Advertisement

BJP ಸಾಮೂಹಿಕ ನಾಯಕತ್ವದಡಿ ಆಡಳಿತ ಪಕ್ಷದ ವಿರುದ್ಧ ಹೋರಾಟ: ಕೋಟ ಶ್ರೀನಿವಾಸ ಪೂಜಾರಿ

11:11 PM Dec 25, 2023 | Team Udayavani |

ಕೋಟ: ವಿಧಾನಪರಿಷತ್‌ನ ವಿಪಕ್ಷ ನಾಯಕ ಸ್ಥಾನದ ನಿರೀಕ್ಷೆ ಇರಲಿಲ್ಲ. ಆದರೆ ನನ್ನ ಹೆಸರು ಚಾಲ್ತಿಯಲ್ಲಿದ್ದದ್ದು ಗಮನದಲ್ಲಿತ್ತು. ಪಕ್ಷ ನನ್ನ ಹೋರಾಟವನ್ನು ಗುರುತಿಸಿ ಈ ಸ್ಥಾನ ನೀಡಿರುವುದಕ್ಕೆ ಸಂತಸವಾಗಿದೆ.

Advertisement

ಪಕ್ಷದ ಎಲ್ಲ ನಾಯಕರನ್ನು ಜತೆ ಸೇರಿಸಿಕೊಂಡು ಸಾಮೂಹಿಕ ನಾಯಕತ್ವದಡಿ ಆಡಳಿತ ಪಕ್ಷದ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ವಿಧಾನಪರಿಷತ್‌ನ ನೂತನ ವಿಪಕ್ಷ ನಾಯಕನಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದರು.

ಅವರು ಸೋಮವಾರ ಸಾಲಿಗ್ರಾಮ ದಲ್ಲಿ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದರು.

ಪಕ್ಷ ಮೂರು ಬಾರಿ ನನ್ನನ್ನು ಮಂತ್ರಿ ಮಾಡಿದೆ. ಎರಡನೇ ಬಾರಿ ಮೇಲ್ಮನೆಯ ವಿಪಕ್ಷ ನಾಯಕನ ಸ್ಥಾನ ನೀಡಿದೆ ಎಂದರು.

ಬರ, ನೀರಾವರಿ ಸಮಸ್ಯೆಗೆ ಆದ್ಯತೆ
ಬರ ಪರಿಹಾರಕ್ಕೆ ಸರಕಾರ ಸಮಪರ್ಕ ವಾಗಿ ಕ್ರಮ ಕೈಗೊಂಡಿಲ್ಲ. ನೀರಾವರಿ ಸಮಸ್ಯೆಗಳು ಜೀವಂತ ವಾಗಿದೆ. ಪ.ಜಾತಿ/ಪಂಗಡದ 11 ಕೋಟಿ ಅನುದಾನವನ್ನು ಸರಕಾರ ವಾಪಸು ತೆಗೆದಿದೆ. ಇದೆಲ್ಲವನ್ನು ಪ್ರಶ್ನಿಸಿ ಹೋರಾಟ ನಡೆಸುತ್ತೇವೆ. ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲ ವಿಚಾರಗಳಿಗೂ ಧ್ವನಿಯಾಗುತ್ತೇವೆ ಎಂದರು.

Advertisement

ಯತ್ನಾಳ್‌ ಜತೆ ನಾಯಕರು ಚರ್ಚೆ
ಉತ್ತರಕರ್ನಾಟಕ್ಕೆ ಆದ್ಯತೆ ನೀಡಬೇಕು ಎನ್ನುವ ಯತ್ನಾಳ್‌ ಅವರ ಕೂಗಿನ ಕುರಿತು ಕೇಳಿದ ಪ್ರಶ್ನೆಗೆ, ವಿಧಾನಪರಿಷತ್‌ನ ಸಭಾಪತಿ ಹೊರಟ್ಟಿಯವರು ಆ ಭಾಗದವ ರಾಗಿದ್ದಾರೆ ಹಾಗೂ ಇದೀಗ ಸುನೀಲ್‌ ವಲ್ಯಾಪುರೆ ಅವರನ್ನು ವಿಪಕ್ಷ ಉಪನಾಯಕನ್ನಾಗಿ ಮಾಡಲಾಗಿದೆ. ಆದ್ದರಿಂದ ಉತ್ತರ ಕರ್ನಾಟಕ್ಕೆ ಎಲ್ಲಿಯೂ ತಾರತಮ್ಯವಾಗಿಲ್ಲ ಹಾಗೂ ಯತ್ನಾಳ್‌ ಅವರ ಜತೆ ನಮ್ಮ ಪಕ್ಷದ ವರಿಷ್ಠರು ಈಗಾಗಲೇ ಮಾತುಕತೆ ನಡೆಸಿದ್ದು, ನಮ್ಮಲ್ಲಿ ಅಸಮಾಧಾನವಿಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next