Advertisement
ವಿದ್ಯಾರ್ಥಿಗಳು ವಿವಿಧ ಇಲಾಖೆಗೆ ತೆರಳಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಗೃಹ ವ್ಯವಹಾರಗಳ ಸಚಿವಾಲಯ, ಭಾರತ ಸರಕಾರ ಮತ್ತು ಕರ್ನಾಟಕ ಸರಕಾರದ ಸಹಭಾಗಿತ್ವದಲ್ಲಿ ರಾಜ್ಯದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.
2010ರಲ್ಲಿ ಕೇರಳ ಸರಕಾರ ಅಲ್ಲಿನ ಶಾಲೆಗಳಿಗೆ ಈ ಯೋಜನೆ ಆರಂಭಿಸಿತ್ತು. ಅದರಂತೆ ಮಕ್ಕಳಲ್ಲಿ ನವ ನಾಗರಿಕ ಸಮಾಜದ ಸುಧಾರಣೆಗಾಗಿ ಜ್ಞಾನ, ಸಂವಿಧಾನ, ಕಾನೂನು ಅರಿವು ಮೂಡಿಸಿ ನಾಯಕತ್ವ, ಧೈರ್ಯ, ಆತ್ಮವಿಶ್ವಾಸ, ಸ್ವಯಂ ಶಿಸ್ತು, ಸಹಾನುಭೂತಿಯಂತಹ ನೈತಿಕ ಮೌಲ್ಯ ಬೆಳೆಸಿ ಸಾಮಾಜಿಕ ಸುಧಾರಣೆ ಮಾಡುವುದು ಇದರ ಉದ್ದೇಶವಾಗಿದೆ. ರಾಜ್ಯ ಮೀಸಲು ಪಡೆಯಿಂದ ಯೋಜನೆ
“ಸ್ಟೂಡೆಂಟ್ ಪೊಲೀಸ್ ಕೆಡೆಟ್ ‘ ಹೆಸರಿನಲ್ಲಿ ರಾಜ್ಯ ಮೀಸಲು ಪೊಲೀಸ್ ಪಡೆ ಈ ಯೋಜನೆ ರೂಪಿಸಿದೆ. ಸ್ಟೂಡೆಂಟ್ ಪೊಲೀಸ್ ಕೆಡೆಟ್ ತರಬೇತಿಗೆ ಸೇರ್ಪಡೆಗೊಂಡಿರುವ ವಿದ್ಯಾರ್ಥಿಗಳು ಈಗಾಗಲೇ ತಾವು ಪಡೆದುಕೊಳ್ಳುತ್ತಿರುವ ಮಾಹಿತಿಯನ್ನು ಸುತ್ತಮುತ್ತಲಿನ ಜನರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ತರಬೇತಿಯಿಂದ ಇತರ ವಿದ್ಯಾರ್ಥಿಗಳಲ್ಲೂ ಉತ್ಸಾಹ ಇದ್ದು, ತರಬೇತಿಗೆ ಸೇರಿಸಲು ಪಾಲಕ- ಪೋಷಕರಲ್ಲೂ ಆಸಕ್ತಿ ಬೆಳೆಯುತ್ತಿರು ವುದು ಸಾಮಾಜಿಕ, ಶೈಕ್ಷಣಿಕ ಬದಲಾವಣೆಗೆ ಕಾರಣವಾಗುತ್ತಿದೆ.
Related Articles
ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಸು, ಮಾನಸಿಕ ಮತ್ತು ದೈಹಿಕ ಸದೃಢತೆ, ಸ್ವಯಂ ರಕ್ಷಣಾ ಕಲೆ ಬಗ್ಗೆ ಪ್ರಾಯೋಗಿಕವಾಗಿ ತರಬೇತುಗೊಳಿಸಲಾಗುತ್ತದೆ. ಸಂಚಾರ ನಿಯಮಗಳು ಅಪರಾಧ ತಡೆಯುವುದರ ಬಗ್ಗೆ ತಿಳಿಸಲಾಗುತ್ತದೆ. ಸಮಾಜದಲ್ಲಿರುವ ದುಶ್ಚಟಗಳಾದ ಡ್ರಗ್ಸ್, ಅಫೀಮು, ಸಿಗರೇಟ್, ಗುಟ್ಕಾ, ಮದ್ಯಪಾನದಂತಹ ದುಶ್ಚಟಗಳ ನಿರ್ಮೂಲನೆ ಮಾಡುವ ಬಗ್ಗೆ ತರಬೇತಿ ನೀಡಲಾಗುತ್ತದೆ. ರಸ್ತೆ ಅಪಘಾತ, ಕಳ್ಳತನ, ಪ್ರಾಕೃತಿಕ ವಿಕೋಪದಂತಹ ತುರ್ತು ಪರಿಸ್ಥಿತಿಗಳಲ್ಲಿ ತತ್‌ಕ್ಷಣಕ್ಕೆ ಸಾರ್ವಜನಿಕರಿಗೆ ನೆರವಾಗುವುದು ಮತ್ತು ಕಾನೂನು ಜ್ಞಾನವಿಲ್ಲದವರಿಗೆ ಪೊಲೀಸ್ ಪ್ರಕರಣ ದಾಖಲಿಸಲು ಸಹಕರಿಸುವುದು, ಸ್ವತಃ ನಾಯಕತ್ವ ಗುಣ ಬೆಳೆಸಿಕೊಳ್ಳಲು ಈ ಕಾರ್ಯಕ್ರಮ ನೆರವಾಗಲಿದೆ. ಪೊಲೀಸ್ ಇಲಾಖೆಯ ಕಾರ್ಯವೈಖರಿ ಜತೆಗೆ ಶಾಸಕಾಂಗ, ಕಾರ್ಯಾಂಗಗಳ ಆಡಳಿತ ವ್ಯವಸ್ಥೆ ಕುರಿತೂ ಮೀಸಲು ಪೊಲೀಸ್ ಪಡೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡುತ್ತಿದ್ದಾರೆ.
Advertisement
ಕಾರ್ಯವೈಖರಿ ಮಾಹಿತಿಆಯ್ಕೆಯಾದ ಶಾಲೆಯಲ್ಲಿ 22 ಬಾಲಕರು, 22 ಬಾಲಕಿಯರು ಒಟ್ಟು 44 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಪೊಲೀಸ
ರಿಗೆ ನೀಡಲಾಗುವ ಪರೇಡ್, ಮಾರ್ಚಿಂಗ್, ಆತ್ಮ ರಕ್ಷಣೆಗೆ ಲಾಠಿ ಬಳಕೆ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ವಿವಿಧ ಪೊಲೀಸ್ ಠಾಣೆ, ಆಸ್ಪತ್ರೆ, ಬಾಲಮಂದಿರಗಳಿಗೆ ಕರೆದೊಯ್ದು ಕಾರ್ಯವೈಖರಿಯ ಮಾಹಿತಿ ನೀಡ
ಲಾಗುತ್ತಿದೆ ಎನ್ನುತ್ತಾರೆ ಎಡಿಶನಲ್ ಡ್ರಿಲ್ ಇನ್ಸ್‌ಪೆಕ್ಟರ್ ಸುರೇಶ್ ದೇವಾಡಿಗ ಅವರು. ಪ್ರತಿ ಶಾಲೆಗೂ ಒಬ್ಬೊಬ್ಬ ಎಡಿಐಗಳನ್ನು ನೇಮಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಆಯ್ಕೆಯಾದ ಶಾಲೆಗಳು
ಉಡುಪಿ ಜಿಲ್ಲೆಯ ಜವಾಹರ ನವೋದಯ ವಿದ್ಯಾಲಯ ಹೆಬ್ರಿ, ಕೇಂದ್ರೀಯ ವಿದ್ಯಾಲಯ ಉಡುಪಿ, ಸರಕಾರಿ ಪ.ಪೂ.ಕಾಲೇಜು ಗೋಳಿಯಂಗಡಿ, ಸರಕಾರಿ ಪ್ರೌಢಶಾಲೆ ಆವರ್ಸೆ, ಸರಕಾರಿ ಪ.ಪೂ.ಕಾಲೇಜು ಉಪ್ಪುಂದ, ಸರಕಾರಿ ಪ್ರೌಢಶಾಲೆ ಬಸ್ರೂರು, ಸರಕಾರಿ ಪ್ರೌಢಶಾಲೆ ಹಿರಿಯಡ್ಕ, ಸರಕಾರಿ ಪ್ರೌಢಶಾಲೆ ತಲ್ಲೂರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ. ಯಶಸ್ವಿ ಅನುಷ್ಠಾನ
ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಶಿಕ್ಷಣದ ಜತೆಗೆ ವಿದ್ಯಾರ್ಥಿಗಳು ಸರಕಾರಿ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಈ ಕಾರ್ಯಕ್ರಮ ಈಗ ಮತ್ತೆ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಉತ್ಸುಕತೆಯಿಂದ ಇದರಲ್ಲಿ ಭಾಗವಹಿಸುತ್ತಿದ್ದಾರೆ.
-ಎನ್.ವಿಷ್ಣುವರ್ಧನ್,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಉಡುಪಿ – ಪುನೀತ್ ಸಾಲ್ಯಾನ್