Advertisement

ಗುರು ಮೀರಿಸುವ ಶಿಷ್ಯರಾಗಿ: ಬೆಳಗಲ್ಲ

03:49 PM Nov 13, 2017 | |

ಮುದ್ದೇಬಿಹಾಳ: ಕಲಿತ ಶಾಲೆ, ಕಲಿಸಿದ ಗುರುಗಳು, ವಿದ್ಯೆ ನೀಡಿದ ತಂದೆ, ತಾಯಿ, ಕಷ್ಟದಲ್ಲಿ ಜೊತೆ ನಿಲ್ಲುವ ಸ್ನೇಹಿತ ಇವರನ್ನು ಜೀವನದಲ್ಲಿ ಮರೆಯಬಾರದು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಂ. ಬೆಳಗಲ್ಲ ಹೇಳಿದರು.

Advertisement

ಇಲ್ಲಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 2008-09ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮತ್ತು ಸ್ನೇಹಜೀವಿ
ಗೆಳೆಯರ ಸಂಘದಿಂದ ಏರ್ಪಡಿಸಿದ್ದ ವಿದ್ಯೆಕಲಿಸಿದ ಸರ್ಕಾರಿ ಪ್ರೌಢಶಾಲೆಯ ಹೆಮ್ಮೆಯ ಶಿಕ್ಷಕರಿಗೆ ಗುರುವಂದನೆ ಮತ್ತು ಹಳೆ ವಿದ್ಯಾರ್ಥಿಗಳ ಸಂಘ ಸ್ಥಾಪನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರಿಗೆ ಅವರ ಶಿಷ್ಯಂದಿರು ತೋರುವ ಪ್ರೀತಿ, ಆದರ, ವಿಶ್ವಾಸಗಳೇ ಸರ್ವಶ್ರೇಷ್ಠ ಪ್ರಶಸ್ತಿಗಳೆನ್ನಿಸಿಕೊಳ್ಳುತ್ತವೆ.
ಶಿಷ್ಯರು ಗುರುವನ್ನು ಮೀರಿಸುವ ಮಟ್ಟಕ್ಕೆ ಬೆಳೆದಾಗಲೇ ಶಿಕ್ಷಕರ ಜೀವನ ಸಾರ್ಥಕವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ದೈಹಿಕ ಶಿಕ್ಷಣಾಧಿಕಾರಿ ಎಸ್‌.ಬಿ. ಚಲವಾದಿ ಮಾತನಾಡಿದರು. ಹಳೆ ವಿದ್ಯಾರ್ಥಿಗಳಾದ ಮೌನೇಶ ಚಲವಾದಿ, ರಾಘವೇಂದ್ರ ಹಂಚಾಟೆ, ಚಂದ್ರಶೇಖರ ಮಾಳೊಳ್ಳಿ ಅನಿಸಿಕೆ ಹಂಚಿಕೊಂಡರು. ಸನ್ಮಾನಿತರ ಪರವಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಿಆರ್‌ಪಿ ಡಿ.ಎಸ್‌. ಚಳಗೇರಿ, ಶಿಕ್ಷಕಿಯರಾದ ರೇವತಿ ಬೂದಿಹಾಳ ಮತ್ತು ಇಂದಿರಾದೇವಿ ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಉಪನ್ಯಾಸಕ ಎಂ.ಎಚ್‌. ಹಾಲ್ಯಾಳ ವಿಶೇಷ ಉಪನ್ಯಾಸ ನೀಡಿದರು. 

ಸರ್ಕಾರಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಎಂ.ಎಚ್‌. ನಾಯಕ, ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಪ್ರಭಾರ ಮುಖ್ಯಾಧ್ಯಾಪಕ ಟಿ.ಎನ್‌. ರೂಢಗಿ, ನಿವೃತ್ತ ಶಿಕ್ಷಣಾಧಿಕಾರಿ ಎಸ್‌.ಎಸ್‌. ಠಾಣೇದ, ಆರ್‌ಎಂಎಸ್‌ಎ ಶಾಲೆಯ ಪ್ರಭಾರ ಮುಖ್ಯಾಧ್ಯಾಪಕ ಐ.ಎಸ್‌. ಮಠ ವೇದಿಕೆಯಲ್ಲಿದ್ದರು.

Advertisement

ಸ್ನೇಹಜೀವಿ ಗೆಳೆಯರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬಾವೂರ, ಪದಾಧಿಕಾರಿಗಳಾದ ಹನುಮಂತ ಪೂಜಾರಿ,
ರಮೇಶ ಮಡಿವಾಳರ, ಸಂದೀಪ ಹಿರೇಮಠ, ಶರೀಫ್‌ ನಾಯ್ಕೋಡಿ, ಹನುಮಂತ್ರಾಯ ಜಕ್ಕೇರಾಳ, ಭೀಮರಾಜ ಪತ್ತಾರ, ಸಂತೋಷ ಕರಡಿ, ನಿಂಗಪ್ಪ ಮೇಲಿನಮನಿ, ಸಂತೋಷ ನಾಯ್ಕೋಡಿ, ಸತೀಶ ಅಜಮನಿ, ಅಬ್ದುಲ್‌
ನದಾಫ್‌, ಮೌನೇಶ ಚಲವಾದಿ, ಅನಿಲ ರಾಠೊಡ, ಚನಮಲ್ಲಪ್ಪ ಬಾದವಾಡಗಿ, ಶೋಯೆಬ ಮುಲ್ಲಾ, ಸೋಮು ಚಲವಾದಿ, ಶಿವರಾಜ್‌ ಪತ್ತಾರ, ಮಲ್ಲಿಕಾರ್ಜುನ ಬಿರಾದಾರ ಇದ್ದರು.

ಈ ವೇಳೆ 2008-09ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಎಸ್‌.ಎಸ್‌. ಠಾಣೇದ, ಡಿ.ಎಸ್‌. ಚಳಗೇರಿ, ಮಲ್ಲಿನಾಥ ಬಿರಾದಾರ, ಎಸ್‌.ಜಿ. ಕೂಡಗಿ, ಎಸ್‌.ಜಿ. ದೋಟಿಹಾಳ, ಎಸ್‌.ಬಿ.ಬಿರಾದಾರ, ಸಿ.ಕೆ. ಪತ್ತಾರ, ಎ.ಕೆ. ಮುಲ್ಲಾ, ಎಸ್‌.ಎಸ್‌. ಕೆರಿಗೊಂಡ, ಆರ್‌.ಎಸ್‌. ದೊಡಮನಿ, ಬಿ.ಪಿ. ರಾಠೊಡ, ಎಸ್‌.ಬಿ. ಹಂಡರಗಲ್ಲ, ಎಂ.ಆರ್‌. ಚಪ್ಪರಬಂದ, ಶಿಕ್ಷಕಿಯರಾದ ಇಂದಿರಾದೇವಿ, ರೇವತಿ ಬೂದಿಹಾಳ, ಗಿರಿಜಾ ಕಿತ್ತೂರ, ಲೀಲಾವತಿ
ಕುಲಕರ್ಣಿ, ಅಕ್ಕಮಹಾದೇವಿ ಪಾಟೀಲ, ಡಿ.ಡಿ. ಪಣೆದಕಟ್ಟಿ, ರೇಣುಕಾ ಸಜ್ಜನ, ನಾಗರತ್ನ, ಆರ್‌.ಬಿ. ಪಾಟೀಲ, ಸುಧಾರಾಣಿ ಮತ್ತು ಶಿಕ್ಷಕೇತರ ಸಿಬ್ಬಂದಿಗಳಾದ ಸಿ.ಎಂ. ಮೇಲ್ಮನಿ, ಮಹಾಂತಮ್ಮ ನೆರಬೆಂಚಿ ಅವರನ್ನು ಸನ್ಮಾನಿಸಲಾಯಿತು. 

ವಿದ್ಯಾರ್ಥಿನಿ ಶಾಲಿನಿ ಪ್ರಾರ್ಥಿಸಿದರು. ರಾಘವೇಂದ್ರ ಹಂಚಾಟೆ ಸ್ವಾಗತಿಸಿದರು. ಸುನೀಲ ಕವಡಿಮಟ್ಟಿ ಪ್ರಾಸ್ತಾವಿಕ
ಮಾತನಾಡಿದರು. ಗಣೇಶ ಜಿಂಗಾಡೆ ನಿರೂಪಿಸಿದರು. ಬಸವರಾಜ ಬೆಳ್ಳಿಕಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next