Advertisement

ಅಡ್ಯಾರ್‌ ಪದವು : ಯುವಕನಿಗೆ ಇರಿದು ದುಷ್ಕರ್ಮಿಗಳು ಪರಾರಿ

07:15 PM Jul 07, 2017 | Karthik A |

ಮಂಗಳೂರು: ಬಿ.ಸಿ.ರೋಡ್‌ ಸಮೀಪದ ಅಡ್ಯಾರ್‌ ಪದವಿನಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಘಟನೆಯಲ್ಲಿ ಕೇರಳ ಮೂಲದ ವಿದ್ಯಾರ್ಥಿ ಶಾಜೀದ್‌ ಎಂಬಾತನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದೆ.

Advertisement

ಗಾಯಾಳು ವಿದ್ಯಾರ್ಥಿ ಶಾಜೀದ್‌ ತನ್ನ ಸ್ನೇಹಿತನ ಜೊತೆಯಲ್ಲಿ ಬೈಕ್‌ ನಲ್ಲಿ ಹೋಗುತ್ತಿದ್ದಾಗ ಇವರ ಬೈಕ್‌ ಅನ್ನು ನಿಲ್ಲಿಸಿದ ದುಷ್ಕರ್ಮಿಗಳ ಗುಂಪು ಪೆಟ್ರೋಲ್‌ ಕೇಳುವ ನೆಪದಲ್ಲಿ ಏಕಾಏಕಿ ಹಲ್ಲೆ ನಡೆಸಿದೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.

ಕಾಂಗ್ರೆಸ್‌ ಸಮಾವೇಶದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಗಳೂರಿಗೆ ಬಂದಿರುವ ಕಾರಣ ಎಲ್ಲೆಡೆ ಬಿಗು ಪೊಲೀಸ್‌ ಬಂದೋಬಸ್ತ್ ಇದ್ದರೂ ಸಹ ಈ ಘಟನೆ ನಡೆದಿರುವುದು ಪರಿಸರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಘಟನೆಗೆ ನಿರ್ಧಿಷ್ಟ ಕಾರಣ ಇನ್ನಷ್ಟೇ ತಿಳಿದುಬರಬೇಕಿದ್ದು ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next