Advertisement
ಗತಿಸಿದ ಬಂಧುಗಳ ಅಸ್ಥಿಗಳನ್ನು ನದಿಯಲ್ಲಿ ವಿಸರ್ಜಿಸುವ ಭಕ್ತರು, ಬಳಿಕ ತೀರ್ಥಸ್ನಾನ ಮಾಡಿ, ತಾವು ಉಟ್ಟಿರುವ ಬಟ್ಟೆಗಳನ್ನು ಅಲ್ಲೇ ಎಸೆದು ಸಂಗಮ ಸ್ಥಳದಲ್ಲಿ ತ್ಯಾಜ್ಯ ರಾಶಿ ಬೀಳುವಂತೆ ಮಾಡಿದ್ದಾರೆ. ಅಸ್ಥಿಗಳನ್ನು ತಂದ ಪ್ಲಾಸ್ಟಿಕ್ ಕರಡಿಗೆ, ಉಟ್ಟಿರುವ ಹಳೆಯ ವಸ್ತ್ರ ಇತ್ಯಾದಿಗಳನ್ನು ಅಲ್ಲೇ ಬಿಸುಡುತ್ತಿರುವ ಕಾರಣ ಬೇಸಗೆಯಲ್ಲಿ ನದಿಯಲ್ಲಿ ನೀರಿನ ಹರಿವೂ ಇಲ್ಲದೆ ತ್ಯಾಜ್ಯಗಳ ರಾಶಿಯೇ ಕಾಣುತ್ತಿತ್ತು. ಪರಿಸರದ ಅಸ್ವತ್ಛತೆ ಹಾಗೂ ದುರ್ನಾತಕ್ಕೂ ಕಾರಣವಾಗಿತ್ತು.
ಭಕ್ತರು ಕ್ಷೇತ್ರದ ಪಾವಿತ್ರ್ಯ ಕಾಪಾಡಬೇಕು. ನದಿಯಲ್ಲಿ ಬಟ್ಟೆ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆದು ಹಾಳು ಮಾಡಬಾರದು ಎಂದು ಸ್ಕೌಟ್ ವಿದ್ಯಾರ್ಥಿ ಅನಿಕೇತ್ ಕುಮಾರ್ ಮನವಿ ಮಾಡಿದ್ದಾರೆ.