Advertisement

ವಿದ್ಯಾರ್ಥಿಗಳೇ, ಮೊಬೈಲ್‌ ಗೀಳಿನಿಂದ ಹೊರಬನ್ನಿ

07:42 PM Dec 09, 2019 | Team Udayavani |

ತಿ.ನರಸೀಪುರ: ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅಪರಾಧ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದು ಜಿಲ್ಲಾ ಉಪ ವಿಭಾಗಾಧಿಕಾರಿ ಎನ್‌.ಸಿ.ವೆಂಕಟರಾಜು ತಿಳಿಸಿದರು.

Advertisement

ಪಟ್ಟಣದ ಸೆಂಟ್‌ ಮೇರಿಸ್‌ ಆಂಗ್ಲ ಶಾಲೆಯಲ್ಲಿ ಆಯೋಜಿಸಿದ್ದ 28ನೇ ವರ್ಷದ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ಪ್ರಸ್ತುತ ಎಲ್ಲೆಡೆ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ. ಉತ್ತಮ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕಾಗಿದ್ದ ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದಾರೆ. ಮಕ್ಕಳು ಮೊಬೈಲ್‌ ಮೋಹಕ್ಕೆ ಒಳಗಾಗಿದ್ದು, ತಮ್ಮ ತಂದೆ-ತಾಯಿಗಳೊಂದಿಗೆ ಸಮಯ ಕಳೆಯಲು ಆಗುತ್ತಿಲ್ಲ. ಇದು ಬದಲಾಗಬೇಕಿದೆ ಎಂದರು.

ತಹಶೀಲ್ದಾರ್‌ ನಾಗೇಶ್‌ ಧ್ವಜಾರೋಹಣ ನೆರವೇರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಶಾಲಾ ಮಕ್ಕಳು ಆಕರ್ಷಕ ಪಥ ಸಂಚಲನ ನಡೆಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ಈ ವೇಳೆ ಪುರಸಭಾ ಸದಸ್ಯೆ ರೂಪಾ, ಶಿಕ್ಷಣ ಇಲಾಖೆಯ ಬಿಆರ್‌ಸಿ ಶಂಕರ್‌, ಸಿಆರ್‌ಪಿ ಮಂಜುನಾಥ್‌, ದೈಹಿಕ ಪರಿವಿಕ್ಷಕ ಮಹಾತಂಪ್ಪ ನಾಗೂರ್‌, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪಾಲ್‌ ಬೆನ್‌,

ನಿರ್ದೇಶಕ ರೆನ್ನಿವರ್ಗಿಸ್‌, ಪ್ರಾಂಶುಪಾಲ ಕ್ಷೇಯರ್‌ ಆಂತೋನಿ, ಉಪ ಪ್ರಾಂಶುಪಾಲ ಆರ್‌.ಗೋವಿಂದ, ಕರುಣೇಶ್‌, ಜಫಿನ್‌, ರಶ್ಮಿ, ಮಲ್ಲೇಶ್‌, ಚಂದ್ರಕಲಾ, ಶಾಂತಮಣಿ, ಸುಧಾ, ಜೀತು,ನಂದಿನಿ, ರೂಪಿಣಿ, ಲಲಿತಾ, ಸುಮಿತ್ರಾ, ಮೇರಿ, ಪುಷ್ಪಾ, ಉಷಾ, ಚಿಕ್ಕಮ್ಮಣ್ಣಿ, ರಾಣಿ, ಸುನೀತಾ, ತೆರೇಸಾ ಮೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next