Advertisement
ಉಡುಪಿಗೆ 8ನೇ ಸ್ಥಾನಪಟ್ಟಿಯಲ್ಲಿ ಉಡುಪಿ 8ನೇ ಸ್ಥಾನದಲ್ಲಿದೆ. ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ 681 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಕಡ್ಡಾಯ ಶಿಕ್ಷಣ ವ್ಯಾಪ್ತಿಗೆ ಒಳಪಡುವ (6ರಿಂದ 13 ವರ್ಷ) 112 ಮಕ್ಕಳು ಹೊರಗುಳಿದಿದ್ದರೆ, 14-15ರ ವಯೋಮಿತಿಯ 435 ಮತ್ತು 16-17ರ 134 ಮಕ್ಕಳು ಶಿಕ್ಷಣ ತೊರೆದಿದ್ದಾರೆ. ಈ ಸಾಲಿನಲ್ಲಿ ಶಿಕ್ಷಣಾಧಿಕಾರಿಗಳು, ಶಿಕ್ಷಕರು ಶಾಲೆಗೆ ಬಾರದ 681ರಲ್ಲಿ 142 ಮಕ್ಕಳನ್ನು ಶಾಲೆಗೆ ಮತ್ತೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಇಂಥ 2,448 ಮಕ್ಕಳಿದ್ದಾರೆ. ರಾಜ್ಯ ವಾರು ಪಟ್ಟಿಯಲ್ಲಿ ದ.ಕ. 27ನೇ ಸ್ಥಾನ ಪಡೆದಿದೆ. ಹೊರಗುಳಿಯುವುದು ಎಂದರೇನು?
1ರಿಂದ 10ನೇ ತರಗತಿಯ ವಿದ್ಯಾರ್ಥಿ 7 ದಿನ ಗೈರು ಹಾಜರಾದರೆ ಮುಖ್ಯ ಶಿಕ್ಷಕರು ಅವನನ್ನು ಮರಳಿ ಕರೆತರುವ ಪ್ರಯತ್ನ ಮಾಡಬೇಕು. ಇಷ್ಟಾದರೂ ಬಾರದೆ ಹೋದರೆ ಆ ಮಗುವನ್ನು “ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿ’ ಎಂದು ಪರಿಗಣಿಸಲಾಗುತ್ತದೆ.
Related Articles
ಉಡುಪಿಯಲ್ಲಿ ವಲಸೆಯ ಕಾರಣಕ್ಕೆ ಹೆಚ್ಚಿನ ಮಕ್ಕಳು ಶಾಲೆ ಬಿಟ್ಟಿದ್ದಾರೆ. ನಿರಾಸಕ್ತಿ, ಅನಾರೋಗ್ಯ ಶಾಲೆ ಬಿಡಲು ಮುಖ್ಯ ಕಾರಣ. ಋತುಮತಿಯಾಗಿರುವ ಕಾರಣಕ್ಕೆ ಬಾಲಕಿಯರನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕಿರುವ ಪ್ರಕರಣವೂ ದಾಖಲಾಗಿದೆ.
Advertisement
ವಲಸೆ ಕುಟುಂಬಗಳ ಮಕ್ಕಳು ಮಾಹಿತಿ ನೀಡದೆ ಶಾಲೆ ಬಿಡುತ್ತಾರೆ. ತ್ಯಜಿಸಿದ ಮಕ್ಕಳನ್ನು ಮರಳಿ ಕರೆತರಲು ಅಗತ್ಯ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶಾಲೆಯಿಂದ ಹೊರಗುಳಿದಿದ್ದ ಮಕ್ಕಳ ಸಂಖ್ಯೆ ಕಡಿಮೆ.– ಶೇಷಶಯನ ಕಾರಿಂಜ, ಉಪ ನಿರ್ದೇಶಕ, ಸಾ. ಶಿಕ್ಷಣ ಇಲಾಖೆ, ಉಡುಪಿ - ತೃಪ್ತಿ ಕುಮ್ರಗೋಡು