ಕೆ.ಆರ್.ನಗರ: ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು ಇದನ್ನು ಕಳೆದು ಕೊಳ್ಳದೇ ಉತ್ತಮ ವಿದ್ಯಾಭ್ಯಾಸ ಕಲಿತು ಉನ್ನತ ಹುದ್ದೆ ಸೇರಿ ಎಂದು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಬಿ. ಲೋಕೇಶ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾಂಸ್ಕೃತಿಕ ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಬಳಗದಲ್ಲಿ ಹಮ್ಮಿಕೊಂಡಿದ್ದ ಅಂತರ ಕಾಲೇಜು ಚರ್ಚಾ ಸ್ಪರ್ಧೆ ಕಾರ್ಯ ಕ್ರಮ ದಲ್ಲಿ ಮಾತನಾಡಿ, ನಮಗೆ ವಿದ್ಯಾರ್ಥಿ ಜೀವನದ ಬಗ್ಗೆ ತಿಳಿದಿರಲಿಲ್ಲ. ಆದರೆ ಉದ್ಯೋಗಕ್ಕೆ ಸೇರಿದ ಮೇಲೆ ವಿದ್ಯಾರ್ಥಿ ಜೀವನದ ಬಗ್ಗೆ ಅರಿವಾಗುತ್ತಿದೆ ಇಂತಹ ಜೀವನವನ್ನು ಹಾಳುಮಾಡಿ ಕೊಳ್ಳದೇ ವಿದ್ಯಾ ಭ್ಯಾಸದ ಕಡೆ ಗಮನಕೊಡಿ ಎಂದರು.
ತಂದೆ-ತಾಯಿ ಕಷ್ಟ ಪಟ್ಟು ತಮ್ಮ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಿ ಉದ್ಯೋಗಕ್ಕೆ ಸೇರಿ ನಮ್ಮಗಳ ಇಳಿವಯಸ್ಸಿನ ಜೀವನವನ್ನು ಉತ್ತಮವಾಗಿ ನೋಡಿಕೊಳ್ಳುತ್ತಾರೆ ಎಂಬ ಆಸೆಯಿಂದ ಕೂಡಿಟ್ಟ ಹಣವನ್ನೆಲ್ಲಾ ನಿಮಗೆ ನೀಡಿರುತ್ತಾರೆ. ಆದರೆ ಅದನ್ನು ನೀವು ಲೆಕ್ಕಿಸಿದೇ ಮೋಜು ಮಸ್ತಿಗಾಗಿ ಹಣ ದುರುಪಯೋಗ ಮಾಡಿಕೊಂಡು ಓದುವ ಸಮಯದಲ್ಲಿ ಇನ್ನಿತರ ಕೆಟ್ಟ ಚಟುವಟಿಕೆಗಳಲ್ಲಿ ಭಾಗಿಯಾಗಿ ವಿದ್ಯಾಭ್ಯಾಸ ಹಾಳುಮಾಡಿಕೊಳ್ಳುವ ವಿದ್ಯಾರ್ಥಿಗಳೇ ಹೆಚ್ಚಾಗಿ ಕಂಡುಬರುತ್ತಿದೆ ಎಂದರು.
ಪ್ರಾಂಶುಪಾಲರ ಕೆ.ಸಿ. ವೀರಭದ್ರಯ್ಯ ಮತ್ತು ಮುಖ್ಯ ಅತಿಥಿಯಾಗಿದ್ದ ಸಿ.ಪಿ. ಮಹ ದೇವಸ್ವಾಮಿ, ಹಿರಿಯ ವಿದ್ಯಾರ್ಥಿ ಬಳಗದ ಅಧ್ಯಕ್ಷ ದಿವಾಕರ್ ಮಾತನಾಡಿದರು. ಪ್ರಾಧ್ಯಾಪಕರಾದ ಡಾ.ಚಂದ್ರಕಲಾ, ಡಾ.ಸೀನಪ್ಪ, ಬಸವರಾಜು, ಹರೀಶ್‌ಗೌಡ, ಪ್ರಶಾಂತ್, ಬಿ.ಎಸ್.ಯೋಗೇಶ, ಪತ್ರಿಮಾ, ಚೈತ್ರ, ಅಶ್ವಿನಿ, ಊರಿಗೌಡ, ವಿಶ್ವನಾಥ್,
ಈಶಕುಮಾರ್, ಡಾ.ಗಣೇಶ್, ಬೊಮ್ಮನಾಯಕ್ ಮಾದಯ್ಯ ನಾಗೇಂದ್ರ ಕುಮಾರ್, ಡಾ.ಮಂಜುರಾಜ್, ಎಲ್.ಎಸ್.ಮಂಜುನಾಥ್, ದೀಕ್ಷಿತ್, ಹಿರಿಯ ವಿದ್ಯಾರ್ಥಿಗಳಾದ ರಾಘವೇಂದ್ರ, ಸ್ಪಿನ್‌ಕೃಷ್ಣ, ಕನ್ನಡ ರವಿ.ಸಿ, ರಾಂಪ್ರಸಾದ್, ಹಿಂದಿ ರವಿಕುಮಾರ್, ಪ್ರಕಾಶ್ ಎಂ.ಕೆ, ಶಿವಕುಮಾರ್ ಪೊಲೀಸ್ ಸಿಬ್ಬಂದಿ ಪ್ರದೀಪ್, ಸಾಗರ್ ಇತರರು ಇದ್ದರು.