Advertisement

ಹಳೆ ಪಿಂಚಣಿ ಯೋಜನೆ ಜಾರಿಗೆ ಹೋರಾಟ

12:33 PM Jul 12, 2019 | Suhan S |

ರಾಮನಗರ: ರಾಷ್ಟ್ರೀಯ ಪಿಂಚಣಿ ಯೋಜನೆಗೆ (ಎನ್‌.ಪಿ.ಎಸ್‌) ಬದಲಾಗಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವಂತೆ ಹೋರಾಟ ಮುಂದುವರಿಸಲಾಗುವುದು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷ ಆರ್‌.ಕೆ.ಬೈರಲಿಂಗಯ್ಯ ತಿಳಿಸಿದರು.

Advertisement

ನಗರದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಸದಸ್ಯರು ಮತ್ತು ನಿದೇರ್ಶಕರನ್ನು ಉದ್ದೇಶಿಸಿ ಅವರು ಮಾತನಾಡಿ, ನೂತನ ಪಿಂಚಣಿ ಯೋಜನೆಯನ್ನು ಸರ್ಕಾರಿ ನೌಕರರ ಸಂಘ ವಿರೋಧಿಸುತ್ತಲೇ ಬಂದಿದೆ. ಹಳೆ ಪಿಂಚಣಿ ಯೋಜನೆಯನ್ನೇ ಜಾರಿಗೆ ತರಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಈಗಾಗಲೇ ಒತ್ತಾಯ ಹೇರಲಾಗಿದೆ. ಆದರೆ, ಸರ್ಕಾರಿ ನೌಕರರ ಈ ಬೇಡಿಕೆ ಈಡೇರಿಲ್ಲ. ಹೀಗಾಗಿ ತಾವು ಸಂಘದ ಅಧ್ಯಕ್ಷರಾಗಿ ಎನ್‌.ಪಿ.ಎಸ್‌ ಯೋಜನೆ ಬದಲಿಗೆ ಹಳೇ ಪಿಂಚಣಿ ಯೋಜನೆಯನ್ನೇ ಜಾರಿಗೆ ತರುವಂತೆ ಸರ್ಕಾರಗಳನ್ನು ಒತ್ತಾಯಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಮನವಿ: ಸರ್ಕಾರಿ ನೌಕರರ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಎಲ್ಲ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಜಿಲ್ಲಾ ಸಂಘದ ಪದಾಧಿಕಾರಿಗಳು, ತಾಲೂಕು ಸಂಘದ ಪದಾಧಿಕಾರಿಗಳ ಜೊತೆ ಚರ್ಚಿಸಿ ಪರಹಾರಕ್ಕೆ ಪ್ರಯತ್ನಿಸುತ್ತೇವೆ. ಸರ್ಕಾರಿ ನೌಕರರು ಕೆಲವು ಸವಲತ್ತುಗಳನ್ನು ಬಯಸಿ, ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿಯೂ ತಾವು ಪ್ರಯತ್ನ ಮಾಡುತ್ತೇವೆ ಎಂದರು.

ಜಿಲ್ಲಾ ನೌಕರರ ಬಗ್ಗೆ ಒಳ್ಳೆಯ ಅಭಿಪ್ರಾಯ: ರಾಮನಗರ ಜಿಲ್ಲೆಯ ಸರ್ಕಾರಿ ನೌಕರರ ಬಗ್ಗೆ ರಾಜ್ಯದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಈ ಅಭಿಪ್ರಾಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರಿ ನೌಕರರು ತಮ್ಮ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಮರಿದೇವರು ಸಾಮಾಜಿಕ ಕಾರ್ಯಕ್ರಮಗಳು ಸೇರಿದಂತೆ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಈ ಎಲ್ಲಾ ಕಾರ್ಯಕ್ರಮಗಳು ಮುಂದುವರಿಯಲಿವೆ ಎಂದು ತಿಳಿಸಿದರು.

Advertisement

ನಿರೀಕ್ಷೆ ಸಾಕಾರಗೊಳಿಸಲು ಪ್ರಯತ್ನ: ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ತಾವು ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ತಮ್ಮ ಬಗ್ಗೆ ವಿಶ್ವಾಸ ಇರಿಸಿ ಸರ್ಕಾರಿ ನೌಕರರು ತಮ್ಮನ್ನು ಆಯ್ಕೆ ಮಾಡಿದ್ದಾರೆ. ಚುನಾವಣೆ ನಡೆದ ಉಳಿದೆರೆಡು ಸ್ಥಾನಗಳು ಸಹ ತಮ್ಮ ಸಿಂಡಿಕೇಟ್‌ಗೆ ಲಭಿಸಿದೆ. ಮೂರನೇ ಬಾರಿಗೆ ಆಯ್ಕೆ ಮಾಡಿರುವ ನಿರ್ದೇಶಕರಿಗೆ ತಮ್ಮಿಂದ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿರುವುದು ಸಹಜ. ಸದಸ್ಯರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರೀಕ್ಷೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಸಂಘದ ಉಳಿದ ಪದಾಧಿಕಾರಿಗಳನ್ನು ನೇರ ನೇಮಕಾತಿ ಮಾಡಲಾಗುವುದು ಎಂದರು.

ಈ ವೇಳೆ ನಿದೇರ್ಶಕರಾದ ಕೃಷ್ಣೇಗೌಡ, ಕಾಂತರಾಜು, ಶಿವಸ್ವಾಮಿ, ಎಂ.ಅನಿತಾ, ರಾಜೇಗೌಡ, ಬೈರಪ್ಪ, ಸಿ.ಪ್ರಕಾಶ್‌, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ರಾಜಶೇಖರ್‌, ಚನ್ನಪಟ್ಟಣ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಎಸ್‌.ಚಂದ್ರಶೇಕರ್‌, ಕನಕಪುರ ತಾಲೂಕು ಸಂಘದ ಅಧ್ಯಕ್ಷ ನಂದೀಶ್‌, ಮಾಗಡಿ ತಾಲೂಕು ಸಂಘದ ಅಧ್ಯಕ್ಷ ಶಿವರಾಮಯ್ಯ.ಎಂ.ಸಿ. ಹಾಜರಿದ್ದರು.

ನಗರದ ಸ್ಫೂರ್ತಿ ಭವನದಲ್ಲಿ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್‌ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಿತು. ಖಜಾಂಚಿಯಾಗಿ ನರಸಯ್ಯ, ರಾಜ್ಯ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಆರ್‌.ಕೆ.ಬೈರಲಿಂಗಯ್ಯ ಮತ್ತು ಹನುಮಯ್ಯ ಅವರ ನಡುವೆ ಪೈಪೋಟಿ ಏರ್ಪಟಿತ್ತು. ಆರ್‌.ಕೆ.ಬೈರಲಿಂಗಯ್ಯಗೆ 42 ಮತಗಳು ಮತ್ತು ಹನುಮಯ್ಯಗೆ 23 ಮತಗಳು ಲಭ್ಯವಾಗಿವೆ. ಖಜಾಂಚಿ ಸ್ಥಾನಕ್ಕೆ ನರಸಯ್ಯ ಮತ್ತು ನರಸಿಂಹಯ್ಯ.ಸಿ ಸ್ಪರ್ಧಿಸಿದ್ದರು. ನರಸಯ್ಯ ಅವರು 46 ಮತಗಳನ್ನು ಪಡೆದು ಆಯ್ಕೆಯಾದರು. ನರಸಿಂಹಯ್ಯಗೆ 19 ಮತಗಳು ಲಭಿಸಿ ಪರಾಭವಗೊಂಡರು. ರಾಜ್ಯ ಪರಿಷತ್‌ ಸದಸ್ಯತ್ವ ಸ್ಥಾನಕ್ಕೆ ಸ್ಪರ್ಧಿಸಿದ್ದ ಸತೀಶ್‌ 44 ಮತಗಳನ್ನು ಪಡೆದು ರಾಜ್ಯ ಸಂಘದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ಯೋಗೇಶ್‌.ಎಂ.ಬಿ. 21 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ತೀರಾ ಇತ್ತೀಚಗಷ್ಟೆ ಚುನಾವಣೆ ನಡೆದು 62 ನಿರ್ದೇಶಕರು ಆಯ್ಕೆಯಾಗಿದ್ದರು. ಅಧ್ಯಕ್ಷ, ಖಜಾಂಜಿ ಹಾಗೂ ರಾಜ್ಯ ಪರಿಷತ್‌ ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ 62 ನಿರ್ದೇಶಕರು ಮತ್ತು ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ಸರ್ಕಾರಿ ನೌಕರರ ಸಂಘಗಳ ಅಧ್ಯಕ್ಷರು ತಮ್ಮ ಮತ ಹಕ್ಕು ಚಲಾಯಿಸಿದರು. ಚುನಾವಣಾಧಿಕಾರಿಯಾಗಿ ಕರೀಗೌಡ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ವೆಂಕಟಪ್ಪ ಕಾರ್ಯ ನಿರ್ವಹಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಆಯ್ಕೆ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆರ್‌.ಕೆ.ಬೈರಲಿಂಗಯ್ಯ ಮರು ಆಯ್ಕೆಯಾಗಿದ್ದಾರೆ. ನಗರದ ಸ್ಫೂರ್ತಿ ಭವನದಲ್ಲಿ ಅಧ್ಯಕ್ಷ, ಖಜಾಂಚಿ ಮತ್ತು ರಾಜ್ಯ ಪರಿಷತ್‌ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಿತು. ಖಜಾಂಚಿಯಾಗಿ ನರಸಯ್ಯ, ರಾಜ್ಯ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಆರ್‌.ಕೆ.ಬೈರಲಿಂಗಯ್ಯ ಮತ್ತು ಹನುಮಯ್ಯ ಅವರ ನಡುವೆ ಪೈಪೋಟಿ ಏರ್ಪಟಿತ್ತು. ಆರ್‌.ಕೆ.ಬೈರಲಿಂಗಯ್ಯಗೆ 42 ಮತಗಳು ಮತ್ತು ಹನುಮಯ್ಯಗೆ 23 ಮತಗಳು ಲಭ್ಯವಾಗಿವೆ. ಖಜಾಂಚಿ ಸ್ಥಾನಕ್ಕೆ ನರಸಯ್ಯ ಮತ್ತು ನರಸಿಂಹಯ್ಯ.ಸಿ ಸ್ಪರ್ಧಿಸಿದ್ದರು. ನರಸಯ್ಯ ಅವರು 46 ಮತಗಳನ್ನು ಪಡೆದು ಆಯ್ಕೆಯಾದರು. ನರಸಿಂಹಯ್ಯಗೆ 19 ಮತಗಳು ಲಭಿಸಿ ಪರಾಭವಗೊಂಡರು. ರಾಜ್ಯ ಪರಿಷತ್‌ ಸದಸ್ಯತ್ವ ಸ್ಥಾನಕ್ಕೆ ಸ್ಪರ್ಧಿಸಿದ್ದ ಸತೀಶ್‌ 44 ಮತಗಳನ್ನು ಪಡೆದು ರಾಜ್ಯ ಸಂಘದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ಯೋಗೇಶ್‌.ಎಂ.ಬಿ. 21 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ತೀರಾ ಇತ್ತೀಚಗಷ್ಟೆ ಚುನಾವಣೆ ನಡೆದು 62 ನಿರ್ದೇಶಕರು ಆಯ್ಕೆಯಾಗಿದ್ದರು. ಅಧ್ಯಕ್ಷ, ಖಜಾಂಜಿ ಹಾಗೂ ರಾಜ್ಯ ಪರಿಷತ್‌ ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ 62 ನಿರ್ದೇಶಕರು ಮತ್ತು ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿ ಸರ್ಕಾರಿ ನೌಕರರ ಸಂಘಗಳ ಅಧ್ಯಕ್ಷರು ತಮ್ಮ ಮತ ಹಕ್ಕು ಚಲಾಯಿಸಿದರು. ಚುನಾವಣಾಧಿಕಾರಿಯಾಗಿ ಕರೀಗೌಡ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ವೆಂಕಟಪ್ಪ ಕಾರ್ಯ ನಿರ್ವಹಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next