ಗದಗ: ಮಾದಕ ವಸ್ತುಗಳು, ಗುಟ್ಕಾ, ತಂಬಾಕು ಸೇವನೆಯಿಂದ ಯುವಜನರ ಆರೋಗ್ಯ ಕ್ಷೀಣಿಸುತ್ತಿದೆ. ಸದೃಢ ಯುವಕರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗಬೇಕಾದರೆ ದುಶ್ಚಟಗಳಿಂದ ದೂರವಾಗಬೇಕು ಎಂದು ಡಾ|ಎಸ್.ಸಿ.ಮಲ್ಲಾಡದ ಹೇಳಿದರು.
ಡಾ|ಎಸ್.ಸಿ.ಮಲ್ಲಾಡದ ಅವರ ಅಭಿಮಾನಿಗಳು, ಸಮಾನ ಮನಸ್ಕರು ನಗರದ ಮಲ್ಲಾಡದ ಅವರ ಕಟ್ಟಡದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣದಲ್ಲಿ ವೈದ್ಯ ಹಾಗೂ ವೈದ್ಯಕೀಯ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು, ಜನರ ಸೇವೆ ಸಲ್ಲಿಸಿರುವುದು ಸ್ಮರಣೀಯ ಎಂದರು.
ಕೊರೊನಾ ಅವ ಧಿಯಲ್ಲಿ ಹೆರಿಗೆ, ಸಾಮಾನ್ಯ ಕಾಯಿಲೆಗಳಿಂದ ಹಿಡಿದು ಭಯಂಕರ ಕಾಯಿಲೆಗಳನ್ನೂ ಸಹ ವೈದ್ಯ ವೃಂದ ಸಲ್ಲಿಸಿದ ಸೇವೆ ಅಮೋಘ. ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಅನಾರೋಗ್ಯದ ಸಂದರ್ಭದಲ್ಲಿ ಯಾವುದೇ ರೀತಿಯ ಉದ್ವೇಗಕ್ಕೆ ಒಳಗಾಗದೇ ಶಾಂತಿ, ಸಮಾಧಾನದಿಂದ ವರ್ತಿಸಬೇಕು ಎಂದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ, ಡಾ|ಎಸ್.ಸಿ.ಮಲ್ಲಾಡದ ಅವರ ಬಗ್ಗೆ ಅಭಿನಂದನಾ ಪರ ಮಾತನಾಡಿದರು. ಇದೇ
ವೇಳೆ ಡಾ|ಮಲ್ಲಾಡದ, ಕುಸುಮಾ ದಂಪತಿಯನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ|ಶ್ರೀಧರ ಕುರಡಗಿ, ಡಾ|ಜಗದೀಶ ಭೂಮರಡ್ಡಿ, ಡಾ|ನಾರಾಯಣ ಬುರಬುರೆ, ಡಾ|ಉಮೇಶ ಹಾದಿ, ಪತ್ರಕರ್ತ ಮಂಜುನಾಥ ಅಬ್ಬಿಗೇರಿ, ಚನ್ನಯ್ಯ ಹಿರೇಮಠ, ಲೆಕ್ಕ ಪರಿಶೋಧಕ ಕೆ.ಎಸ್.ಚೆಟ್ಟಿ, ಎಸ್.ಎಸ್.ಚೆಟ್ಟಿ, ಚೆನ್ನವೀರಪ್ಪ ಸರ್ವಿ, ಎಸ್.ಆರ್.ನಂದಿವಾಡ, ಸ್ವರೂಪ ಮುದ್ದಳ್ಳಿ ಮತ್ತು ಮಲ್ಲಾಡದ ಬಂಧುಗಳು ಉಪಸ್ಥಿತರಿದ್ದರು.