Advertisement

ಮಾನ್ಯತೆ ಸಿಗೋವರೆಗೂ ಹೋರಾಟ

11:46 AM Jul 22, 2019 | Suhan S |

ಯಲ್ಲಾಪುರ: ಅರಣ್ಯ ಭೂಮಿ ಹಕ್ಕು ಮಾನ್ಯತೆ ಸಿಗುವವರೆಗೂ ನನ್ನ ಹೋರಾಟ ಮುಂದುವರಿಯಲಿದೆ. ಅರಣ್ಯ ಭೂಮಿ ಅತಿಕ್ರಮಣದಾರರೆಲ್ಲ ನನ್ನ ಕುಟುಂಬದವರು. ನನ್ನ ಉಸಿರು ಇರುವವರೆಗೂ ಅವರಿಗೆ ನ್ಯಾಯ ಕೊಡಲು ಹೋರಾಟ ನಡೆಸುವುದಾಗಿ ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ. ರವೀಂದ್ರ ನಾಯ್ಕ ಹೇಳಿದರು.

Advertisement

ರವಿವಾರ ಪಟ್ಟಣದ ವೆಂಕಟ್ರಮಣ ಮಠದಲ್ಲಿ ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಅರಣ್ಯ ಅತಿಕ್ರಮಣದಾರರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಲ್ಲಾಪುರ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನನಗೆ ಸೋಲಾಯಿತು. ಸೋತ ತಕ್ಷಣ ನಾನು ಕ್ಷೇತ್ರದಿಂದ ಹಿಂದಕ್ಕೆ ಸರಿಯಲಿಲ್ಲ. ಈಗಾಗಲೇ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಾಹಿತಿ ಕೇಂದ್ರ ತೆರೆಯಲಾಗಿದೆ. 21 ಸಾವಿರದಷ್ಟು ಅತಿಕ್ರಮಣದಾರರು ಸದಸ್ಯರಾಗಿದ್ದು, ಎಲ್ಲ ಅತಿಕ್ರಮಣದಾರರೂ ಸದಸ್ಯರಾಗಬೇಕಿದೆ. ಅರಣ್ಯ ಅತಿಕ್ರಮಣದಾರರನ್ನು ಅಧಿಕಾರಿಗಳು ಭಯೋತ್ಪಾದಕರಂತೆ ನೋಡುತ್ತಿದ್ದಾರೆ. ಈಗಾಗಲೇ ಅರ್ಜಿ ಹಾಕಿದ ಅತಿಕ್ರಮಣದಾರಿಗೆ ಇಲಾಖೆಯಿಂದ ಆತಂಕ ಎದುರಾದರೆ ಅರಣ್ಯ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರಶ್ನಿಸಲಾಗುವುದು ಎಂದು ಎಚ್ಚರಿಸಿದರು.

ಜನಪ್ರತಿನಿಧಿಗಳಿಗೆ ಅರಣ್ಯ ಭೂಮಿ ಸಕ್ರಮ ಗೊಳಿಸುವ ಇಚ್ಛಾಶಕ್ತಿಯಿಲ್ಲ. ಶಾಸಕರು ಸಂಸದರು, ಸರಕಾರದಿಂದ ಈ ಕುರಿತು ನಿರೀಕ್ಷಿತ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ಸರ್ವೋಚ್ಛ ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಬರುವ ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಅತಿಕ್ರಣ ದಾರರ ಜ್ವಲಂತ ಸಮಸ್ಯೆ ಇದ್ದರೂ ಶಾಸಕರು ಕ್ಷೇತ್ರಬಿಟ್ಟು ಜನಸಮಸ್ಯೆ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ‘ಎಲ್ಲಿದ್ದೀರಿ ಶಾಸಕರೇ’ ಎಂದು ಪ್ರಶ್ನಿಸಿದ ಅವರು, ವಿಧಾನ ಸಭೆಯಲ್ಲಿ ಕೇವಲ ಖುರ್ಚಿ, ದುಡ್ಡಿಗೋಸ್ಕರ ಚರ್ಚೆ, ರಾಜಕಾರಣ ನಡೆಯುತ್ತಿದೆಯೇ ಹೊರತೂ ಕಿಂಚಿತ್ತೂ ಕ್ಷೇತ್ರ, ಜನತೆ ಅಭಿವೃದ್ಧಿ ಬಗ್ಗೆ ಕಾಳಜಿಯೇ ಇಲ್ಲ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next