Advertisement

ತಂದೆಯ ಸಾವಿನ ದುಃಖದ ನಡುವೆಯೂ ಬಿಎ ಪರೀಕ್ಷೆ ಬರೆದ ವಿದ್ಯಾರ್ಥಿನಿ

10:00 PM Jun 01, 2022 | Team Udayavani |

ಚಿಕ್ಕಬಳ್ಳಾಪುರ: ಮದುವೆ ನಿಶ್ಚಿತವಾಗಿ ವಧು-ವರರು ಪರೀಕ್ಷಾ ಕೇಂದ್ರಗಳಿಗೆ ಬಂದು ಪರೀಕ್ಷೆ ನೀಡಿರುವ ಘಟನೆಗಳು ಆಗಿಂದಾಗ ಸಂಭವಿಸುತ್ತವೆ. ಆದರೆ ಗೌರಿಬಿದನೂರು ತಾಲೂಕಿನ ಅಲ್ಲೀಪುರದಲ್ಲಿ ತಂದೆಯ ಸಾವಿನ ದುಃಖದ ನಡುವೆಯೂ ವಿದ್ಯಾರ್ಥಿನಿಯೊಬ್ಬಳು ಬಿಎ ಪರೀಕ್ಷೆ ಬರೆದು ಮಾದರಿಯಾಗಿದ್ದಾರೆ.

Advertisement

ಒಂದು ಕಡೆ ತಂದೆಯನ್ನು ಕಳೆದಕೊಂಡ ದುಃಖ ಮತ್ತೊಂದಡೆ ಜೀವನವನ್ನು ರೂಪಿಸುವ ಶಿಕ್ಷಣ ಮತ್ತು ಪರೀಕ್ಷೆ ಇಂತಹ ಪರಿಸ್ಥಿತಿಯಲ್ಲಿ ತಂದೆ ಸಾವಿನ ವಿಷಯದಿಂದ ಪ್ರಜ್ಞೆ ತಪ್ಪಿದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲೀಪುರದ ನಿವಾಸಿ ಶಾಹೀನ್ ಅಲೀ ಅವರ ಪುತ್ರಿ ಉಮ್ಮೇ ಕುಲಸೂಂ ಎಂಬಾಕೆ ಎಚ್ಚರಗೊಂಡು ತಂದೆಯ ಅಗಲುವಿಕೆಯ ದುಃಖದಲ್ಲಿಯೂ ಗೌರಿಬಿದನೂರು ನಗರದ ನ್ಯಾಷನಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ಪರೀಕ್ಷೆಯನ್ನು ಬರೆದು ಇತರರಿಗೆ ಮಾದರಿಯಾಗಿದ್ದಾರೆ.

ತಂದೆಯ ಸಾವಿನ ಸುದ್ದಿಯಿಂದ ವಿದ್ಯಾರ್ಥಿನಿ ಪ್ರಜ್ಞೆ ತಪ್ಪಿದ್ದಳು, ಮನೆಗೆ ತೆರಳಿದ ಕಾಲೇಜಿನ ಪ್ರಾಂಶುಪಾಲರು, ಉಪಪ್ರಾಂಶುಪಾಲರು ದುಃಖದಲ್ಲಿ ಪ್ರಜ್ಞೆ ತಪ್ಪಿದ ವಿದ್ಯಾರ್ಥಿನಿಯನ್ನು ನೋಡಿ ವಾಪಸ್ ಬಂದಿದ್ದರು. ಸ್ವಲ್ಪ ಸಮಯದ ಬಳಿಕ ಎಚ್ಚರಗೊಂಡ ವಿದ್ಯಾರ್ಥಿನಿ ಉಮ್ಮೇಕುಲಸೂಮ್ , ಯಾವುದೇ ಕಾರಣಕ್ಕೂ ತನ್ನ ಶೈಕ್ಷಣಿಕ ಪ್ರಗತಿಗೆ ತೊಡಕಾಗಬಾರದು ಮತ್ತೆ ಪರೀಕ್ಷೆಯನ್ನು ಬರೆಯದೆ ಇರಬಾರದು ಎಂಬ ಗಟ್ಟಿ ಮನಸ್ಸು ಮಾಡಿ ಮನೆಯಲ್ಲಿ ತಂದೆಯ ಶವವನ್ನು ಬಿಟ್ಟು ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿ ಧೃಡ ಸಂಕಲ್ಪದೊಂದಿಗೆ ಬಿಎ ಪರೀಕ್ಷೆ ಬರೆದಿದ್ದಾರೆ.

ಪರೀಕ್ಷೆಗೆ ಹೆಸರು ನೊಂದಣಿ ಮಾಡಿಸಿಕೊಂಡರೂ ಸಹ ಕೆಲವರು ಪರೀಕ್ಷೆಯಿಂದ ಹೊರಗೆ ಉಳಿಯುತ್ತಾರೆ. ಆದರೆ ಅಲೀಪುರದ ಉಮ್ಮೇಕುಲಸೂಂ ದುಃಖದಲ್ಲಿಯೂ ಸಹ ಪರೀಕ್ಷೆ ನೀಡಿ ಶಿಕ್ಷಣ ಪ್ರೇಮವನ್ನು ಮೆರೆದಿದ್ದಾರೆ. ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕ ವರ್ಗದವರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಿದ್ಯಾರ್ಥಿನಿಯ ನಡೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next