ಕಟಪಾಡಿ: ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನು ಉತ್ತುಂಗಕ್ಕೇರಿಸಬಲ್ಲ ಪ್ರಜೆಗಳು. ದೇಶದ ಭವಿಷ್ಯ ಭದ್ರವಾಗಿರಿಸಿಕೊಳ್ಳಬೇಕಾದ ಗುರುತರ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಕೈಯಲ್ಲಿದೆ. ಆ ನಿಟ್ಟಿನಲ್ಲಿ ಉತ್ತಮ ಶಿಕ್ಷಣ ಪಡೆದು ಶ್ರೇಷ್ಠ ಸಾಧನೆಯ ಮೂಲಕ ಸಾಧಕರಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿರಿ ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಹೇಳಿದರು.
ಅವರು ನ.16ರಂದು ಕಟಪಾಡಿ ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಪೊಲಿಪು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಂಡರೀನಾಥ ಎಸ್. ಮಾತನಾಡಿ, ಪ್ರಸ್ತುತ ಕಲುಷಿತಗೊಂಡಿರುವ ಕಾಲಘಟ್ಟದಲ್ಲಿ ನಿಮ್ಮ ಹೆತ್ತವರಿಗೆ ಬಿ.ಪಿ., ಶುಗರ್ ಗಿಫ್ಟ್ ಕೊಡುವ ವಿದ್ಯಾರ್ಥಿಗಳು ನೀವಾಗ ಬಾರದು. ದೇಹಾರೋಗ್ಯ, ಮಾನಸಿಕ ದೃಢತೆಯನ್ನು ಕಾಪಾಡಿಕೊಂಡು ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಿರಿ. ಮನೆಯಲ್ಲಿ ಕಾಯುತ್ತಿರುವ ಪೋಷಕರಿಗಾಗಿ ಸಂಚಾರದ ಸಂದರ್ಭವೂ ಸುರಕ್ಷತೆಗೆ ಕಾಲೇಜ್ ವಿದ್ಯಾರ್ಥಿಗಳು ಹೆಚ್ಚಿನ ಗಮನವನ್ನು ಹರಿಸಬೇಕಾದ ತೀರಾ ಆವಶ್ಯಕತೆ ಇದೆ. ಇಲಾಖಾ ನಿಯಮಾನುಸಾರ ಪರೀಕ್ಷೆಯನ್ನು ಸಮರ್ಥವಾಗಿ ನಿಭಾಯಿಸಿ ಸಾಧಕ ವಿದ್ಯಾರ್ಥಿಗಳಾಗಿರಿ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸಂಚಾಲಕ ಕೆ. ಸತ್ಯೇಂದ್ರ ಪೈ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಜೊತೆ ಸಮಾಜಮುಖೀ ಸೇವೆಯಲ್ಲಿ ಯೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಪ್ರಯತ್ನ ಬಹಳ ಮುಖ್ಯ ಎಂದರು.
ಕಾಲೇಜಿನ ಮೇಲ್ವಿಚಾರಕ ಕೆ. ನಿತ್ಯಾನಂದ ಶೆಣೆ„ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ|ದಯಾನಂದ ಪೈ ಸ್ವಾಗತಿಸಿದರು.
ಉಪನ್ಯಾಸಕರುಗಳಾದ ನವೀನ್ ಕೊರೆಯ, ಗೌತಮ್ ಕಾಮತ್ ಬಹುಮಾನ ವಿಜೇತರನ್ನು ಪರಿಚಯಿಸಿದರು. ಲಂಬೋದರ ಡಿ.ಕೆ. ವಂದಿಸಿದರು. ಬನ್ಸೋಡೆ ದಿಲೀಪ್ ಮಾಣಿಕ್ ಗೌರವಿಸಿದರು. ಬಿ. ಭಾಸ್ಕರ ಕಾಮತ್ ಕಾರ್ಯಕ್ರಮ ನಿರೂಪಿಸಿದರು.