Advertisement
“ಪಕ್ಷ ಕ್ಯಾ.ಅಮರೀಂದರ್‌ರಿಗೆ ಗೌರವ ಕೊಟ್ಟಿದೆ. ಆದರೆ ಅವರಿಗೆ ಶಾಸಕರಾಗಲಿ ಅಥವಾ ಸಚಿವರಾಗಲಿ ಯಾವುದೇ ಸಲಹೆ ಕೊಡುವುದೂ ಇಷ್ಟವಾಗುತ್ತಿರಲಿಲ್ಲ. ಅವರು ರಾಜ್ಯದಲ್ಲಿ ಪ್ರಮುಖ ನಾಯಕರಾಗಿದ್ದುಕೊಂಡು, ಪಕ್ಷದ ಕೆಲವು ನಿರ್ಧಾರಗಳಿಗೆ ಗೌರವಿಸಬೇಕಿತ್ತು. ಅವರು ಯಾವುದೋ ಒತ್ತಡದಲ್ಲಿರುವಂತೆ ಕಾಣುತ್ತದೆ’ ಎಂದು ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ಹರೀಶ್ ರಾವಂತ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮರೀಂದರ್ ಸಿಂಗ್, “ನಾಲ್ಕೂವರೆ ವರ್ಷದಿಂದ ಅಧಿಕಾರದಲ್ಲಿದ್ದ ಪಕ್ಷ ಈಗ ತನಗೆ ತಾನೇ ತಂದುಕೊಂಡ ಕರುಣಾಜನಕ ಪರಿಸ್ಥಿತಿ ನೋಡಿ ರಾವಂತ್ ಇಂಥ ಮಾತಾಡುತ್ತಿದ್ದಾರೆ ಎಂದಿದ್ದಾರೆ.
ಈ ನಡುವೆ, ಪಂಜಾಬ್ ಸಿಎಂ ಚರಣ್‌ಸಿಂಗ್ ಜಿತ್ ಛನ್ನಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಕೃಷಿ ಕಾಯ್ದೆ ಹಿಂಪಡೆಯಬೇಕು, ಹೋರಾಟನಿರತ ರೈತರೊಂದಿಗೆ ಚರ್ಚಿಸಿ ಹೋರಾಟವನ್ನು ಅಂತ್ಯಗೊಳಿಸಬೇಕು ಹಾಗೂ ಭತ್ತವನ್ನು ಅವಧಿಗೆ ಮೊದಲೇ ಖರೀದಿಸಬೇಕು ಎಂದು ಮನವಿ ಮಾಡಿದ್ದಾರೆ.
Related Articles
ಇದೇ ವೇಳೆ, ಛತ್ತೀಸ್‌ಗಡದಲ್ಲಿಯೂ ನಾಯಕತ್ವ ಬದಲಾವಣೆ ನಡೆಯಲಿದೆ ಎಂಬ ವದಂತಿಗಳ ನಡೆಯುವೇ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವಟಿ.ಎಸ್.ಸಿಂಗ್ ದಿಯೋ ಚತ್ತೀಸ್‌ಗಢದಲ್ಲಿ ಪಂಜಾಬ್‌ನಂಥ ಬಿಕ್ಕಟ್ಟಿನ ಸ್ಥಿತಿ ಇಲ್ಲ. ವರಿಷ್ಠರು ಯಾವ ಸೂಚನೆ ನೀಡುತ್ತಾರೋ ಅದನ್ನು ಪಾಲಿಸುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನ ಕೆಲವು ಶಾಸಕರು ಈಗಾಗಲೇ ನವದೆಹಲಿಯಲ್ಲಿದ್ದಾರೆ.
Advertisement