Advertisement

ಸಮಸ್ಯೆ ಪರಿಹಾರಕ್ಕೆ ಹೋರಾಟ ಅಗತ್ಯ

02:32 PM Jul 22, 2019 | Team Udayavani |

ಇಳಕಲ್ಲ: ರಾಜ್ಯದಲ್ಲಿ ಹಲವಾರು ಸಂಘ- ಸಂಸ್ಥೆಗಳಿದ್ದರೂ ಸಂವಿಧಾನದ ಚೌಕಟ್ಟಿನಲ್ಲಿರುವ ಏಕೈಕ ಸಂಘ ಕರ್ನಾಟಕದ ರಾಜ್ಯ ಸರಕಾರಿ ನೌಕರರ ಸಂಘ ಎಂದು ಶಿವಮೊಗ್ಗ ನೌಕರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಖಜಾಂಚಿ ಷಡಕ್ಷರಿ ಹೇಳಿದರು.

Advertisement

ಇಳಕಲ್ಲ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ನಡೆದ ಕರ್ನಾಟಕದ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಇಳಕಲ್ಲ ತಾಲೂಕಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ, ಕಾರ್ಯಾಲಯ ಉದ್ಘಾಟನೆ ಹಾಗೂ ಸಹಾಯವಾಣಿ ಸಂಖ್ಯೆ ಅನಾವರಣ ಮತ್ತು ಅಭಿನಂದನಾ ಸಮಾರಂಭ ಕಾರ್ಯಕ್ರಮದ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ನೌಕರರ ಸಮಸ್ಯೆಗಳು ಸಾಕಷ್ಟಿದ್ದು, ಅವುಗಳನ್ನು ಸಂಘಟನಾತ್ಮಕವಾಗಿ ಪಕ್ಷಾತೀತವಾಗಿ ಹೋರಾಟ ಮಾಡಿ ಪಡೆದುಕೊಳ್ಳೋಣ ಎಂದು ಹೇಳಿದರು.

ಸಹಾಯವಾಣಿ ಸಂಖ್ಯೆ ಅನಾವರಣ ಮಾಡಿದ ಬೆಳಗಾವಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಜಗದೀಶ ಪಾಟೀಲ ಮಾತನಾಡಿ, ಕರ್ನಾಟಕದ ರಾಜ್ಯ ಸರಕಾರಿ ನೌಕರರ ಸಂಘದಲ್ಲಿ ಇಂದು ಸಾಮಾಜಿಕ ನ್ಯಾಯವಿಲ್ಲ, ಜಾತಿಯ ಪ್ರಭಾವದಿಂದ ಬಳಲುತ್ತಿದ್ದು, ಮೊದಲು ಸಂಘವನ್ನು ಒಂದು ಜಾತಿಗೆ ಸೀಮಿತಗೊಂಡಿರುವ ಸಂಘ ಜಾತ್ಯತೀತಗೊಳಿಸುವ ಕಾರ್ಯ ಆಗಬೇಕಾಗಿದೆ. ಮುಂದಿನ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವಂತ ಅಭ್ಯರ್ಥಿಗಳಿಗೆ ಬೆಂಬಲಿಸಬೇಕು ಎಂದು ಹೇಳಿದರು.

ಇಳಕಲ್ಲ-ಸಂಸ್ಥಾನ ಮಠದ ಗುರುಮಹಾಂತ ಶ್ರಿಗಳು ಮಾತನಾಡಿದರು. ತಹಶೀಲ್ದಾರ್‌ ವೇದವ್ಯಾಸ ಮುತಾಲಿಕ್‌ ಉಪಸ್ಥಿತರಿದ್ದರು.

Advertisement

ಇದೇ ಸಂದರ್ಭದಲ್ಲಿ ಇಳಕಲ್ಲ ಅಧ್ಯಕ್ಷ ಪರಶುರಾಮ ಪಮ್ಮಾರ ಅವರಿಗೆ ನಿಕಟಪೂೂರ್ವ ಅಧ್ಯಕ್ಷ ಸಿ.ಜಿ. ಚಾದರಿ ಅಧಿಕಾರ ಹಸ್ತಾಂತರ ಮಾಡಿದರು.

ಚಂದ್ರಶೇಖರ ನುಗ್ಲಿ, ಸುರೇಶ ಶೇಡಶ್ಯಾಳ, ರಾಜ್ಯ ಪರಿಷತ್‌ ಸದಸ್ಯ ಸಂಜೀವ ಸತರಡ್ಡಿ, ಖಜಾಂಚಿ ಎಸ್‌.ಕೆ. ಹಿರೇಮಠ, ಪ್ರಧಾನ ಕಾರ್ಯದರ್ಶಿ ವಿಠuಲ ವಾಲಿಕಾರ, ಜಿಲ್ಲಾ ಅಧ್ಯಕ್ಷ ಬಸವರಾಜ ಬಾಗೇನವರ, ಪ್ರಧಾನ ಕಾರ್ಯದರ್ಶಿ ಬಿ.ಟಿ. ಕೊವಳ್ಳಿ, ಬೀಳಗಿಯ ಅಧ್ಯಕ್ಷ ಬಿ.ಎಸ್‌. ಗೋನಾಳ, ಗುಳೇದಗುಡ್ಡದ ಎಸ್‌.ಬಿ. ಮಾಚಾ, ಹುನಗುಂದದ ಸಂಗಣ್ಣ ಹಂಡಿ, ಬದಾಮಿಯ ರಮೇಶ ಅಥಣಿ, ಜಗದೀಶ, ಗದಗದ ರವಿ ಗಂಜಿಕೇರಿ, ವಾಯ್‌.ಜಿ. ಪಾಟೀಲ ಗಂಗಾಧರ ಜೇವೂರ ಹಾಗೂ ಇತರರು ಉಪಸ್ಥಿತರಿದ್ದರು.

ರಾಜ್ಯ ಪರಿಷತ್‌ ಸದಸ್ಯ ಈಶ್ವರ ಗಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮುತ್ತಣ್ಣ ಬೀಳಗಿ ವಂದಿಸಿದರು. ಸಂಗಣ್ಣ ಗದ್ದಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next