Advertisement
“ಒಂದಾನೊಂದು ಕಾಲ’ದ, ಆಕಾಶದೆತ್ತರಕ್ಕೆ ಬೆಳೆದ ಮರ, ದೊಪ್ಪನೆ ಧರೆಗುರುಳಿ ಬಿದ್ದಂಥ ಅತೀವ ದುಃಖದ ಸದ್ದೊಂದು ಗಿರೀಶ್ ಕಾರ್ನಾಡರನ್ನು ಕಳಕೊಂಡ ನಾಡನ್ನು ತಬ್ಬಿದೆ. “ಯಯಾತಿ’ಯಂತೆ ಮುಪ್ಪಿನೆದುರೂ ಮಂಡಿಯೂರುವ, ಮಾನವ ಸಹಜ ಸಂಕಟ ಅವರನ್ನು ಮೌನಿ ಆಗಿಸಿದೆ. ವೈಚಾರಿಕ ಬೇರುಗಳ “ವಂಶವೃಕ್ಷ’, ಯಾವ ಟೀಕೆಗಳ “ಅಗ್ನಿ ಮತ್ತು ಮಳೆ’ಗೂ ಜಗ್ಗದ ಜೀವ ಸ್ತಬ್ಧವಾದಾಗ, “ಹಯವದನ’ವೂ ಬಾಡಿದಂತೆ ಭಾಸವಾಗುತಿದೆ. ತುಘಲಕ್ ಮಾತು ಹೊಮ್ಮದೇ ನಿಂತಿದ್ದಾನೆ. “ಚೆಲುವಿ’ಯ ಮೊಗದಲ್ಲಿ “ಒಡಕಲು ಬಿಂಬ’ವೇ ಕಾಣಿಸುತ್ತಿತ್ತು.
Related Articles
Advertisement
ಅದೇ ಕಾರ್ನಾಡರ ಶಕ್ತಿ. ಕಾರ್ನಾಡರು ತಮಗೆ ತಾವೇ ಚೌಕಟ್ಟು ಹಾಕಿಕೊಂಡವರು ಎಂದು ಹೇಳುವವರಿದ್ದಾರೆ. ಅದನ್ನು ಎಷ್ಟೋ ಜನ ರಿಸರ್ವ್, ಬ್ಯಾರಿಕೇಡ್ ಅಂತಲೂ ಕರೆದಿದ್ದಾರೆ. ಹಿತವಾದ, ನಿಷ್ಠುರ ಮಾತಿಗೆ ಒಗ್ಗಿಹೋಗಿದ್ದ ಕಾರ್ನಾಡರು, ತಮ್ಮ ಲ್ಯಾಂಡ್‌ಲೈನ್ ಫೋನ್ ಇಡುವ ಜಾಗದಲ್ಲಿ, ಕುರ್ಚಿಯನ್ನೇ ಇಡುತ್ತಿರಲಿಲ್ಲ ಎನ್ನುವ ಮಾತೊಂದು ಇತ್ತು. ಜಾಸ್ತಿ ಮಾತಿಗೆ ಕಾಲಹರಣ ಮಾಡುವ ಜಾಯಮಾನ ಅವರದ್ದಲ್ಲ. ಹಾಗಾಗಿ, ಅವರು ಹೊರಟು ಹೋದಾಗ, ಆ ಸದ್ದು ತಕ್ಷಣಕ್ಕೆ ಯಾರಿಗೂ ಕೇಳಿಸಲಿಲ್ಲ. ಅಂತಿಮಯಾತ್ರೆಯಲ್ಲೂ, ಯಾವ ಆಡಂಬರವನ್ನೂ ಬಯಸದೇ, ಒಂಟಿಯಾಗಿಯೇ ಹೊರಟರು.
ಜನನ: ಮೇ 19, 1938 (ಮಾಥೆರಾನ್, ಮಹಾರಾಷ್ಟ್ರ)
ಶಿಕ್ಷಣ: 1958 (ಕರ್ನಾಟಕ ವಿ.ವಿ.ಇಂದ ಬಿ.ಎ. ಪದವಿ), (ಬಿ.ಎ. ಪರೀಕ್ಷೆಯಲ್ಲಿ ವಿ.ವಿ.ಗೆ ಮೊದಲಿಗ), 1963 (ಆಕ್ಸ್‌ಫರ್ಡ್ ವಿ.ವಿ. ಇಂದ ಎಂ.ಎ. ಪದವಿ)
ಚಲನಚಿತ್ರ ಪ್ರಶಸ್ತಿಗಳುಸಂಸ್ಕಾರ (ರಾಷ್ಟ್ರಪತಿಗಳಿಂದ ಸುವರ್ಣ ಪದಕ) 1970
ವಂಶವೃಕ್ಷ (ರಾಷ್ಟ್ರೀಯ ಪ್ರಶಸ್ತಿ) 1970
ವಂಶವೃಕ್ಷ (ರಾಜ್ಯಪ್ರಶಸ್ತಿ) 1972
ಕಾಡು (ರಾಷ್ಟ್ರಪತಿ ರಜತಪದಕ) 1974
ಒಂದಾನೊಂದು ಕಾಲದಲ್ಲಿ (ರಾಷ್ಟ್ರಪ್ರಶಸ್ತಿ) 1978
ಸಂತ ಶಿಶುನಾಳ ಶರೀಫ (ಶ್ರೇಷ್ಠ ಸಹನಟ) 1991 ಗೌರವಗಳು
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ- 1972
ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ- 1972
ಪದ್ಮಶ್ರೀ- 1974
ಪದ್ಮಭೂಷಣ- 1992
ಕರ್ನಾಟಕ ವಿ.ವಿ.ಗೌರವ ಡಿ.ಲಿಟ್- 1994
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ತಲೆದಂಡ) 1993
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ತಲೆದಂಡ) 1994
ಗುಬ್ಬಿ ವೀರಣ್ಣ ಪ್ರಶಸ್ತಿ- 1997
ಮಧ್ಯಪ್ರದೇಶ ಸರ್ಕಾರದಿಂದ ಕಾಳಿದಾಸ ಸಮ್ಮಾನ- 1999
ಭಾರತೀಯ ಜ್ಞಾನಪೀಠ ಪ್ರಶಸ್ತಿ- 1999
ಮಿದ್ನಾಪುರದ ವಿದ್ಯಾಸಾಗರ ವಿ.ವಿ. ಗೌರವ ಡಿ.ಲಿಟ್- 2010
ಭುವನೇಶ್ವರದ ರ್ಯಾವನ್ ಷಾ ವಿ.ವಿ. ಗೌರವ ಡಿ.ಲಿಟ್- 2011
ಲಾಸ್ ಏಂಜಲಿಸ್‌ನ ಯುನಿವರ್ಸಿಟಿ ಆಫ್ ಸದನ್ ಕ್ಯಾಲಿಫೋರ್ನಿಯದಿಂದ ಹಾನರರಿ ಡಾಕ್ಟರ್ ಆಫ್ ಹ್ಯೂಮನ್ ಲೆಟರ್- 2011 ವೃತ್ತಿ
1963 1970 ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರಸ್, ಮದ್ರಾಸ್‌ನಲ್ಲಿ ಸಹಾಯಕ ಮ್ಯಾನೇಜರ್, ಮ್ಯಾನೇಜರ್.
1974 75 ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ.
1976 78- ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ.
1988 1993- ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ.
2000 2003 ಲಂಡನ್‌ನ ನೆಹರು ಸೆಂಟರ್‌ನ ನಿರ್ದೇಶಕ ಹಾಗೂ ಭಾರತದ ಹೈ ಕಮಿಷನ್‌ನಲ್ಲಿ ಸಚಿವ. ಪ್ರಮುಖ ನಾಟಕಗಳು
ಮಾ ನಿಷಾಧ- ಏಕಾಂಕ ನಾಟಕ
ಯಯಾತಿ-1961
ತುಘಲಕ್ 1964
ಹಯವದನ 1971
ಅಂಜುಮಲ್ಲಿಗೆ- 1977
ಹಿಟ್ಟಿನ ಹುಂಜ 1980
ನಾಗಮಂಡಲ- 1989
ತಲೆದಂಡ- 1991
ಅಗ್ನಿ ಮತ್ತು ಮಳೆ 1994
ಟಿಪ್ಪೂ ಸುಲ್ತಾನ ಕನಸುಗಳು- 1997
ಒಡಕಲು ಬಿಂಬ- 2005
ಮದುವೆ ಆಲ್ಬಮ್- ಫ್ಲವರ್ಸ್- 2012
ಬೆಂದಕಾಳೂರು ಆನ್ ಟೋಸ್ಟ್- 2012
ರಕ್ಕಸತಂಗಡಿ 2019 ಸಿನಿಮಾ ಸಾಧನೆ
ಸಂಸ್ಕಾರ-ಚಿತ್ರಕಥೆ, ನಟನೆ- 1969
ವಂಶವೃಕ್ಷ- ನಿರ್ದೇಶನ-ಚಿತ್ರಕತೆ-ನಟನೆ- 1971
ಕಾಡು- ಚಿತ್ರಕತೆ, ನಿರ್ದೇಶನ- 1973
ಒಂದಾನೊಂದು ಕಾಲದಲ್ಲಿ- ಕತೆ, ಚಿತ್ರಕತೆ, ನಿರ್ದೇಶನ- 1978
ಕಾನೂರು ಹೆಗ್ಗಡತಿ- ನಿರ್ದೇಶನ, ನಟನೆ- 1999 ಒಬ್ಬ ಅಗಸ ತೊಳೆದಷ್ಟು ಕೊಳೆಯನ್ನು ಜಗತ್ತಿನ ಯಾವ ಧರ್ಮಗುರುವೂ ತೊಳೆದಿಲ್ಲ
-ತುಘಲಕ್ ನಾಟಕ