Advertisement

ವಿದ್ಯಾರ್ಥಿಗಳೇ, ಮೊಬೈಲ್‌ ಗೀಳಿನಿಂದ ಹೊರ ಬನ್ನಿ

09:35 PM Dec 18, 2019 | Team Udayavani |

ಹುಣಸೂರು: ವಿದ್ಯಾರ್ಥಿ ಘಟ್ಟವು ಭವಿಷ್ಯ ರೂಪಿಸಿಕೊಳ್ಳಲು ಅತ್ಯುತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಮೊಬೈಲ್‌ ಗೀಳಿನೊಂದಿಗೆ ಫೇಸ್‌ಬುಕ್‌, ವ್ಯಾಟ್ಸಾಪ್‌ನಲ್ಲಿ ತೊಡಗಿಕೊಂಡು ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಈ ಗೀಳಿನಿಂದ ಹೊರಬಂದು ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ಸಲಹೆ ನೀಡಿದರು.

Advertisement

ತಾಲೂಕಿನ ಬಿಳಿಕೆರೆ ಹೋಬಳಿಯ ಸಂತೆಕೆರೆ ಕೋಡಿಯಲ್ಲಿ ಹುಣಸೂರು ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ವತಿಯಿಂದ ಬುಧವಾರ ಆಯೋಜಿಸಿದ್ದ ಎನ್‌ಎಸ್‌ಎಸ್‌ ವಾರ್ಷಿಕ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಶಕ್ತಿಯ ಸದ್ಬಳಕೆ, ದೇಶದ ಕಟ್ಟುವ ಕಾಯಕ, ವಿದ್ಯಾರ್ಥಿಗಳ ಪರಿವರ್ತನೆಯ ಹಾದಿಗೆ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ (ಎನ್‌ಎಸ್‌ಎಸ್‌) ಚಟುವಟಿಕೆಗಳು ಪ್ರೇರಕವಾಗಿದೆ ಪ್ರತಿ ವಿದ್ಯಾರ್ಥಿಯಲ್ಲೂ ಸೇವೆ, ಗ್ರಾಮೀಣ ಬದುಕನ್ನು ಅರಿಯುವ, ಶ್ರಮದಾನ ಮಾಡುವ ಅನುಭವದ ಜೊತೆಗೆ ಪ್ರತಿಭೆಗಳ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ. ನಗರ ಪ್ರದೇಶದ ಮಕ್ಕಳಿಗಂತೂ ಇಂತಹ ಶಿಬಿರದ ಮೂಲಕ ಹಳ್ಳಿಗಳಲ್ಲಿ ರೈತರು ಎದುರಿಸುತ್ತಿರುವ ಬವಣೆ, ಕೃಷಿ ಬಗ್ಗೆ ತಿಳಿದುಕೊಳ್ಳಬಹುದಾಗಿದೆ ಎಂದರು.

ಶಿಬಿರಾರ್ಥಿಗಳು ಸ್ವಯಂ ಪ್ರೇರಿತರಾಗಿ ಆಸಕ್ತಿಯಿಂದ ಎಲ್ಲಾ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು. ಆಗ ನಿಮ್ಮನ್ನು ನೀವು ಅರಿತುಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ವೈಯಕ್ತಿಕವಾಗಿಯೂ ನೆರವು ನೀಡಲಾಗುವುದು. ಶಾಲಾ ಕಾಲೇಜಿನ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಲು ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ಶಿಬಿರಾರ್ಥಿಗಳಿಗೆ ಸಮವಸ್ತ್ರ ಹಾಗೂ ಕ್ಯಾಪ್‌ಗ್ಳ ಕೊಡುಗೆ ನೀಡಿದ ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಬಿ.ಸುರೇಂದ್ರ ಮಾತನಾಡಿ, ಗ್ರಾಮಸ್ಥರ ಸಹಕಾರದೊಂದಿಗೆ ಶಿಬಿರಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು. ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಯೋಗಣ್ಣ, ಉಪನ್ಯಾಸಕ ವಾಸು ಮಾತನಾಡಿದರು. ಎನ್‌ಎಸ್‌ಎಸ್‌ ಶಿಬಿರಾಧಿಕಾರಿ ಬೈಯಣ್ಣ, ಶಿಬಿರದ ವಾರಕಾಲದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

Advertisement

ಕಾಲೇಜು ವತಿಯಿಂದ ಹಾಗೂ ಗ್ರಾಮಸ್ಥರು ನೂತನ ಶಾಸಕ ಮಂಜುನಾಥ್‌ ಅವರ‌ನ್ನು ಸನ್ಮಾನಿಸಿದರು. ಶಾಸಕರನ್ನು ಶಿಬಿರಾರ್ಥಿಗಳು ಪುಷ್ಪವೃಷ್ಠಿ ಮೂಲಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮೇಗೌಡ, ತಹಶೀಲ್ದಾರ್‌ ಬಸವರಾಜ್‌, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್‌, ಗ್ರಾಪಂ ಮಾಜಿ ಅಧ್ಯಕ್ಷ ಸುಂದರ್‌, ಪತ್ರಕರ್ತ ಧರ್ಮಾಪುರ ನಾರಾಯಣ್‌, ಕಾಂಗ್ರೆಸ್‌ ಮುಖಂಡರಾದ ನಾರಾಯಣ್‌, ಅಸ್ವಾಳು ಕೆಂಪೇಗೌಡ, ವಸಂತಕುಮಾರ್‌, ಉದ್ಯಮಿ ಕೃಷ್ಣ, ಕಂಠಿಶೆಟ್ಟಿ, ಮುರುಗೇಶ್‌ ಮತ್ತಿತರರು ಉಪಸ್ಥಿತರಿದ್ದರು.

ನಂ.1 ವಿದ್ಯಾರ್ಥಿಗಳಿಗೆ 10 ಗ್ರಾಂ ಚಿನ್ನದ ಪದಕ” ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ತಮ್ಮ ತಾಯಿ ರತ್ನಪ್ರೇಮಕುಮಾರ್‌ ಹೆಸರಿನಲ್ಲಿ ಸರ್ಕಾರಿ ಶಾಲಾ-ಕಾಲೇಜಿನ ತಾಲೂಕಿಗೆ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಒಂದು ತೊಲ ಬಂಗಾರದ ರತ್ನಮ್ಮ ಸ್ವರ್ಣ ಪ್ರಶಸ್ತಿ ನೀಡಲಾಗುತ್ತಿತ್ತು. ಇದನ್ನು ಮತ್ತೆ ಮುಂದುವರಿಸುವುದಾಗಿ ನೂತನ ಶಾಸಕ ಎಚ್‌.ಪಿ. ಮಂಜುನಾಥ್‌ ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ, ಪಿಯು ವಿಭಾಗದಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗ ಹಾಗೂ ಪದವಿಯಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಪಡೆದ ವಿದ್ಯಾಥಿಗಳಿಗೆ 10 ಗ್ರಾಂ ಚಿನ್ನದ ಪದಕ ನೀಡಲಾಗುವುದು. ಜೊತೆಗೆ ಅತ್ಯುತ್ತಮ ಫ‌ಲಿತಾಂಶ ಪಡೆದ ಶಾಲಾ- ಕಾಲೇಜುಗಳಿಗೆ ತಮ್ಮ ಶಾಸಕರ ನಿಧಿಯಿಂದ 1 ಲಕ್ಷ ರೂ. ನೀಡುವುದಾಗಿ ಶಾಸಕರು ತಿಳಿಸಿದರು. ಇದು ಕಳೆದ ಸಾಲಿನ ಶೈಕ್ಷಣಿಕ ಚಟುವಟಿಕೆಗಳಿಗೂ ಅನ್ವಯಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next