Advertisement
ಶುಕ್ರವಾರದಿಂದ ಶೈಕ್ಷಣಿಕ ಚಟು ವಟಿಕೆ ಆರಂಭವಾಗಿದ್ದರೂ, ಮೊದಲ ದಿನ ಪಠ್ಯದ ಬದಲಿಗೆ ಕೊರೊನಾ ಜಾಗೃತಿ ಪಾಠ ಹಾಗೂ ಶಿಕ್ಷಣದ ಮಹತ್ವದ ಬಗ್ಗೆಯೇ ತಿಳಿ ಹೇಳಲಾಗಿತ್ತು. ಶನಿವಾರ ಎಲ್ಲ ಶಾಲೆಗಳಲ್ಲೂ ಪಠ್ಯಕ್ರಮ ಆಧಾರಿತ ಪಾಠ ಆರಂಭವಾಗಿದೆ.ಶಾಲೆಗಳಿಗೆ ಈಗಾಗಲೇ ಶಿಕ್ಷಣ ಇಲಾಖೆ ಯಿಂದ ನೀಡಿರುವ ವೇಳಾಪಟ್ಟಿ ಅನ್ವಯ ಪಾಠ ಆರಂಭವಾಗಿದೆ. ವಿದ್ಯಾಗಮ ತರಗತಿಗಳು ಕೂಡ ಪಾಳಿ ಪದ್ಧತಿಯಲ್ಲಿ ಚೆನ್ನಾಗಿ ನಡೆಯುತ್ತಿವೆ. ಶಾಲಾವರಣದಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ರಾಜ್ಯದಲ್ಲಿರುವ 5,492 ಪ.ಪೂ. ಕಾಲೇಜುಗಳಲ್ಲಿ ದಾಖಲಾಗಿರುವ 3,30,877 ವಿದ್ಯಾರ್ಥಿಗಳ ಪೈಕಿ ಶನಿವಾರ 1,09,319 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಹಾಜರಾತಿ ಸರಾಸರಿ ಶೇ. 33.04ರಷ್ಟಿದೆ. ಹಾಗೆಯೆ 16,850 ಪ್ರೌಢಶಾಲೆಗಳಲ್ಲಿ 10ನೇ ತರಗತಿಗೆ ದಾಖಲಾ ಗಿರುವ 9,29,130 ವಿದ್ಯಾರ್ಥಿಗಳಲ್ಲಿ 4,25,896 ವಿದ್ಯಾರ್ಥಿಗಳು ಹಾಜರಾ ಗಿದ್ದು, ಈ ವಿದ್ಯಾರ್ಥಿಗಳ ಹಾಜರಾತಿ ಸರಾಸರಿ ಶೇ.45.84ರಷ್ಟಿದೆ. ಒಂದೇ ದಿನದಲ್ಲಿ ಸರಿ ಸುಮಾರು ಶೇ.4ರಷ್ಟು ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಏರಿಕೆಯಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಸಸಿ ನೆಟ್ಟು ಶಾಲಾರಂಭ
ದಾವಣಗೆರೆ: ಇಲ್ಲಿನ ದುರ್ಗಾಂಬಿಕಾ ಶಾಲೆಯಲ್ಲಿ ಗುರುವಾರ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‌ನ ಗೌರವ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಸಸಿ ನೆಡುವ ಕಾರ್ಯಕ್ರಮದ ಮೂಲಕ ಶಾಲಾ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಕ್ಕೆ ಚಾಲನೆ ನೀಡಿದರು.
Related Articles
ಹಾಗೆಯೇ ಪರಿಸ್ಥಿತಿ ಆಧರಿಸಿಕೊಂಡು ಪ್ರಾಥಮಿಕ ತರಗತಿಗಳು (1ರಿಂದ 5ನೇ ತರಗತಿ) ವಿದ್ಯಾಗಮ ವಿಸ್ತರಣೆ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಪ್ರಥಮ ಪಿಯುಸಿ ಹಾಗೂ ಇತರೆ ತರಗತಿಗಳಿಗೆ ವಿದ್ಯಾಗಮ ವಿಸ್ತರಣೆ ಸಂಬಂಧ ಜ.15ರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
**
ಶಾಲಾರಂಭಕ್ಕೆ ಪೋಷಕರ ಸ್ಪಂದನೆ: ಸಚಿವ ಸುರೇಶ್ ಕುಮಾರ್
ಬೆಂಗಳೂರು: ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ತೆಗೆದುಕೊಂಡಿರುವ ಉಪಕ್ರಮಗಳ ಕುರಿತು ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭರವಸೆ ಉಂಟಾಗಿ ದ್ದರಿಂದ ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
Advertisement
ಪಿಯುಸಿ, ಎಸೆಸೆಲ್ಸಿ ಹಾಗೂ 6 ರಿಂದ 9ನೇ ತರಗತಿಗಳಿಗೆ ಪರಿಷ್ಕೃತ ವಿದ್ಯಾಗಮ ತರಗತಿಗಳ ಆರಂಭವಾದ ಹಿನ್ನೆಲೆಯಲ್ಲಿ ಶನಿವಾರ ಸಚಿವರು ಬೆಂಗಳೂರು, ರಾಮನಗರ ಜಿಲ್ಲೆಯ ಹಲವು ಶಾಲೆಗಳಿಗೆ ಭೇಟಿ ನೀಡಿ ಪೋಷಕರು ಮತ್ತು ಮಕ್ಕಳೊಂದಿಗೆ ಶಾಲಾರಂಭದ ಕುರಿತು ಸಂವಾದ ನಡೆಸಿದರು.
ಪೋಷಕರು ಮತ್ತು ಮಕ್ಕಳು ಶಾಲಾರಂಭದ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ. ಸುರಕ್ಷತೆ ಮತ್ತು ಎಸ್‌ಒಪಿ ಪಾಲನೆ ಕುರಿತು ವಿಶ್ವಾಸ ಹೊಂದಿದ್ದಾರೆ. ಮಕ್ಕಳ ಭವಿಷ್ಯದ ಕುರಿತು ಆತಂಕದಲ್ಲಿದ್ದ ಪೋಷಕರು ಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದೆಲ್ಲೆಡೆ ಶಾಲಾರಂಭಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಕೆಲ ಪೋಷಕರು ಮುಂದಿನ ವಾರದಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಬಯಸಿರುವುದರಿಂದ ಸೋಮವಾರದಿಂದ ಶಾಲೆಗಳಲ್ಲಿ ಹಾಜರಾತಿ ಇನ್ನು ಹೆಚ್ಚಲಿದೆ. ಸುರಕ್ಷತ ವಾತಾವರಣ ಗಮನಿಸಿರುವ ಪೋಷಕರು ಉಳಿದ ತರಗತಿಗಳನ್ನೂ ಆರಂಭಿಸಲು ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ. ಎಲ್ಲಿಯೂ ಯಾವುದೇ ತೊಂದರೆ ಎದುರಾಗಿಲ್ಲ. ಹಾಗೆಯೇ ಮಕ್ಕಳೇ ಸ್ವತಃ ಸಾಮಾಜಿಕ ಅಂತರ ಪಾಲನೆ ಮಾಡುತ್ತಿರುವುದು ಶಿಕ್ಷಕರು, ಪೋಷಕರಿಗೆ ಸಮಾಧಾನ ತಂದಿದೆ ಎಂದು ಹೇಳಿದರು.
ಶಿಕ್ಷಕರಿಗೆ ಸೋಂಕು: ಶಾಲಾರಂಭ ಮುಂದಕ್ಕೆಗದಗದ ಕೆಲವು ಶಾಲೆಗಳ ಒಟ್ಟು 10 ಶಿಕ್ಷಕರಿಗೆ ಶಾಲಾರಂಭಕ್ಕೂ ಮುನ್ನವೇ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಶಾಲೆಗಳು ಶುಕ್ರವಾರ ಆರಂಭವಾಗಿಲ್ಲ. ಶಾಲೆಗಳು ಆರಂಭವಾಗದೇ ಇದ್ದುದರಿಂದ ಈ ಶಿಕ್ಷಕರು ಯಾವುದೇ ಮಕ್ಕಳ ಸಂಪರ್ಕಕ್ಕೆ ಬಂದಿಲ್ಲ. ಶಿಕ್ಷಕರ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಶಾಲೆಗಳು ಆರಂಭವಾಗಲಿವೆ. ಹಾಗೆಯೇ ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಶಾಲಾರಂಭಕ್ಕೂ ಮೊದಲೇ ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದಲ್ಲಿ ಅಂತಹ ಶಾಲಾರಂಭ ವಿಳಂಬವಾಗಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.