ಕೊಪ್ಪಳ : ಶಾಲಾ ವಾಹನ ತೊಳೆಯಲು ಹೋದ ವಿದ್ಯಾರ್ಥಿ ಆಕಸ್ಮಿಕವಾಗಿ ಕಾಲು ಜಾರಿ ಹೊಂಡಕ್ಕೆ ಬಿದ್ದು ಸಾವನ್ನಪಿರುವ ಘಟನೆ ಯಲಬುರ್ಗಾ ತಾಲೂಕಿನ ಕುದರಿಮೋತಿಯಲ್ಲಿ ಶನಿವಾರ ನಡೆದಿದೆ.
ಹಿರೇಬಿಡನಾಳ ಗ್ರಾಮದ ರಮೇಶ ಬಸಪ್ಪ ಗೂತ್ತುರು(12)ಮೃತ ವಿದ್ಯಾರ್ಥಿ.
ಪಂಪಣ್ಣ ಹಂಪಣ್ಣ ಎಂಬುವವರು ನಡೆಸುತ್ತಿರುವ ಕುದರಿಮೋತಿ ವಿಜಯ ಮಹಾಂತೇಶ ಖಾಸಗಿ ಶಾಲೆಯ 6ನೇ ತರಗತಿಯಲ್ಲಿ ಕಲಿಯುತ್ತಿದ್ದ ರಮೇಶ.
ಅಮವಾಸ್ಯೆ ಇದೆ ಎಂದು ಶಾಲಾ ಗಾಡಿಯನ್ನು ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಸುದ್ದಿ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಬೇವೂರು ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.