Advertisement
ಏನಿದು ಘಟನೆ?: ಹನೂರು ತಾಲೂಕಿನ ಮೀಣ್ಯಂ ಉನ್ನತೀಕರಿಸಿದ ಸರ್ಕಾರಿ ಶಾಲೆಯಲ್ಲಿ ಪ್ರಭಾರಮುಖ್ಯ ಶಿಕ್ಷಕರಾಗಿ ಬಾಲು ನಾಯ್ಕ ಮತ್ತು ಸಹಶಿಕ್ಷಕರಾಗಿ ಮಹದೇವ ಕಾರ್ಯನಿರ್ವಹಿಸುತ್ತಿದ್ದರು.ಪ್ರಾರಂಭದಲ್ಲಿ ಅತ್ಯುತ್ತಮ ಬಾಂಧವ್ಯದೊಂದಿಗೆ ಕೆಲಸ ನಿರ್ವಹಿಸುತ್ತಿದ್ದ ಶಿಕ್ಷಕರಲ್ಲಿ ಕಾಲ ಕ್ರಮೇಣ ವೃತ್ತಿ ವೈಮನಸ್ಸು ಪ್ರಾರಂಭವಾಗಿದೆ. ಕೊನೆಗೆ ವೃತ್ತಿ ವೈಷಮ್ಯದಿಂದ ಆ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನೇ 2 ಗುಂಪುಗಳನ್ನಾಗಿ ಮತ್ತು ಆ ವಿದ್ಯಾರ್ಥಿಗಳ ಪೋಷಕರನ್ನೂ 2 ಗುಂಪುಗಳನ್ನಾಗಿ ವಿಂಗಡಿಸುವಷ್ಟರ ಮಟ್ಟಿಗೆ ತಲುಪಿತ್ತು. ಈ ವೇಳೆ ಕೆಲ ಗ್ರಾಮಸ್ಥರುಪ್ರಭಾರ ಮುಖ್ಯ ಶಿಕ್ಷಕ ಬಾಲು ನಾಯ್ಕ ವಿರುದ್ಧ ದೂರು ಸಲ್ಲಿಸಿದ್ದರು. ಹೀಗಾಗಿ ತನಿಖೆ ಕೈಗೊಂಡಿದ್ದಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಭಾರ ಮುಖ್ಯ ಶಿಕ್ಷಕನನ್ನು ಕಳೆದ 3 ತಿಂಗಳ ಹಿಂದೆಯೇ ಬೇರೆಶಾಲೆಗೆ ನಿಯೋಜಿಸಿ ಆದೇಶಿಸಿದ್ದರು. ಇದೇ ಸಂದರ್ಭದಲ್ಲಿ ಮತ್ತೆ ಕೆಲವರು ಸಹ ಶಿಕ್ಷಕ ಮಹದೇವ ಹಾಜರಾತಿಯನ್ನು ತಿದ್ದಿದ್ದಾನೆ ಎಂದು ದೂರು ನೀಡಿದ್ದರು.
Related Articles
Advertisement
ಶಿಕ್ಷಕನನ್ನು ಸುತ್ತುವರಿದು ಗೋಳಾಡಿದ ವಿದ್ಯಾರ್ಥಿಗಳು: ಸಹ ಶಿಕ್ಷಕ ಮಹದೇವ ಅವರ ವರ್ಗಾವಣೆಯಿಂದ ಕಂಗಾಲಾದ ಕೆಲ ವಿದ್ಯಾರ್ಥಿಗಳು, ಅವರನ್ನು ಸುತ್ತುವರಿದು ಅಳುತ್ತಿದ್ದರು. ಯಾವುದೇ ಕಾರಣಕ್ಕೂ ಶಾಲೆ ಬಿಟ್ಟು ತೆರಳದಂತೆ ಗೋಗರೆಯುತ್ತಿದ್ದರು. ಈ ವೇಳೆ ಶಿಕ್ಷಕಮಹದೇವ ಕೂಡ ಕಣ್ಣೀರು ಹಾಕಿದ್ದರು. ಈ ಸಂಬಂಧ ಕೆಲ ಗ್ರಾಮಸ್ಥರು, ಮಹದೇವ ಅವರು ಕನ್ನಡ, ಆಂಗ್ಲ ಭಾಷೆ ಬೋಧನೆ ಮಾಡುವುದರ ಜೊತೆಗೆ ಶಾಲೆಯಲ್ಲಿ ದೈಹಿಕ ಶಿಕ್ಷಕರು ಇಲ್ಲದ ಹಿನ್ನೆಲೆ ಆಟೋಟಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು. ಅಲ್ಲದೆ, ಶಾಲೆಯ ಬಿಸಿಯೂಟ ವಿಭಾಗವನ್ನು ಸಮರ್ಥವಾಗಿನಿಭಾಯಿಸುತ್ತಾ ವಿದ್ಯಾರ್ಥಿಗಳಿಗೆ ಶುಚಿ ರುಚಿಯಾದಬಿಸಿಯೂಟವನ್ನೂ ನೀಡುತ್ತಿದ್ದರು. ಆದ್ದರಿಂದ ಅವರನ್ನು ವರ್ಗಾವಣೆ ಮಾಡಬಾರದು ಎಂದು ಆಗ್ರಹಿಸಿದ್ದರು.
ರಣರಂಗವಾದ ಶಾಲೆ: ಶನಿವಾರ ವಿದ್ಯಾರ್ಥಿಗಳೆಲ್ಲಾಶಾಲೆಗೆ ಹಾಜರಾಗಿದ್ದು, ಕೆಲ ವಿದ್ಯಾರ್ಥಿಗಳು ಶಿಕ್ಷಕಮಹದೇವ ಅವರ ವರ್ಗಾವಣೆಯನ್ನು ಖಂಡಿಸಿ ಕೊಠಡಿಯೊಂದಕ್ಕೆ ನುಗ್ಗಿ ಪೀಠೊಪಕರಣಗಳನ್ನೂಧ್ವಂಸಗೊಳಿಸಿದ್ದಾರೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅಲ್ಲದೆ, ಈ ಕೃತ್ಯದ ಹಿಂದೆ ಶಿಕ್ಷಕರ ಪಾತ್ರ ಅಥವಾಶಿಕ್ಷಕರ ಬೆಂಬಲಿಗರ ಕೈವಾಡವೂ ಇರುವುದರ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಶಿಕ್ಷಕರ ವೈಮನಸ್ಸಿನಿಂದಾಗಿ ವಿದ್ಯಾರ್ಥಿಗಳಮನಸ್ಸಿನ ಮೇಲೆ ಪರಿಣಾಮ ಬೀರಿದ್ದು, ಮಕ್ಕಳ ಭವಿಷ್ಯ ರೂಪಿಸಬೇಕಾದವರೆ ತಮ್ಮ ಸ್ವಾರ್ಥಕ್ಕೆ ಮಕ್ಕಳನ್ನು ಬಳಸಿಕೊಂಡಿರುವುದು ನಾಗರಿಕಸಮಾಜವೇ ತಲೆ ತಗ್ಗಿಸುವಂತಾಗಿದೆ. ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.