Advertisement
ಪದವಿ ಪರೀಕ್ಷೆ ಮುಗಿದು ವಾರದ ಹಿಂದೆ ಮೌಲ್ಯಮಾಪನ ಆರಂಭವಾಗಿದ್ದರೂ ವಿವಿ ಕಾಲೇಜಿನಲ್ಲಿ ನಡೆಯುತ್ತಿರುವ ಮೌಲ್ಯಮಾಪನಕ್ಕೆ ಉತ್ತರ ಪತ್ರಿಕೆಗಳು ತಲುಪದ್ದರಿಂದ ಮೌಲ್ಯಮಾಪಕರಿಗೆ ಎರಡು ದಿನ ರಜೆ ನೀಡಲಾಗಿತ್ತು. ಇನ್ನು ಕೆಲವು ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪಕರು ಧರಣಿ ಕುಳಿತ ಹಿನ್ನೆಲೆಯಲ್ಲಿ ಉತ್ತರ ಪತ್ರಿಕೆ ತಲುಪಿಸಲಾಗಿತ್ತು. ಆದರೆ ಮಂಗಳೂರಿನ ರಥಬೀದಿ ಪದವಿ ಕಾಲೇಜು ಮತ್ತು ವಿವಿ ಕಾಲೇಜುಗಳ ಮೌಲ್ಯಮಾಪನ ಕೇಂದ್ರಗಳಿಗೆ ಹೊರಗುತ್ತಿಗೆ ವಹಿಸಿಕೊಂಡ ಸಂಸ್ಥೆಯು ಗುರುವಾರವೂ ಉತ್ತರ ಪತ್ರಿಕೆಗಳನ್ನು ತಲುಪಿಸಿಲ್ಲ. ಹೀಗಾಗಿ ಇಲ್ಲಿ ಮೌಲ್ಯಮಾಪನ ಸಾಧ್ಯವಾಗಿಲ್ಲ. ಹಾಗಾಗಿ ಈ ಕೇಂದ್ರಗಳ ಮೌಲ್ಯಮಾಪಕರಿಗೆ ಮತ್ತೆ ಎರಡು ದಿನ ರಜೆ ನೀಡಲಾಗಿದೆ.
ಮೌಲ್ಯಮಾಪನದ ಅವ್ಯವಸ್ಥೆ ಮತ್ತು ವಿಶ್ವವಿದ್ಯಾನಿಲಯದ ವಿಳಂಬ ಧೋರಣೆ ಖಂಡ ನೀಯ ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ತಿಳಿಸಿದೆ. ವಿವಿ ಕುಲಪತಿ, ಕುಲ ಸಚಿವರು ಮತ್ತು ಮೌಲ್ಯಮಾಪನ ಕುಲಸಚಿವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಎಬಿವಿಪಿ ಹೋರಾಟ ನಡೆಸಲಿದೆ ಎಂದು ಎಬಿವಿಪಿ ಜಿಲ್ಲಾ ಸಂಚಾಲಕ ಸಂದೇಶ ರೈ ಮಜಕ್ಕಾರ್ ಅವರು ತಿಳಿಸಿದ್ದಾರೆ.