ಲೋಕಾಪುರ: ಬಡತನದಲ್ಲಿ ಹುಟ್ಟಿ ಬೆಳೆದ ಅಲೆಮಾರಿ ಸುಡುಗಾಡ ಸಿದ್ಧರ ಸಮಾಜದ ವಿದ್ಯಾರ್ಥಿ ಮಂಜುನಾಥ ವಿಭೂತಿ ಶೇ. 94.16 ಅಂಕ ಪಡೆದು ತಾಲೂಕಿನ ಆರ್‌ಎಂಜಿ ಕಾಲೇಜಿಗೆ ಪ್ರಥಮ ಸ್ಥಾನಗಳಿಸಿ ಸಾಧನೆಗೈದಿದ್ದಾರೆ.
ಸದ್ಯ ಮುಂದೆ ಓದಲು ಹಣ ಇಲ್ಲದೇ ಕಣ್ಣೀರಿಡುತ್ತಿದ್ದು, ಭವಿಷ್ಯದಲ್ಲಿ ಚೆನ್ನಾಗಿ ಓದಿ ಕೆಎಎಸ್ ಅಧಿಕಾರಿಯಾಗಿ ಸಮಾಜಕ್ಕೆ ಸೇವೆ ನೀಡಬೇಕು ಎಂಬ ಗುರಿ ಹೊಂದಿದ್ದಾರೆ. ಆದರೆ ಹಣವಿಲ್ಲದೆ ಈ ಮಕ್ಕಳು ಶಿಕ್ಷಣ ಅರ್ಧಕ್ಕೆ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲೆಮಾರಿ ಸುಡುಗಾಡ ಸಿದ್ಧರ ಜನಾಂಗದಲ್ಲಿ ಮೂಲ ಸೌಕರ್ಯವಿಲ್ಲದೆ ಇದ್ದರು ಎಷ್ಟೋ ಪ್ರತಿಭಾವಂತ ಮಕ್ಕಳು ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿಯವರೆಗೆ ಓದಿ ತಮ್ಮ ಶಿಕ್ಷಣ ಅರ್ಧಕ್ಕೆ ಬಿಡುತ್ತಿದ್ದಾರೆ.
ವಿಶೇಷವಾಗಿ ಈ ಜನರು ಗ್ರಾಮದ ಕೊಳಗೇರಿ ಗುಡಿಸಲುಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ, ಆರ್ಥಿಕವಾಗಿ ದುರ್ಬಲವಾದ ಈ ಜನಾಂಗದ ಮಕ್ಕಳು ಹಾಗೂ ಪಾಲಕರು ಊರು ಊರು ಅಲೆದಾಡಿ ಭಿಕ್ಷಾಟನೆ ಹಾಗೂ ಜೋತಿಷ್ಯ ಹೀಗೆ ಬೇರೆ-ಬೇರೆ ಕಾಯಕ ಮಾಡಿ ಹೊಟ್ಟೆ ತುಂಬಿಸಿಕೊಂಡರೆ ಸಮಾಜದ ಕೆಲವು ಮಕ್ಕಳು ಸರ್ಕಾರಿ ಹಾಸ್ಟೆಲ್ನಲ್ಲಿ ವ್ಯಾಸಂಗ ಮಾಡಿದರೆ ಇನ್ನೂ ಕೆಲ ಮಕ್ಕಳು ಬೀದಿ ದೀಪದ ಬೆಳಕಿನಲ್ಲಿ ಓದಿ ಶಿಕ್ಷಣದಲ್ಲಿ ಸಾಧನೆ ಮಾಡುತ್ತಿದ್ದಾರೆ.
ಅಲೆಮಾರಿ ಸುಡುಗಾಡ ಸಿದ್ಧರ ಮಕ್ಕಳ ವಿದ್ಯಾಭ್ಯಾಸ ಪೂರ್ಣಗೊಳಿಸಲು ಯಾರಾದರು ದಾನಿಗಳು, ಶಿಕ್ಷಣ ಪ್ರೇಮಿಗಳು ಹಾಗೂ ಸಂಘ ಸಂಸ್ಥೆಯವರು ಸಹಾಯ ಮಾಡಲು ಇಚ್ಚಿಸುವವರು ಮಂಜುನಾಥ ವಿಭೂತಿ ಇವನ ಕೆನರಾ ಬ್ಯಾಂಕಿನ ಉಳಿತಾಯ ಖಾತೆ ಸಂಖ್ಯೆ 0784108022499 ಐಎಫ್‌ಎಸ್‌ಸಿ ಕೋಡ್ ನಂ. ಸಿಎನ್‌ಆರ್‌ಬಿ 0000784 ಸಹಾಯ ಮಾಡಲು ಇಚ್ಚಿಸುವವರು 9731669055ಗೆ ಸಂಪರ್ಕಿಸಿರಿ.
Advertisement
ಗ್ರಾಮದ ಸುಡುಗಾಡ ಸಿದ್ಧರ ಮಕ್ಕಳಾದ ಮಂಜುನಾಥ ವಿಭೂತಿ ಶೇ. 94.16, ಹನುಮಂತ ವಿಭೂತಿ ಶೇ. 87, ಕೃಷ್ಣಾ ಅಗಸದವರ ಶೇ. 85, ಮಾರುತಿ ವಿಭೂತಿ ಶೇ. 84 ರಷ್ಟು ಅಂಕ ಗಳಿಸಿ ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.
Related Articles
Advertisement