Advertisement

ರಾಷ್ಟ್ರದ ಅಭಿವೃದ್ಧಿಗೆ ವಿದ್ಯಾರ್ಥಿಗಳ ಸಹಕಾರ ಅಗತ್ಯ: ಕಿರಣ್‌ ಕುಮಾರ್

03:45 AM Jul 09, 2017 | Team Udayavani |

ಮಂಗಳೂರು: ವಿದ್ಯಾರ್ಥಿಗಳು ತಮ್ಮ ಕಲಿಕೆಯ ಅವಧಿಯಲ್ಲಿ ಪಡೆದ ಮೌಲ್ಯಯುತ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಸಮಸ್ಯೆಗಳನ್ನು ಅರಿತು ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಬೇಕು. ಜತೆಗೆ ಸಂದರ್ಭಕ್ಕೆ ಅನುಗುಣವಾಗಿ ಸಾಮರ್ಥ್ಯ ಹಾಗೂ ತಾಳ್ಮೆಯ ಚಿಂತನೆ ನಡೆಯಬೇಕು ಎಂದು ಇಸ್ರೋ ಬೆಂಗಳೂರಿನ ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್‌ ಅಭಿಪ್ರಾಯಪಟ್ಟರು.

Advertisement

ಅವರು ಶನಿವಾರ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ 2016-17ನೇ ಶೈಕ್ಷಣಿಕ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಇಸ್ರೋ ನಡೆಸಿಕೊಂಡು ಬಂದಿರುವ ವಿವಿಧ ಬಾಹ್ಯಾಕಾಶ ಹಾಗೂ ಉಪಗ್ರಹಗಳ ಸಂಶೋಧನೆ ಗಳಿಂದ ಭಾರತ ಇಂದು ಸಂವಹನ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಹೊಂದುತ್ತಿದೆ. ಪ್ರತಿಯೋರ್ವ ವಿದ್ಯಾರ್ಥಿಯೂ ತಾನು ಮುಂದೆ ಏನು ಮಾಡಬೇಕು ಎಂಬ ಗುರಿಯನ್ನು ಹೊಂದಿರಬೇಕು. ಆ ಗುರಿಯನ್ನು ಮುಟ್ಟಲು ಹಲವರ ಮಾರ್ಗದರ್ಶನ ಅಗತ್ಯ. ನಿಟ್ಟೆಯಂತಹ ಸುಸಜ್ಜಿತ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆಯುವುದೇ ಇಲ್ಲಿನ ವಿದ್ಯಾರ್ಥಿಗಳ ಭಾಗ್ಯ ಎಂದರು. 

ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಎಜ್ಯುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಎನ್‌. ವಿನಯ ಹೆಗ್ಡೆ ಮಾತನಾಡಿ, ಪ್ರತಿಯೊಬ್ಬನೂ ಸಾಮಾಜಿಕ ಕಾಳಜಿಯೊಂದಿಗೆ ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಬೇಕು. ಕಾಲಕ್ಕೆ ಅನುಗುಣವಾಗಿ ಬದಲಾವಣೆಗಳು ಅನಿವಾರ್ಯವಾದರೂ ಸಾಮಾ ಜಿಕ ಕಾಳಜಿಯನ್ನು ಗಮನದಲ್ಲಿಟ್ಟು ಕೊಂಡು ಅಭಿವೃದ್ಧಿಯೊಂದಿಗೆ ಪರಿಸರ ಸಂರಕ್ಷ ಣೆಯೂ ಅಗತ್ಯ. ಎಜುಸಾಟ್‌ ತಂತ್ರಜ್ಞಾನ ಇಂದು ಅನಿವಾರ್ಯವಾಗುತ್ತಿದೆ ಎಂದರು. 

ಈ ಸಂದರ್ಭದಲ್ಲಿ ನಿಟ್ಟೆ ತಾಂತ್ರಿಕ ಮಹಾ ವಿದ್ಯಾಲಯದ ಬಿ.ಇ., ಎಂ.ಟೆಕ್‌. ಹಾಗೂ ಎಂಸಿಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪ್ರದಾನ ಮಾಡಲಾಯಿತು.

ಬಿ.ಇ. ವಿಭಾಗದಲ್ಲಿ ಮೆಕಾನಿಕಲ್‌ ವಿಭಾಗದ ಲಾಕ್ಲೈನ್‌ ಡಿ’ಸೋಜಾ, ಸಿವಿಲ್‌ ವಿಭಾಗದ ಎಚ್‌. ಪವನ್‌, ಎಲೆಕ್ಟ್ರಿಕಲ್‌ ವಿಭಾಗದ ಸಿಂಧು ಹೊಳ್ಳ, ಬಯೋಟೆಕ್ನಾಲಜಿ ವಿಭಾಗದ ಚಂದ್ರಿಕಾ ಡಿ., ಕಂಪ್ಯೂಟರ್‌ ಸೈನ್ಸ್‌ನ ಸಿಂಧೂರಾ ರಾವ್‌, ಇನಾ#ಮೇಶನ್‌ ಸೈನ್ಸ್‌ನ ನಯನಾ ಎನ್‌.ಪಿ., ಎಲೆಕ್ಟ್ರಾನಿಕ್ಸ್‌ ವಿಭಾಗದ ನವ್ಯಾ ಎಸ್‌.ರೈ, ಎಂ.ಟೆಕ್‌ ವಿಭಾಗದ ಸವಿತಾ ಕಾಮತ್‌, ಸುಹೈಲ್‌ ಅಹಮದ್‌, ರೀನಾ ಎನ್‌. ಪೂಜಾರಿ, ದೀಪ್ತಿ ರಾಣಿ, ವಿದ್ಯಾಶ್ರೀ ಎಸ್‌., ಮಧುಶ್ರೀ, ಮಹಿಮಾ, ಶಿಶಿರ್‌ ಆರ್‌.ಕೆ., ಪೂಜಾ ರಾಣೆ, ಶಂಕರ ಪೈ, ಎಂಸಿಎ ವಿಭಾಗದ ಸುಧಾ ಪ್ರಭು ಅವರು ಚಿನ್ನದ ಪದಕ ಪಡೆದರು. 

Advertisement

ಮೆಕಾನಿಕಲ್‌ ವಿಭಾಗದ ಸ್ಟೀವನ್‌ ಲೆಸ್ಟರ್‌, ಸಿವಿಲ್‌ ವಿಭಾಗದ ಅಂಜನಾ ಎಸ್‌.ರಾವ್‌, ಎಲೆಕ್ಟ್ರಿಕಲ್‌ ವಿಭಾಗದ ಎಲ್ಟೋನ್‌ ಮೊಂತೆರೊ, ಬಯೋಟೆಕ್ನಾಲಜಿ ವಿಭಾಗದ ಪ್ರಿಯಾಂಕಾ ನಾಯ್ಕ, ಕಂಪ್ಯೂಟರ್‌ ಸೈನ್ಸ್‌ನ ವಿವಸ್ವತ್‌ ಜೆ.ರಾವ್‌, ಇನಾ#ರ್ಮೇನ್‌ ಸೈನ್ಸ್‌ ವಿಭಾಗದ ಅಶ್ವಿ‌ಜಾ ನಾಯಕ್‌, ಎಲೆಕ್ಟ್ರಾನಿಕ್ಸ್‌ ವಿಭಾಗದ ಕಾರ್ತಿಕ್‌ ಕೆ, ಎಂ.ಟೆಕ್‌. ವಿಭಾಗದ ಸುನಿತಾ ಎನ್‌. ವಿ., ದಿವ್ಯಾಶ್ರೀ, ದೀಪ್ತಿ ಎಂ.ಬಿ., ಯೋಗೀಶ್‌, ನಿರ್ಮಿತ್‌ ಆರ್‌. ಜೈನ್‌, ಶರಣ್ಯಾ ಉಡುಪ, ಭಾರವಿ, ಶ್ರೀಶ ರಮೇಶ್‌ ರಾವ್‌, ನೇಹಾ ಎಸ್‌.ಎನ್‌., ನೂತನಾ ಶೆಟ್ಟಿ, ಎಂಸಿಎ ವಿಭಾಗದ ವಿಕ್ಕಿ ಎಲ್‌. ಶೇಟ್‌ ಬೆಳ್ಳಿ ಪದಕ ಗಳಿಸಿದರು.

ವೇದಿಕೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ನಿಟ್ಟೆ ಇಂಡಸ್ಟ್ರೀ ಇನ್‌ಸ್ಟಿಟ್ಯೂಟ್‌ ಇಂಟರಾಕ್ಷನ್‌ನ ನಿರ್ದೇಶಕ ಡಾ| ಪರಮೇಶ್ವರನ್‌, ಡೀನ್‌ಗಳಾದ ಡಾ| ಸುದೇಶ್‌ ಬೇಕಲ್‌, ಡಾ| ಸುಬ್ರಹ್ಮಣ್ಯ ಭಟ್‌, ಡಾ| ರಾಜೇಶ್‌ ಶೆಟ್ಟಿ, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ಡಾ| ಐ.ಆರ್‌.ಮಿತ್ತಂತಾಯ ಚಿನ್ನ ಹಾಗೂ ಬೆಳ್ಳಿಯ ಪದಕ ಗಳಿಸಿದ ವಿದ್ಯಾರ್ಥಿಗಳ ವಿವರ ನೀಡಿದರು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ನಿರಂಜನ್‌ ಎನ್‌. ಚಿಪ್ಳೂಣRರ್‌ ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ| ಶ್ರೀನಿವಾಸ್‌ ರಾವ್‌ ಬಿ.ಆರ್‌. ವಂದಿಸಿದರು. ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ| ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next