ಬೆಂಗಳೂರು : ಟಿಕ್ ಟಾಕ್ ವ್ಯಾಮೋಹಕ್ಕೆ ಹತ್ತನೇ ತರಗತಿ ವಿದ್ಯಾರ್ಥಿನಿಯೋರ್ವಳು ಬಲಿಯಾದ ಘಟನೆ ಹನುಮಂತ ನಗರದಲ್ಲಿ ಶನಿವಾರ ನಡೆದಿದೆ.
ಹನುಮಂತ ನಗರದ 9ನೇ ರಸ್ತೆಯ ನಿವಾಸಿ ಪ್ರಿಯಾಂಕಾ(16) ಮೊಬೈಲ್ ವ್ಯಾಮೋಹಕ್ಕೆ ಬಲಿಯಾದ ವಿದ್ಯಾರ್ಥಿನಿ.
ಮೊಬೈಲ್ ನಲ್ಲಿ ಟಿಕ್ ಟಾಕ್ ವಿಡಿಯೋಗಳನ್ನೇ ಹೆಚ್ಚು ನೋಡುತ್ತಿದ್ದ ಪ್ರಿಯಾಂಕಾ ಶನಿವಾರ ಶಾಲೆಯಿಂದ ಬಂದವಳು ಅಮ್ಮನ ಮೊಬೈಲ್ ತೆಗೆದುಕೊಂಡು ತನ್ನ ಗೆಳತಿಯ ಮನೆಗೆ ಹೋಗಲು ಅಣಿಯಾಗಿದ್ದಳು. ಅದನ್ನು ತಿಳಿದ ತಾಯಿ ಮೊಬೈಲ್ ತೆಗೆದುಕೊಂಡು ಹೋಗಬಾರದೆಂದು ಬುದ್ದಿವಾದ ಹೇಳಿ ಮೊಬೈಲ್ ತೆಗೆದಿಟ್ಟರು.
ಇದರಿಂದ ಕೋಪಗೊಂಡ ಪ್ರಿಯಾಂಕಾ ಸ್ನೇಹಿತೆ ಮನೆಗೆ ಹೋಗದೆ ತನ್ನ ರೂಮಿಗೆ ಸೇರಿಕೊಳ್ಳುತ್ತಾಳೆ.
ಈ ಸಂದರ್ಭ ತಾಯಿ ದೇವಸ್ಥಾನಕ್ಕೆ ಹೋಗಿಬರುವುದಾಯಿ ಹೇಳಿ ಹೊರಟ ಸಮಯ ಪ್ರಿಯಾಂಕಾ ಕೊಠಡಿಯೊಳಗೆ ನೇಣಿಗೆ ಶರಣಾಗಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.