Advertisement
2 ವರ್ಷಗಳಿಂದ 7ನೇ ತರಗತಿ ತೇರ್ಗಡೆ ವಿದ್ಯಾರ್ಥಿಗಳು ಟಿ.ಸಿ. ಪಡೆದು ಬೇರೆ ಶಾಲೆಗೆ ಸೇರಿದ್ದಾರೆ. ಈ ಬಾರಿಯೂ ಅದೇ ಪರಿಸ್ಥಿತಿ.
Related Articles
Advertisement
ಶಿಕ್ಷಕರು ಇಲ್ಲ
ಈ ಶಾಲೆಯಲ್ಲಿ 5 ಮಂಜೂರಾದ ಹುದ್ದೆಗಳಿವೆ. 2 ಹುದ್ದೆಗಳಲ್ಲಿ ಶಿಕ್ಷಕರಿದ್ದು, ಈ ವರ್ಷ ಮುಖ್ಯ ಗುರು ಗಳನ್ನು ಹೆಚ್ಚುವರಿ ಎಂದು ಬೇರೆಡೆ ನಿಯೋಜಿಸುವ ಪ್ರಕ್ರಿಯೆ ನಡೆದಿದೆ. 6ರಿಂದ 8ನೇ ತರಗತಿ ತನಕ ಎಜಿಟಿ, ಟಿಜಿಟಿ ಅರ್ಹತೆಯ ಇಬ್ಬರು ಶಿಕ್ಷಕರ ಅಗತ್ಯ ಇದೆ. ಆದರೆ ಈ ಎರಡೂ ಹುದ್ದೆ ಖಾಲಿ ಇವೆ.
ಸಂಸದ ನಳಿನ್ ಕಲಿತ ಶಾಲೆ
ಸಂಸದ ನಳಿನ್ ಪ್ರಾಥಮಿಕ ಶಿಕ್ಷಣ ಪೂರೈಸಿದ ಸರಕಾರಿ ಶಾಲೆಯಿದು. ಕೆಲವು ತಿಂಗಳ ಹಿಂದೆ ಅವರಿಗೆ ಮನವಿ ಸಲ್ಲಿಸಲಾಗಿದೆ. ಸ್ಪಂದಿಸುವ ಭರವಸೆ ಸಿಕ್ಕಿದ್ದರೂ ಶಾಲಾ ಪುನರಾರಂಭಕ್ಕೆ ಇನ್ನೆರಡು ದಿನ ಬಾಕಿ ಇದ್ದು, ಶಿಕ್ಷಕರ ನೇಮಕವಾಗದೆ ಪೋಷಕರು ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ನಿರ್ಧರಿಸಿದ್ದಾರೆ.
ನೇಮಕಕ್ಕೆ ಕ್ರಮ
ಈ ಶಾಲೆಗೆ ಎಜಿಟಿ ಶಿಕ್ಷಕರ ನಿಯೋಜನೆಗೆ ಕ್ರಮ ಕೈಗೊಳ್ಳಲಾಗುವುದು. ವರ್ಕ್ ಲೋಡ್ ಆಧರಿಸಿ ಹೆಚ್ಚಿನ ಶಿಕ್ಷಕರ ಅಗತ್ಯ ಇದ್ದರೆ ನೇಮಕಕ್ಕೆ ಆದ್ಯತೆ ನೀಡಲಾಗುವುದು. ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆಯುತ್ತೇನೆ.
– ಮಹಾದೇವ ಕ್ಷೇತ್ರ ಶಿಕ್ಷಣಾಧಿಕಾರಿ, ಸುಳ್ಯ
– ಕಿರಣ್ ಪ್ರಸಾದ್ ಕುಂಡಡ್ಕ