Advertisement
ಗ್ರಾಮೀಣ ಭಾಗದ ಸರಕಾರಿ ಕನ್ನಡ ಶಾಲೆಗಳಲ್ಲಿ ಹಲವಾರು ಕಾರಣಗಳಿಂದ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದ್ದು ಈ ಭಾಗದ ಖಾಸಗಿ ಶಾಲೆ ಗಳಲ್ಲಿಯೂ ವಿದ್ಯಾರ್ಥಿಗಳ ನೋಂದಾವಣೆಗೆ ಹರ ಸಾಹಸ ಪಡಲಾಗುತ್ತಿದೆ.
Related Articles
Advertisement
ಶಾಲೆಗಳಿಗೆ ವಿದ್ಯಾರ್ಥಿಗಳನ್ನು ನೋಂದಾಯಿಸಲು ಪೋಷಕರಿಗೆ ವಿವಿಧ ಆಮಿಷಗಳನ್ನು ಶಾಲೆಯ ಆಡಳಿತ ಮಂಡಳಿ ಶಿಕ್ಷಕರ ಮೂಲಕ ನೀಡುತ್ತಿದೆ. ತಮ್ಮ ಶಾಲೆಗಳಲ್ಲಿ ವಿವಿಧ ತರಬೇತಿಗಳಿವೆ, ಶುಲ್ಕ ರಿಯಾಯಿತಿ ಇದೆ, ಬಸ್ಸು ಸೌಲಭ್ಯ ಇದೆ, ಉತ್ತಮ ಫಲಿತಾಂಶ ಬರುತ್ತಿದೆ ಎಂದು ಮೂಲಕ ಪೋಷಕರ ಮನವೊಲಿಸುತ್ತಿದ್ದಾರೆ. ಆದರೆ ಯಾವ ಶಾಲೆ ಎಂಬ ವಿಚಾರದಲ್ಲಿ ಪೋಷಕರು ದ್ವಂದ್ವಕ್ಕೊಳಗಾಗುತ್ತಿದ್ದಾರೆ.
ಸರಕಾರಿ ಶಾಲೆಗಳಿಗೆ ಭಾರೀ ಹಿನ್ನಡೆ:
ನಾಯಿ ಕೊಡೆಗಳಂತೆ ಒಂದೇ 4-5 ಕಿಲೋಮೀಟರ್ ವ್ಯಾಪ್ತಿಯೊಳಗೇ ಹಲವಾರು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ತೆರೆಯಲ್ಪಡುತ್ತಿರುವುದರ ಜತೆ ಪೋಷಕರೂ ಅವುಗಳಿಗೆ ಮರುಳಾಗುತ್ತಿರುವುದರಿಂದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ವಿದ್ಯಾರ್ಥಿ ನೋಂದಾವಣೆಯಲ್ಲಿ ಭಾರೀ ಹಿನ್ನಡೆ ಉಂಟಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ ಸರಕಾರ ಹಲವಾರು ಸೌಲಭ್ಯಗಳನ್ನು ನೀಡಿದರೂ ಕ್ವಾರಿಗಳ ವಲಸಿಗ ವಿದ್ಯಾರ್ಥಿಗಳು ಮಾತ್ರ ಇವುಗಳನ್ನು ಸದುಪಯೋಗಪಡಿಸಿಕೊಂಡು ಸರಕಾರಿ ಶಾಲೆಗಳಿಗೆ ಸೇರುತ್ತಿದ್ದಾರೆ. ಈ ಶಾಲೆಗಳನ್ನುಳಿಸಲು ಶಿಕ್ಷಕರು , ಆಯಾ ಶಾಲೆಗಳ ಹಳೆ ವಿದ್ಯಾರ್ಥಿಗಳು ಹರಸಾಹಸ ಪಡುತ್ತಿದ್ದಾರೆ. ಈ ಶಾಲೆಗಳ ಶಿಕ್ಷಕರೂ ಮನೆ ಮನೆ ಭೇಟಿಗೆ ಮುಂದಾಗಿದ್ದಾರೆ.