Advertisement

ವಿದ್ಯಾರ್ಥಿಗಳ ಸಮೂಹ ಕಲಾ ಪ್ರದರ್ಶನ

01:01 PM Feb 26, 2018 | |

ಬೀದರ: ಬೆಂಗಳೂರಿನ ಎನ್‌.ಎಸ್‌. ಕುಂಬಾರ ಆರ್ಟ್‌ ಗ್ಯಾಲರಿಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಬೀದರ ಚನ್ನಾರ್ಟ್ಸ್ ಕಾಲೇಜಿನ ವಿದ್ಯಾರ್ಥಿಗಳಾದ ಅನ್ನಪೂರ್ಣ ಚಾಂಬೋಳೆ ಹಾಗೂ ವಿಠ್ಠಲ ಬೆಂಬುಳಗೆ ಅವರ ಸಮೂಹ ಕಲಾ ಪ್ರದರ್ಶನ ನಡೆಯಿತು.

Advertisement

ಆರ್‌.ಕೆ. ರಿಯಲ್ಟ್ ರ್ಸನ್‌ ನಿರ್ದೇಶಕಿ ರೂಪಾ ಪಿ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿತ್ರಕಲೆ ಪ್ರಾಚೀನ ಕಾಲದಿಂದಲೂ ಬೆಳೆಯುತ್ತಾ ಬಂದಿದ್ದು, ಮಾನವನ ಮೊದಲ ಭಾಷೆಯು ಆಗಿದೆ. ನೂರು ಶಬ್ದಗಳನ್ನು ಒಂದು ಚಿತ್ರ ಹೇಳುತ್ತದೆ. ಪ್ರದರ್ಶನಗೊಂಡ ಚಿತ್ರಗಳು ಅದ್ಬುತ ಮತ್ತು ವಿಭಿನ್ನತೆಯಿಂದ ಕೂಡಿದ್ದು, ಕಲಾವಿದರ ಈ ಹೊಸ ಪ್ರಯತ್ನ ಖುಷಿ ಕೊಟ್ಟಿದೆ ಎಂದು ಹೇಳಿದರು.

ಲಲಿತಕಲಾ ಅಕಾಡೆಮಿ ಸದಸ್ಯ ಯೋಗೀಶ ಮಠದ ಮಾತನಾಡಿ, ಹೊಸ ಹೊಸ ಪ್ರತಿಭೆಗಳನ್ನು ಗುರುತಿಸಿ ವಿಬಿನ್ನ ಕಾರ್ಯಕ್ರಮಗಳೊಂದಿಗೆ ಜನ ಸಾಮಾನ್ಯರ ಮನ ಮನೆಗಳಿಗೆ ಕಲೆಯನ್ನು ತಲುಪಿಸುವ ಉದ್ದೇಶದಿಂದ ಅಕಾಡೆಮಿಯು ಇಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಕಲಾಸಕ್ತರು ಕಲಾವಿದರನ್ನು ಪ್ರೋತ್ಸಾಹಿಸಬೇಕಿದೆ ಎಂದರು.

ಗ್ಯಾಲರಿಯ ಮುಖ್ಯಸ್ಥ ಎನ್‌. ಎಸ್‌. ಕುಂಬಾರ ಮಾತನಾಡಿ, ಒಂದು ಜಿಲ್ಲೆಯ ಕಲಾವಿದರು ಮತ್ತೂಂದು ಜಿಲ್ಲೆಗೆ ಹೋಗಿ ತಮ್ಮ ಕಲೆಯ ಪ್ರದರ್ಶನವನ್ನು ಮಾಡುವುದರಿಂದ ಹೊಸ ವಿಚಾರಗಳು ಮತ್ತು ಕಲೆಯ ವಿನಿಮಯಗಳು ಆಗುತ್ತದೆ. ಇದರಿಂದ ಕಲಾ ಕ್ಷೇತ್ರದ ಪ್ರಸ್ತುತತೆಯ ಅರಿವು ಕಲಾವಿದರಿಗೆ ಸುಲಭವಾಗಿ ಸಿಗುತ್ತದೆ ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next