Advertisement

ಬೆಂಗಳೂರಿಗೆ ಸುರಕ್ಷಿತವಾಗಿ ತಲುಪಿದ ಜಿಲ್ಲೆಯ ವಿದ್ಯಾರ್ಥಿ ಸಿದ್ಧೇಶ್

08:02 PM Mar 02, 2022 | Team Udayavani |

ಚಾಮರಾಜನಗರ: ರಷ್ಯಾ ಆಕ್ರಮಣಕ್ಕೊಳಗಾಗಿರುವ ಉಕ್ರೇನ್‌ನಲ್ಲಿದ್ದ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳ ಪೈಕಿ, ಒಡೆಯರಪಾಳ್ಯದ ಸಿದ್ದೇಶ್ ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದಾರೆ. ಇಬ್ಬರು ಹಂಗರಿ ದೇಶ ತಲುಪಿದ್ದು, ಇನ್ನೋರ್ವ ವಿದ್ಯಾರ್ಥಿನಿ ಉಕ್ರೇನ್‌ನ ಖಾರ್ಕಿವ್‌ನ ಬಂಕರ್‌ನಲ್ಲಿದ್ದಾರೆ.

Advertisement

ಹಂಗರಿಯ ಬುಡಾಪೆಸ್‌ಟ್ ತಲುಪಿದ್ದ ಸಿದ್ದೇಶ್ ಮಂಗಳವಾರ ಹೊರಟು, ಅಲ್ಲಿಂದ ಬುಧವಾರ ಬೆಳಿಗ್ಗೆ ನವದೆಹಲಿ ತಲುಪಿದ್ದು, ಸಂಜೆ 7 ಗಂಟೆಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಸಿದ್ಧೇಶ್ ಅವರನ್ನು ಅವರ ತಂದೆ ನಾಗಭೂಷಣ್, ಜನಾಶ್ರಯ ಟ್ರಸ್‌ಟ್ ನ ಅಧ್ಯಕ್ಷ ಹನೂರು ಬಿಜೆಪಿ ಮುಖಂಡ ವೆಂಕಟೇಶ್ ಅವರು ಬರಮಾಡಿಕೊಂಡರು.

ಹನೂರಿನ ಪತ್ರಕರ್ತ ರವಿ ಅವರ ಪುತ್ರಿ ಸ್ವಾತಿ ಹಂಗರಿ ರಾಜಧಾನಿ ಬುಡಾಪೆಸ್‌ಟ್ ತಲುಪಿದ್ದು ಸುರಕ್ಷಿತವಾಗಿದ್ದೇನೆ ಎಂದು ಮನೆಯವರಿಗೆ ತಿಳಿಸಿದ್ದಾರೆ. ಕೊಳ್ಳೇಗಾಲದ ಭೂಮಿಕಾ ರೈಲಿನಲ್ಲಿ ಹಂಗರಿಯತ್ತ ಪ್ರಯಾಣ ಬೆಳೆಸಿದ್ದಾರೆ.

ಇದನ್ನೂ ಓದಿ : ಹುಚ್ಚುನಾಯಿ ದಾಳಿಗೆ 50ಕ್ಕೂ ಹೆಚ್ಚು ಮಂದಿಗೆ ಗಾಯ : ಹುಣಸೂರಿನಲ್ಲಿ ನಡೆದ ಘಟನೆ

Advertisement

ಗುಂಡ್ಲುಪೇಟೆ ತಾಲೂಕಿನ ಕಮರಹಳ್ಳಿಯ ಕಾವ್ಯಾ ಮಾತ್ರ ಉಕ್ರೇನಿನ ಖಾರ್ಕಿವ್ ನಗರದಲ್ಲಿ ಬಂಕರ್‌ನಲ್ಲಿದ್ದಾರೆ. ಖಾರ್ಕಿವ್‌ನಲ್ಲಿ ಮಂಗಳವಾರ ಮೃತಪಟ್ಟ ನವೀನ್ ಕಾವ್ಯಾಳ ಸಹಪಾಠಿ ಎಂದು ಕುಟುಂಬದವರು ತಿಳಿಸಿದ್ದಾರೆ. ಆ ಘಟನೆಯಿಂದ ಕಾವ್ಯಾ ಮನೆಯವರು ಆತಂಕಗೊಂಡಿದ್ದಾರೆ. ಕಾವ್ಯಾ ಬಂಕರ್‌ನಲ್ಲಿದ್ದೇನೆ ಮೆಸೇಜ್ ಮಾಡಿದ್ದಾಳೆ. ಬಂಕ್‌ನಿಂದ ಹೊರ ಹೋಗಲಾಗುತ್ತಿಲ್ಲ. ಊಟ ತಿಂಡಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ ಎಂದು ಕಾವ್ಯಾ ತಿಳಿಸಿದ್ದಾಳೆ ಎಂದು ಕುಟುಂಬದವರು ಹೇಳಿದರು.

ಹನೂರಿನ ಸ್ವಾತಿ ಅವರ ತಂದೆ ಪತ್ರಕರ್ತರಾಗಿದ್ದು ಅವರ ಮನೆಗೆ ಗ್ರೇಡ್ 2 ತಹಶೀಲ್ದಾರ್ ರಾಜಾಕಾಂತ್ ಅವರು ಬುಧವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಅವರು ಮಾತನಾಡಿ, ನಿಮ್ಮ ಮಗಳನ್ನು ಮನೆಗೆ ಕರೆ ತರುವುದು ನಮ್ಮ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದು, ಅಗತ್ಯ ಸೂಚನೆ ನೀಡಿದ್ದಾರೆ. ನಿಮ್ಮ ಮಗಳು ಸ್ವಾತಿ ಅವರು ಬುಡಾಪೆಸ್‌ಟ್ ನಗರದಲ್ಲಿ ಸುರಕ್ಷಿತವಾಗಿದ್ದಾರೆ ಎಂದರು.

ಸ್ವಾತಿ ಮತ್ತು ಭೂಮಿಕಾ ಇನ್ನೆರಡು ದಿನಗಳಲ್ಲಿ ಭಾರತ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next