Advertisement

ಗಲಭೆ ಸೃಷ್ಟಿಸುವ ರೀತಿಯ ಪ್ರಚಾರ ವಿರುದ್ಧ ಕಠಿನ ಕ್ರಮ: ಎಸ್‌.ಪಿ.

02:55 AM Jul 08, 2017 | |

ಕಾಸರಗೋಡು: ಪರಸ್ಪರ ವೈಯಕ್ತಿಕ ವಿಷಯದಲ್ಲಿ ಜಗಳ ಉಂಟಾದರೂ ಅದನ್ನು ವೈಭವೀಕರಿಸಿ ಸಾಮಾಜಿಕ ತಾಣಗಳಲ್ಲಿ ಉದ್ದೇಶಪೂರ್ವಕವಾಗಿ ಪ್ರಚಾರ ಮಾಡುವ ಮೂಲಕ ಗಲಭೆಗೆ ಯತ್ನಿಸುತ್ತಿರುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಪೊಲೀಸ್‌ ವರಿಷ್ಠ ಅಧಿಕಾರಿ ಕೆ.ಜಿ. ಸೈಮನ್‌ ಮುನ್ನೆಚ್ಚರಿಕೆ ನೀಡಿದ್ದಾರೆ.

Advertisement

ಕಾಸರಗೋಡು ಮತ್ತು ಪರಿಸರದಲ್ಲಿ ಪದೇ ಪದೇ ಆಹಿತಕರ ಘಟನೆಗಳು ನಡೆಯುತ್ತವೆ. ಈ ಬಗ್ಗೆ ಕಠಿನ ಕ್ರಮ ಕೈಗೊಳ್ಳಲಾಗುವುದು. ಆದರೆ ಕೇವಲ ವೈಯುಕ್ತಿಕ ವಿಷಯ ದಲ್ಲಿ ಉಂಟಾದ ಘರ್ಷಣೆಯನ್ನು ಬೇರೆ ರೀತಿಯಲ್ಲಿ ಚಿತ್ರೀಕರಿಸಿ ವಾಟ್ಸಪ್‌ ಫೇಸ್‌ಬುಕ್‌ ಇತ್ಯಾದಿ ಸಾಮಾಜಿಕ ತಾಣಗಳಲ್ಲಿ ಕೆಲವರು ಉದ್ದೇಶಪೂರ್ವಕ ಪ್ರಚಾರ ಮಾಡಿ ಗಲಭೆಗೆ ಕಾರಣವಾಗುತ್ತಿದ್ದಾರೆ.
 
ಇಂತಹ ಸಂದೇಶ ರವಾನಿಸುವವರನ್ನು ಸೈಬರ್‌ ಸೆಲ್‌ನ ಸಹಾಯ ದಿಂದ ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ನಕಲಿ ಪ್ರಚಾರಗಳ ವಿರುದ್ಧ ಮತೀಯ ಮತ್ತು ಜಾತೀಯ ಸಂಘಟನೆಗಳು ಜಾಗ್ರತೆ ಪಾಲಿಸಬೇಕು ಎಂದಿದ್ದಾರೆ.

ಕಾಸರಗೋಡು ಮತ್ತು ಪರಿಸರ ಪ್ರದೇಶಗಳಲ್ಲಿ ಶಾಂತಿ ಮತ್ತು ಉತ್ತಮ ರೀತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಎಲ್ಲರೂ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್‌ ವರಿಷ್ಠ ಅಧಿಕಾರಿ ವಿನಂತಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next