ ಪ್ರಮಾಣದಲ್ಲಿ ಬಳಸಿದ್ದೇ ಆದರೆ ಅಧಿಕ ಇಳುವರಿ ಗಳಿಸಬಹುದು ಎಂದು ಸಲಹೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಸಮಾಜದ ಅಭ್ಯುದಯಕ್ಕೆ ಸ್ವಯಂ ಸೇವಾ ಸಂಸ್ಥೆಗಳು ಕೊಡುಗೆ ನೀಡುತ್ತಿವೆ. ಈ ನಿಟ್ಟಿನಲ್ಲಿ ಸರ್ವಜ್ಞ ಫೌಂಡೇಶನ್ ನಿಂದ ಉಚಿತ ಕಂಪ್ಯೂಟರ್ ಸಾಕ್ಷರತೆಯನ್ನು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ನೀಡುತ್ತಿದೆ. ಇದಲ್ಲದೆ ಅನೇಕ ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ರೈತ ಸಂಘದ ಕಾರ್ಯಕರ್ತರು ಪ್ರತಿ ಹೋರಾಟಗಳಿಗೆ ಸ್ಪಂದಿಸಿ, ಭಾಗಿಯಾಗಿದ್ದಾರೆ. ತಳಮಟ್ಟದಿಂದ ಇಡೀ ರಾಜ್ಯದಲ್ಲಿ ಹಾವೇರಿ ಜಿಲ್ಲಾ ರೈತ ಸಂಘ ದೊಡ್ಡ ಪ್ರಮಾಣದಲ್ಲಿ ಗುರುತಿಸಿಕೊಂಡಿದೆ ಎಂದರೆ ಅದಕ್ಕೆ ಕಾರ್ಯಕರ್ತರೇ ಕಾರಣ. ಆದ್ದರಿಂದ ನನಗೆ ಸಂದ ಈ ಪ್ರಶಸ್ತಿಗಳೆಲ್ಲ ರೈತ ಸಂಘದ ಕಾರ್ಯಕರ್ತರಿಗೆ ಸಲ್ಲುತ್ತವೆ ಎಂದು ಹೇಳಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹಾಗೂ ಮಾಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಶಂಕರನಾಯ್ಕ ಲಮಾಣಿ ಅವರಿಗೆ ಸರ್ವಜ್ಞ ಶ್ರೀ ನೀಡಿ ಗೌರವಿಸಲಾಯಿತು.
ಮುಖ್ಯಶಿಕ್ಷಕ ಶಂಕರನಾಯ್ಕ ಲಮಾಣಿ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಈರನಗೌಡ ಬೇವಿನಮರದ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡರಾದ ಶಂಕರಗೌಡ ಶಿರಗಂಬಿ, ದೇವಿರಪ್ಪ ಪೂಜಾರ, ಮಹಮ್ಮದ ಗೌಸ್ ಪಾಟೀಲ, ರತ್ನಮ್ಮ ಪಾಟೀಲ, ಪ್ರಭುಗೌಡ ಪ್ಯಾಟಿ, ಗಂಗನಗೌಡ ಮರಿಗೌಡ್ರ, ಮಂಜನಗೌಡ ಚನ್ನಗೌಡ್ರ, ರಾಜು ಮುತ್ತಗಿ, ಶಂಭು ಮುತ್ತಗಿ, ಸರ್ವಜ್ಞ ಫೌಂಡೇಶನ್ ಕಾರ್ಯದರ್ಶಿ ನಾಗನಗೌಡ ಪಾಟೀಲ, ನಿರ್ದೇಶಕರಾದ ಬಸವರಾಜ ಹೊನ್ನಾಳಿ, ಚಂದ್ರಹಾಸ ನಾಗೇನಹಳ್ಳಿ, ರೇವಣಪ್ಪ ಸಿದ್ದಲಿಂಗಪ್ಪನವರ, ಜಯಪ್ಪ ಹೊನ್ನಾಳಿ, ಸದಸ್ಯರಾದ ಗಣೇಶ ಪಾಟೀಲ, ಆನಂದಪ್ಪ ಬೇವಿನಮರದ, ಪಾಲಾಕ್ಷಪ್ಪ ಪಾಟೀಲ, ಆಶಾ ಶೆಟ್ಟರ ಗ್ರಾಮಸ್ಥರು ಹಾಜರಿದ್ದರು.