Advertisement
ಹೌದು. ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಲೀಡ್ ಕೊಡಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಸೇಡನ್ನು ಈ ಲೋಕಸಭಾ ಚುನಾವಣೆಯಲ್ಲಿ ತೀರಿಸಿಕೊಳ್ಳುವ ಜೊತೆಗೆ ಸಿದ್ದರಾಮಯ್ಯ ಅವರ ಮುಂದೆ ತಮ್ಮ ಶಕ್ತಿ ಪ್ರದರ್ಶಿಸಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಅವರು ರಾಜಶೇಖರ ಹಿಟ್ನಾಳ ಗೆಲುವಿಗೆ ಟೊಂಕ ಕಟ್ಟಿದ್ದಾರೆ.ಆದರೆ ಈ ಕ್ಷೇತ್ರಕಮಲದ ವಶದಲ್ಲಿದ್ದು ಶಾಸಕ ಬಸವರಾಜ ದಢೇಸುಗೂರು ತಮ್ಮಕಾರ್ಯಕರ್ತರಪಡೆ ಕಟ್ಟಿಕೊಂಡು ಮತಬೇಟೆ ನಡೆಸಿದ್ದಾರೆ.
Related Articles
Advertisement
ಈ ಬಾರಿ ಸಂಗಣ್ಣ ಕರಡಿ ಪಡೆ ಕಟ್ಟಿಕೊಂಡು ಭರ್ಜರಿ ಪ್ರಚಾರ ನಡೆಸಿ ಮತ ಸೆಳೆಯುವಲ್ಲಿ ತಂತ್ರಗಾರಿಕೆ ಹೆಣೆದಿದ್ದರೆ, ಶಿವರಾಜ ತಂಗಡಗಿ ತಮ್ಮ ಪಡೆಯೊಂದಿಗೆ ರಾಜಶೇಖರ ಹಿಟ್ನಾಳ ಪರ ಹಗಲಿರುಳು ಪ್ರಚಾರ ನಡೆಸಿ ಮತಗಳನ್ನು ಸೆಳೆದಿದ್ದಾರೆ ಎಂದೆನ್ನಲಾಗುತ್ತಿದೆ. ಕೆಲವೆಡೆ ತಂಗಡಗಿ ವಿರೋಧಿ ಅಲೆ ಎನ್ನುವ ಮಾತಿದ್ದರೂ, ಇತ್ತೀಚಿನ ದಿನಗಳಲ್ಲಿ ದಢೇಸುಗೂರು ಅಭಿವೃದ್ಧಿ ನಿಧಾನಗತಿಯಿದೆ ಎನ್ನುವ ಚರ್ಚೆಗಳು ಕೇಳಿ ಬಂದಿವೆ.
ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಶೇ. 69.66 ಮತದಾನವಾಗಿದ್ದರೆ ಈ ಭಾರಿ ಶೇ. 71.31ರಷ್ಟು ಮತದಾನವಾಗಿದೆ. ಕಳೆದ ಬಾರಿಗಿಂತ ಶೇ. 2ರಷ್ಟು ಮತಪ್ರಮಾಣ ಹೆಚ್ಚಾಗಿದ್ದು, ಯುವ ಮತಗಳು ಮೋದಿಗೆ ಪ್ಲಸ್ ಆಗಲಿವೆ ಎನ್ನುತ್ತಿದ್ದಾರೆ.
ಯಲ್ಲಿ ಕನಕಗಿರಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ನಮ್ಮನಾಯಕರಾದ ಶಿವರಾಜ ತಂಗಡಗಿ ಸೇರಿದಂತೆ ಇತರೆ ನಾಯಕರು ಒಟ್ಟಾಗಿ ಚುನಾವಣೆ ನಡೆಸಿದ್ದು, ಕಳೆದ ಬಾರಿ ಈ ಕ್ಷೇತ್ರದಲ್ಲಿ ನಮಗಿದ್ದ ಮೈನಸ್ ಈ ಬಾರಿ ಪ್ಲಸ್ ಆಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಹಿಂದಿನ ಸರ್ಕಾರದ ಅವಧಿ–ರಾಜಶೇಖರ ಹಿಟ್ನಾಳ, ಕಾಂಗ್ರೆಸ್ ಅಭ್ಯರ್ಥಿ ಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಮ್ಮ ಶಾಸಕರಾದ ಬಸವರಾಜ ದಢೇಸುಗೂರು ಸೇರಿದಂತೆ ಇತರೆ ನಾಯಕರು ಈ ಬಾರಿ ಒಗ್ಗಟ್ಟಾಗಿ ಶ್ರಮಿಸಿದ್ದಾರೆ.ಮತ್ತೆ ಈ ಕ್ಷೇತ್ರದಲ್ಲಿ ನನಗೆ ಮುನ್ನಡೆಸಿಗುವುದು ಬಹುತೇಕ ಖಚಿತ. ಕನಕಗಿರಿ ವಿಧಾನಸಭಾ ಕ್ಷೇತ್ರವು ಕಳೆದ ಚುನಾವಣೆಯಲ್ಲಿ ನಮಗೆ ಲೀಡ್ ಕೊಟ್ಟಿದೆ. ನನ್ನ 5 ವರ್ಷಗಳ ಅವ
–ಸಂಗಣ್ಣ ಕರಡಿ, ಬಿಜೆಪಿ ಅಭ್ಯರ್ಥಿ .ದತ್ತು ಕಮ್ಮಾರ