Advertisement

ಉತ್ತರ ಭಾರತದಲ್ಲಿ ಕಂಪಿಸಿದ ಭೂಮಿ ; ಅಫ್ಘಾನಿಸ್ಥಾನದಲ್ಲಿ ಭೂಕಂಪದ ಕೇಂದ್ರ ಬಿಂದು

10:05 AM Dec 21, 2019 | Hari Prasad |

ನವದೆಹಲಿ: ಉತ್ತರ ಭಾರತ, ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನಗಳಲ್ಲಿ ಶುಕ್ರವಾರದಂದು ತೀವ್ರ ಭೂಕಂಪನದ ಅನುಭವವಾಗಿದೆ. ಸಾಯಂಕಾಲ 5 ಗಂಟೆಯ ಸುಮಾರಿಗೆ ಈ ಭಾಗಗಳಲ್ಲಿ ಭೂಕಂಪನದ ಅನುಭವವಾಯಿತು ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಅಫ್ಘಾನಿಸ್ಥಾನದ ಹಿಂದ್ ಕುಶ್ ಪ್ರಾಂತ್ಯದಲ್ಲಿ ಈ ಭೂಕಂಪದ ಕೇಂದ್ರಬಿಂದು ಇತ್ತು ಎಂದು ತಿಳಿದುಬಂದಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.8ರಷ್ಟು ದಾಖಲಾಗಿದೆ.


ಭೂಕಂಪನದ ಬಳಿಕ ಉತ್ತರಪ್ರದೇಶದ ಮಥುರಾ, ಲಕ್ನೋ, ಪ್ರಯಾಗ್ ರಾಜ್ ಹಾಗೂ ಜಮ್ಮು ಕಾಶ್ಮೀರದ ಕೆಲ ಭಾಗಗಳಲ್ಲಿ ಮತ್ತು ಉತ್ತರ ಭಾರತದ ಇನ್ನಿತರ ಪ್ರದೇಶಗಳಲ್ಲಿ ಲಘು ಕಂಪನವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಇನ್ನುಳಿದಂತೆ ರಾಷ್ಟ್ರ ರಾಜಧಾನಿ ದೆಹಲಿ, ಚಂಢೀಗಢ, ಫರೀದ್ ಕೋಟ್, ಡಾಲ್ ಹೌಸಿ, ಚಂಬಾ, ಡೆಹ್ರಾಡೂನ್, ಶ್ರೀನಗರ, ಜಮ್ಮು, ನೋಯ್ಡಾ, ಗಾಝಿಯಾಬಾದ್, ಗುರ್ಗಾಂವ್ ಸೇರಿದಂತೆ ಪಾಕಿಸ್ಥಾನದ ಇಸ್ಲಮಾಬಾದ್ ಹಾಗೂ ಲಾಹೋರ್ ಭಾಗಗಳಲ್ಲಿಯೂ ಭೂಮಿ ಕಂಪಿಸಿರುವ ವರದಿಗಳು ಲಭ್ಯವಾಗಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next