Advertisement

ವಿದ್ಯಾರ್ಥಿಗಳೇ ದೇಶದ ಅಮೂಲ್ಯ ಸಂಪತ್ತು

04:14 PM Nov 27, 2021 | Team Udayavani |

ಕಮಲನಗರ: ಸಂಪಾದಿಸಿದ ಹಣ, ಆಸ್ತಿ ಪರರ ಪಾಲಾಗುತ್ತದೆ. ಆದರೆ ವಿದ್ಯಾರ್ಥಿಗಳು ಶ್ರಮಪಟ್ಟು ಕಲಿತ ವಿದ್ಯೆ ಯಾರೊಬ್ಬರೂ ಕಳವು ಮಾಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಜ್ಞಾನ, ಸಂಸ್ಕಾರ, ನೈತಿಕ ಮೌಲ್ಯ ಬೆಳೆಸಬೇಕು. ಇದರಿಂದ ಅವರು ದೇಶದ ಅಮೂಲ್ಯ ಆಸ್ತಿಯಾಗಲು ಸಾಧ್ಯ ಎಂದು ಸಿದ್ಧರಾಮೇಶ್ವರ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಡಾ|ಎಸ್‌.ಎಸ್‌. ಮೈನಾಳೆ ಹೇಳಿದರು. ಪಟ್ಟಣದ ಡಾ| ಚನ್ನಬಸವ ಪಟ್ಟದ್ದೇವರ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದರು.

Advertisement

ಪಿಎಸ್‌ಐ ಎಸ್‌. ನಂದಿನಿ ಮಾತನಾಡಿ, ಮಕ್ಕಳು ಕೀಳರಿಮೆಯಿಂದ ಹೊರ ಬಂದು, ಕಠಿಣ ಪರಿಶ್ರಮದ ಮೂಲಕ ಉನ್ನತ ಸಾಧನೆ ಮಾಡಬೇಕು. ಮಹಾನ್‌ ವ್ಯಕ್ತಿಗಳ ಜೀವನ ಚರಿತ್ರೆ ಅಧ್ಯಯನ ಮಾಡುವ ಮೂಲಕ ಪ್ರೇರಣೆ ಪಡೆಯಬೇಕು ಎಂದರು. ಶಾಲೆ ಆಡಳಿತಾಧಿಕಾರಿ ಚನ್ನಬಸವ ಘಾಳೆ ಮಾತನಾಡಿ, ಮಕ್ಕಳು ಸ್ಪರ್ಧಾತ್ಮಕ ಯುಗದಲ್ಲಿ ಕಡಿಮೆ ಅಂಕ ಗಳಿಸಿದರೂ ಪ್ರಯತ್ನ ಬಿಡಬಾರದು. ಏಕೆಂದರೆ ಪ್ರಯತ್ನವೇ ಯಶಸ್ಸಿಗೆ ದಾರಿ. ಹೀಗಾಗಿ ನಿರಂತರ ಪ್ರಯತ್ನ ಅವಶ್ಯ ಎಂದರು.

ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡಿ ವಿವಿಧ ಉನ್ನತ ಹುದ್ದೆಯಲ್ಲಿರುವ ಪ್ರಶಾಂತ ಶ್ರೀಗಿರೆ, ಕೇದಾರ ಬಿರಾದಾರ, ಮಂಜುನಾಥ ನವಾಡೆ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ನೌಕರರ ತಾಲೂಕು ಘಟಕದ ಅಧ್ಯಕ್ಷ ಲಿಂಗಾನಂದ ಮಹಾಜನ್‌ ಕಾರ್ಯಕ್ರಮ ಉದ್ಘಾಟಿಸಿದರು.

ಈ ವೇಳೆ ಉಮಾದೇವಿ ಧರಣೆ, ಶಿವರಾಜ ಪಾಟೀಲ್‌, ಭೀಮರಾವ್‌ ಶ್ರೀಗಿರೆ, ರೂಪಾದೇವಿ ಅಣದೂರೆ, ಮನೋಜ ಹಿರೇಮಠ, ವಿಜಯಲಕ್ಷ್ಮೀ ಸೊಲ್ಲಾಪುರೆ, ವಿಜಯಕುಮಾರ ಶೇಗೆದಾರ, ನಿಜಲಿಂಗಯ್ಯ ಸ್ವಾಮಿ, ವಿಶಾಲ ಸೊಲ್ಲಾಪುರೆ, ಜ್ಞಾನೋಬಾ ಹಂಡೆ ಇತರರಿದ್ದರು. ಮಹೇಶ ದೇಶಮುಖ ಸ್ವಾಗತಿಸಿದರು. ಭರತ ನಂದನವರ್‌ ವಂದಿಸಿದರು. ಹಾವಗಿರಾವ್‌ ಮಠಪತಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next