ಗಂಗಾವತಿ : ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ರಾಜಕೀಯ ಮಾಡಬೇಡಿ. ಮೊಟ್ಟೆ ಕೊಡಬೇಡಿ ಎಂದು ಹೇಳಿದರೆ ನಾವು ನಿಮ್ಮ ಮಠಕ್ಕೆ ಬಂದು ಕುಳಿತು ಮಠದಲ್ಲಿಯೇ ಮೊಟ್ಟೆ ತಿಂತೀವಿ. ಏನ್ಮಾಡ್ತಿರೋ ನೋಡ್ತಿವಿ ಎಂದು ಶಾಲಾ ವಿದ್ಯಾರ್ಥಿನಿಯೊಬ್ಬಳು ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಮೊಟ್ಟೆ ವಿತರಣೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ರಾಜ್ಯದ ಕೆಲ ಮಠಾಧೀಶರು ನೀಡಿದ ಹೇಳಿಕೆ ಖಂಡಿಸಿ ಎಸ್ಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ನಾವು ತತ್ತಿನೂ ತಿಂತೀವಿ, ಬಾಳೆಹಣ್ಣು ತಿಂತೀವಿ, ನೀವು ಬ್ಯಾಡ ಅಂದ್ರ ನಿಮ್ಮ ಮಠಕ್ಕೆ ಬಂದು ತಿಂತೀವಿ, ನಾವು ತತ್ತಿ ತಿಂದ್ರೂ ಜಳಕ ಮಾಡಿ ನಿಮ್ಮ ಮಠಕ್ಕ ಬರುತ್ತೀವಿ, ನಾವು ಬಡವರು, ಅದಕ್ಕೆ ಸರಕಾರಿ ,ಶಾಲ್ಯಾಗ ಓದ್ಕ ಅತ್ತೀವಿ, ನಾವು ತತ್ತಿ ತಿನ್ನಲಿಲ್ಲಂದ್ರ ಸತ್ತು ಹೋಕ್ಕೀವಿ, ನಿಮಗ ನಾವ್ ಸಾಯೋದು ಬೇಕೈತೇನು, ನೀವು ಹಿಂಗ ವಿರೋಧಿಸಿದ್ರ ಇಡೀ ಗಂಗಾವತಿ ತಾಲೂಕಿನ ವಿದ್ಯಾರ್ಥಿಗಳು ನಿಮ್ಮ ಮಠಕ್ಕೆ ಬರುತ್ತೀವಿ, ಆಗ ಏನಮಾಡ್ತೀರಿ, ಹಿಂಗೆ ಮೊಟ್ಟೆ ವಿರೋಧಿಸುವ ಸ್ವಾಮೀಜಿಗಳ ವಿರುದ್ದ ಕಿಡಿ ಕಾರಿದ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿನಿ, ಗಂಗಾವತಿಯಲ್ಲಿ ವಿದ್ಯಾರ್ಥಿನಿಯಿಂದ ಆಕ್ರೋಶ, ಗಂಗಾವತಿಯ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ, ವಿದ್ಯಾರ್ಥಿನಿ ಮಾತನಾಡಿರೋವ ಫುಲ್ ವೈರಲ್ ಆಗಿದೆ.
ಈ ಸಂದರ್ಭದಲ್ಲಿ ಬಾಲಕಿಯು ಆಕ್ರೋಶದ ನುಡಿಗಳನ್ನು ಹಾಡಿದ್ದು ಸಾಮಾಜಿಕ ಜಾಲತಣಾದಲ್ಲಿ ಪರ -ವಿರೋಧ ಚರ್ಚೆಗಳು ನಡೆಯುತ್ತಿವೆ.