Advertisement

ವಿದ್ಯಾರ್ಥಿ ಹತ್ಯೆ : ಕ್ಯಾಂಪಸ್‌ ಫ್ರಂಟ್‌ ನಾಯಕ ಪೊಲೀಸ್‌ ವಶಕ್ಕೆ

04:49 PM Jul 26, 2018 | Team Udayavani |

ಕೊಚ್ಚಿ : ಇಸ್ಲಾಮಿಕ್‌ ಸಂಘಟನೆಯಾಗಿರುವ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ ಇದರ ವಿದ್ಯಾರ್ಥಿ ಸಂಘಟನೆ, ಕ್ಯಾಂಪಸ್‌ ಫ್ರಂಟ್‌ನ ರಾಜ್ಯ ಘಟಕದ ನಾಯಕ ಮೊಹಮ್ಮದ್‌ ರಿಫಾ ಎಂಬಾತನನ್ನು ಪೊಲಿಸರು ಈ ತಿಂಗಳ ಆದಿಯಲ್ಲಿ ನಡೆದಿದ್ದ ಎಸ್‌ಎಫ್ಐ ನಾಯಕನ ಕೊಲೆಗೆ ಸಂಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. 

Advertisement

ಎರ್ನಾಕುಳಂ ನ ಮಹಾರಾಜಾಸ್‌ ಕಾಲೇಜಿನ ಅಭಿಮನ್ಯು ಎಂಬ ವಿದ್ಯಾರ್ಥಿಯ ಹತ್ಯೆಯನ್ನು ಯೋಜಿಸಿ ಕಾರ್ಯಗತಗೊಳಿಸುವಲ್ಲಿ ಕ್ಯಾಂಪಸ್‌ ಫ್ರಂಟ್‌ನ ರಾಜ್ಯ ಕಾರ್ಯದರ್ಶಿಯಾಗಿರುವ ಮುಹಮ್ಮದ್‌ ರಿಫಾ ಶಾಮೀಲಾಗಿರುವುದಕ್ಕಾಗಿ ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕಾನೂನು ಪದವಿ ವಿದ್ಯಾರ್ಥಿಯಾಗಿರುವ ರಿಫಾ ಕಣ್ಣೂರು ಜಿಲ್ಲೆಯವನಾಗಿದ್ದು ಆತನನ್ನು ಬೆಂಗಳೂರಿನಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತೆಂದು ಪೊಲೀಸರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next