ಕೊಳ್ಳೇಗಾಲ: ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ವಿಭಾಗ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಆಯ್ಕೆಯಾಗಿ ತಾಲೂಕಿಗೆ ಕೀರ್ತಿ ತರಬೇಕು ಎಂದು ಶಾಸಕ ಎನ್.ಮಹೇಶ್ ಹೇಳಿದರು. ಜಿಲ್ಲಾ ಪಂಚಾಯಿತಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜು ಕ್ರೀಡಾದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ 2019-20ನೇ ಕ್ರೀಡೆಯನ್ನು ಗುಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದು.
ಸ್ನೇಹ ಮನೋಭಾವವಿರಲಿ: ಕ್ರೀಡೆಯಲ್ಲಿ ಭಾಗಿ ಯಾದ ಕ್ರೀಡಾಪಟುಗಳು ಸ್ನೇಹ ಮನೋಭಾವದಿಂದ ಆಟ ಆಡಬೇಕು. ಗೆದ್ದ ಕ್ರೀಡಾಪಟುಗಳು ಸೋತ ಕ್ರೀಡಾಪಟುಗಳನ್ನು ಸ್ವಾಗತಿಸಬೇಕು. ಮತ್ತಷ್ಟು ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಕ್ರೀಡಾಕೂಟ ಯಶಸ್ವಿಗೊಳಿಸಿ: ಕ್ರೀಡಾಪಟುಗಳ ಸಾಮರ್ಥ್ಯ ಮೆಚ್ಚಬೇಕು. ಕ್ರೀಡೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರ ಜಗತøಸಿದ್ಧ ದಸರಾ ಕ್ರೀಡಾ ಕೂಟವನ್ನು ಆಯೋಜನೆ ಮಾಡಲಾಗಿದೆ. ಪ್ರತಿ ಯೊಂದು ವಿಭಾಗದಲ್ಲೂ ಭಾಗಿಯಾಗಿ ಕ್ರೀಡಾ ಕೂಟ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸೀಗನಾಯಕ ಮಾತನಾಡಿ, ಕ್ರೀಡೆ ಆರೋಗ್ಯಕ್ಕೆ ಉಪಯುಕ್ತವಾಗಿದ್ದು, ವಿದ್ಯಾರ್ಥಿ ಗಳು ಹೆಚ್ಚು ಕ್ರೀಡೆಗಳಲ್ಲಿ ಭಾಗಿಯಾಗಬೇಕು ಮತ್ತು ಕಾಲೇಜು, ತಾಲೂಕಿಗೆ ಕೀರ್ತಿ ತರಬೇಕೆಂದರು.
ಹೇಳಿಕೆ: ಕಳೆದ ಸೋಮವಾರ ಬೀರೇಶ್ವರ ಸಮು ದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆಗೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ಕಾರ್ಯಕ್ರಮದ ದಿನದಂದು ಬೆಂಗಳೂರಿನಲ್ಲಿ ಎಸ್ ಸಿಪಿ ಮತ್ತು ಟಿಎಸ್ಪಿ ಯೋಜನೆಯ ಸಭೆಯಲ್ಲಿ
ಪಾಲ್ಗೊಳ್ಳಬೇಕಾಗಿದ್ದ ಕಾರಣ ಸಭೆಗೆ ಗೈರು ಹಾಜರಾ ಗಿದ್ದು, ಇದಕ್ಕೆ ಅನ್ಯ ರೀತಿಯ ಭಾವನೆಯಲ್ಲಿ ತಿಳಿಯ ಬಾರದು ಎಂದು ಶಾಸಕ ಮಹೇಶ್ ಹೇಳಿದರು.
ಪ್ರತಿಕ್ರಿಯೆ: ಇತ್ತೀಚಿಗೆ ರಾಜ್ಯ ಬಿಎಸ್ಪಿ ಅಧ್ಯಕ್ಷ ಕೃಷ್ಣ ಮೂರ್ತಿರವರು ನನ್ನ ಉಚ್ಚಾಟನೆಯ ಬಗ್ಗೆ ಮಾತನಾಡಿದ್ದು, ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಹೇಳಿಕೆಗೆ ಸರಿಸಮಾನರಾದರೂ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.
ಮಂಜೂರು: ವಿವಿಧ ಕಾಮಗಾರಿಗಳ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ ಮೇರೆಗೆ ಮಂಜೂರು ಮಾಡಿದ್ದು, 10 ಕೋಟಿ ರೂ.ವನ್ನು ರಸ್ತೆ ಸಾರಿಗೆ ಬಸ್ ನಿಲ್ದಾಣದ ಮೇಲಸ್ತು ಕಾಮಗಾರಿಗೆ ನೀಡಲಾಗುವುದು. ಉಳಿದ ಅನುದಾನವನ್ನು ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯಲ್ಲಿರುವ ಕಾಂಕ್ರೀಟ್ ಲಿಂಕ್ ಬಳಕೆಗೆ ಖರ್ಚು ಮಾಡಲಾಗುವುದು ಎಂದು ತಿಳಿಸಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ನಾಗರಾಜು, ತಾಪಂ ಉಪಾಧ್ಯಕ್ಷೆ ಲತಾ, ನಗರಸಭಾ ಸದಸ್ಯರಾದ ನಾಸೀರ್ ಷರೀಫ್, ಜಯಮೇರಿ, ಜೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಉಮೇಶ್, ಯುವ ಸಬಲೀಕರಣ
ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಚೆಲುವಯ್ಯ ಇತರರು ಇದ್ದರು.