Advertisement

ಬಲಿಷ್ಠ ಭಾರತ ನಿರ್ಮಾಣ ಕಾಂಗ್ರೆಸ್‌ ಕನಸು: ಖಾದರ್‌

07:25 AM Aug 08, 2017 | Team Udayavani |

ಬಂಟ್ವಾಳ : ನೆಮ್ಮದಿಯ ಸಮಾಜ, ಅಭಿವೃದಿಯ ಕರ್ನಾಟಕ ಮತ್ತು ಬಲಿಷ್ಠ ಭಾರತ ನಿರ್ಮಾಣ ಕಾಂಗ್ರೆಸ್‌ನ ಕನಸಾಗಿದೆ. ಸಿದ್ದರಾಮಯ್ಯ ಸರಕಾರ ಈ ಕನಸನ್ನು ನನಸಾಗಿಸುವತ್ತ ದಾಪುಗಾಲಿಡುತ್ತಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್‌ ಹೇಳಿದರು.

Advertisement

ಅವರು ಆ. 6ರಂದು ಪುದು ವಲಯ ಕಾಂಗ್ರೆಸ್‌ ಸಮಿತಿ ಹಾಗೂ ಯುವ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ಫರಂಗಿಪೇಟೆ ಶುಹಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ನನ್ನ  ಕ್ಷೇತ್ರವ್ಯಾಪ್ತಿಯಲ್ಲಿ ಜನರ ಮುಂದೆ ಸ್ವಾಭಿಮಾನದಿಂದ ತಲೆ ಎತ್ತಿಕೊಂಡು ಹೋಗುವ ಅವಕಾಶ ನಿರ್ಮಾಣವಾಗಿದೆ. ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡೆದಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಕೇಂದ್ರ ಸರಕಾರ ಪ್ರಯೋಜನವಿಲ್ಲ 
ಕೇಂದ್ರದಲ್ಲಿ ಬಿಜೆಪಿ ಸರಕಾರಕ್ಕೆ ಅಧಿಕಾರಕ್ಕೆ ಬಂದ ನಂತರ ಜನಸಾಮಾನ್ಯರಿಗೆ ಪ್ರಯೋಜನವಾಗುವ ಯಾವುದೇ ಯೋಜನೆಗಳು ಜಾರಿಗೆ ಬಂದಿಲ್ಲ ಎಂದು ಟೀಕಿಸಿದ ಅವರು ಪಕ್ಷ ಸಂಘಟನೆಯ  ಹಿನ್ನಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ತಮ್ಮ ಬೂತ್‌ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸ ಬೇಕು.  ಯುವ ಕಾರ್ಯಕರ್ತರು ಎದ್ದು ನಿಂತರೆ ಈ ರಾಜ್ಯದಲ್ಲಿ ಕಾಂಗ್ರೆಸನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು  ವಿಶ್ವಾಸ ವ್ಯಕ್ತ ಪಡಿಸಿದರು.

ಈ ಸಂದರ್ಭ ಜಿ.ಪಂ.ಮಾಜಿ ಸದಸ್ಯ ಉಮ್ಮರ್‌ ಫಾರೂಕ್‌, ಮಂಗಳೂರು ತಾ.ಪಂ.ಸದಸ್ಯ ಮಹಮ್ಮದ್‌ ಮೋನು, ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಪುದು ಗ್ರಾ.ಪಂ.ಉಪಾಧ್ಯಕ್ಷ ಹಾಶೀರ್‌ ಪೇರಿಮಾರ್‌, ಮನಪಾ ಕಾರ್ಪೋರೇಟರ್‌ ವಿನಯರಾಜ್‌, ಯುವ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ  ಲುಕಾ¾ನ್‌,  ತಾ.ಪಂ.ಸದಸ್ಯೆ ಪದ್ಮಶ್ರೀ ದುಗೇìಶ್‌,  ತಾ.ಪಂ.ಮಾಜಿ ಸದಸ್ಯ ಆಸೀಫ್‌ ಇಕ್ಬಾಲ್‌, ಇಸ್ಮಾಯಿಲ್‌ ಕೆಇಎಳ್‌, ರಫೀಕ್‌ ಪೇರಿಮಾರ್‌,  ಪುದು  ಪಂಚಾಯತ್‌  ಸದಸ್ಯ ರಮ್ಲಾನ್‌, ಇಕ್ಬಾಲ್‌ ಸುಜೀರು, ಝಾಹೀರ್‌, ಅಖ್ತರ್‌ ಹುಸೆ„ನ್‌,   ಪಕ್ಷ ಪ್ರಮುಖರಾದ ಎಫ್‌.ಎ. ಖಾದರ್‌, ವೃಂದ ಪೂಜಾರಿ, ಸೌಕತ್‌ ಅಲಿ, ಇಶಾನ್‌, ಮಜೀದ್‌ ಫರಂಗಿಪೇಟೆ, ಸಿದ್ದೀಕ್‌, ಫೆ„ರೋಝ್, ಇಮಿ¤ಯಾಝ್ ತುಂಬೆ, ಆಸೀಫ್‌ ಮೇಲ್ಮನೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next