ಹುಣಸೂರು: ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಲ್ಲಿ ಯಶಸ್ವಿ ವ್ಯಕ್ತಿಯಾಗಲು ಪ್ರಯತ್ನಿಸುವ ಬದಲಿಗೆ ಮೌಲ್ಯಯುತ ವ್ಯಕ್ತಿಗಳಾಗಿ ಹೊರಹೊಮ್ಮಲು ನಿರ್ಧರಿಸಿ ಎಂದು ಖ್ಯಾತ ವೈದ್ಯ ಡಾ.ರಘುಪತಿ ವಿ.ರಾವ್ ಕರೆ ನೀಡಿದರು. ನಗರದ ಟ್ಯಾಲೆಂಟ್ ಪಿಯು ಕಾಲೇಜಿನಲ್ಲಿ ವೈದ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿ, ಆಧುನಿಕ ಜೀವನ ಶೈಲಿ ವಿದ್ಯಾರ್ಥಿಗಳಲ್ಲಿ ಮೌಲ್ಯ ಕಡೆಗಣಿಸುವ ಗುಣ ಬೆಳೆಸಿದೆ ಎಂದರು.
ವೈದ್ಯನೊಬ್ಬ ಯಶಸ್ವಿಯಾಗಲು ಆತ ರೋಗಿಯೊಂದಿಗೆ ನಡೆದುಕೊಳ್ಳುವ ರೀತಿಯಿಂದ ನಿರ್ಧಾರಿತವಾಗುತ್ತದೆ. ರೋಗಿಯೊಂದಿಗೆ ವೈದ್ಯ ಸ್ನೇಹಿತನಾಗಿ, ಕರುಣಾಮಯಿಯಾಗಿ ಮಾನಸಿಕ ಮತ್ತು ನೈತಿಕ ಸ್ಥೈರ್ಯ ತುಂಬುವ ಕಾರ್ಯ ಮಾಡಿದಾಗ ಮಾತ್ರ ಆತ ಉತ್ತಮ ವೈದ್ಯನಾಗಲು ಸಾಧ್ಯ ಎಂದು ತಿಳಿಸಿದರು.
ಅಂತೆಯೇ ವಿದ್ಯಾರ್ಥಿಗಳು ಕೇವಲ ಅಂಕಗಳಿಸಿದಲ್ಲಿ ಯಶಸ್ಸು ಸಾಧ್ಯ ಎಂಬುದನ್ನು ತೊರೆದು ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ. ಭವಿಷ್ಯದಲ್ಲಿ ಏನಾಗಬೇಕೆಂಬ ಗುರಿಗೆ ನೀಡಿದ ಗಮನವನ್ನು ಸಾಧಿಸಲು ಸಾಗುವತ್ತಾ ಚಿಂತಿಸದೆ ಇತರೆಡೆಗೆ ತಮ್ಮ ಗಮನ ಹರಿಸುತ್ತಿರುವುದರಿಂದಾಗಿ ವಿದ್ಯಾರ್ಥಿಗಳಲ್ಲಿನ ವಿಫಲತೆಗೆ ಕಾರಣ, ಶಿಸ್ತು, ಬದ್ಧತೆ ಮತ್ತು ಸ್ನೇಹಪರತೆ ಗಳಿಸಿ ಯಶಸ್ವಿ ವಿದ್ಯಾರ್ಥಿಗಳಾಗಿ ಎಂದರು.
ಪ್ರಸೂತಿ ತಜ್ಞೆ ಡಾ.ಸರೋಜಿನಿ ವಿಕ್ರಂ ವಿದ್ಯಾರ್ಥಿಗಳಿಗೆ ಡೆಂ à, ಚಿಕೂನ್‌ಗುನ್ಯ ಮುಂತಾದ ಕಾಯಿಲೆಗಳ ಗುಣಲಕ್ಷಣಗಳು ಮತ್ತು ಪರಿಹಾರದ ಕುರಿತು ಮಾಹಿತಿ ಒದಗಿಸಿದರು. ವೈದ್ಯರಿಗೆ ಸನ್ಮಾನಿಸಲಾಯಿತು. ಪ್ರೌಢಶಾಲೆಯ ಮುಖ್ಯಶಿಕ್ಷಕ ರೇಣುಕಾಪ್ರಸಾಧ್, ಪ್ರಾಂಶುಪಾಲರಾದ ಗುಲಾ°ಜ್‌ಖಾನ್, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.