Advertisement

ಕೂಡಿಟ್ಟ ಹಣ ನೀಡಿದ ವಿದ್ಯಾರ್ಥಿಗಳು

04:12 PM May 11, 2020 | Suhan S |

ಗದಗ: ಕೋವಿಡ್ ಲಾಕ್‌ಡೌನ್‌ನಿಂದ ಸಂಕಷ್ಟ ಎದುರಿಸುತ್ತಿರುವ ಬಡವರ, ಕಾರ್ಮಿಕರ ಉಪಜೀವನಕ್ಕೆ ನೆರವು ನೀಡಲು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರು ಆರಂಭಿಸಿರುವ ಮನುಕುಲಕ್ಕಾಗಿ ಭಿಕ್ಷಾ ಅಭಿಯಾನಕ್ಕೆ ನಗರದ ವಿದ್ಯಾರ್ಥಿಗಳೂ ಕೈ ಜೋಡಿಸಿದ್ದಾರೆ.

Advertisement

ನಗರದ ಸಿದ್ಧಣ್ಣ ಕವಲೂರ, ವಿಜಯಲಕ್ಷ್ಮೀ ಕವಲೂರ, ಸೂರಜ ಕವಲೂರ ಹಾಗೂ ಸರೋಜಿನಿ ಕವಲೂರ ಅವರು ಕೂಡಿಟ್ಟ ಸಾವಿರಾರು ರೂಪಾಯಿ ಜೋಳಿಗೆಗೆ ಹಾಕಿದರು. ಕೋವಿಡ್ ದಿಂದಾಗಿ ದೇಶವೇ ಸ್ತಬ್ಧವಾಗಿದ್ದರಿಂದ ಬಡವರು, ಕಾರ್ಮಿಕರು ಕೆಲಸವಿಲ್ಲದೇ ಜೀವನ ನಡೆಸಲು ತೊಂದರೆ ಅನುಭವಿಸುತ್ತಿದ್ದರು. ರೈತರು, ವ್ಯಾಪಾರಿಗಳು, ದಾನಿಗಳಿಂದದವಸ-ಧ್ಯಾನ್ಯಗಳನ್ನು ಭಿಕ್ಷೆ ರೂಪದಲ್ಲಿ ಪಡೆದು ಸಮಾಜದಲ್ಲಿನ  ಬಡವರು, ಅಶಕ್ತರು ಕಾರ್ಮಿಕರಿಗೆ ವಿತರಿಸಲಾಗುತ್ತಿದೆ. ಇದೊಂದು ಬಡವರ ಸೇವೆ ಎಂದು ಅನಿಲ್‌ ಮೆಣಸಿನಕಾಯಿ ಹೇಳಿದರು.

ಶಿವಲಿಂಗಶಾಸ್ತ್ರಿ ಸಿದ್ದಾಪೂರ, ಕಾಂತಿಲಾಲ್‌ ಬನಸಾಲಿ, ಮುಖಂಡರಾದ ಪ್ರಶಾಂತ ನಾಯ್ಕರ, ಮಹೇಶ ದಾಸರ, ಬಸವಣ್ಣೆಯ್ಯ ಹಿರೇಮಠ, ಅನೀಲ ಅಬ್ಬಿಗೇರಿ, ಅರವಿಂದ ಕವಲೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next