Advertisement

ಪಾರ್ಶ್ವವಾಯು: ಲಕ್ಷಣ, ಚಿಕಿತ್ಸೆ

06:00 AM Dec 10, 2017 | |

ನಾವು ನಮ್ಮ ಸಾಧಾರಣ ದಿನನಿತ್ಯದ ಜೀವನದಲ್ಲಿ ಕಾರ್ಯನಿರತರಾಗಿದ್ದಾಗ ಆರೋಗ್ಯ ನಿರ್ಲಕ್ಷ್ಯ ಮಾಡಬಹುದು. ಇಂತಹ ಜೀವನ ಶೈಲಿಯಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು care  ಮಾಡುವುದಿಲ್ಲ. ಭೂಕಂಪ ಬರುವುದಕ್ಕಿಂತ ಮುಂಚೆ ಸಾಧಾರಣ ಭೂಕಂಪ ಅಲೆಗಳು ಸೂಚನೆ ಕೊಡಬಹುದು. ಅದೇ ತರಹ ಪಾರ್ಶ್ವವಾಯುವಿ ನಂಥ ಕಾಯಿಲೆಗಳು ಮುಂಚಿತವಾಗಿ ಲಕ್ಷಣ ಕೊಟ್ಟೆ ಕೊಡುತ್ತವೆ. ಸರಿಯಾದ ಸಮಯದಲ್ಲಿ ಸೂಕ್ತ ಪರಿಹಾರ ಮಾಡಿದರೆ ಸಮಸ್ಯೆಯನ್ನು ತಡೆಗಟ್ಟಬಹುದು. ಜಾಗತಿಕ ಪಾರ್ಶ್ವವಾಯು ಸಂಸ್ಥೆ ಸಮೀಕ್ಷೆ ಪ್ರಕಾರ 6 ಜನರಲ್ಲಿ ಒಬ್ಬರು ಈ ರೋಗಕ್ಕೆ ತುತ್ತಾಗುತ್ತಾರೆ.

Advertisement

ಪಾರ್ಶ್ವವಾಯು  ಎಂದರೇನು ?
ಪಾರ್ಶ್ವವಾಯು ಮೆದುಳಿನ ನರದ ಕಾಯಿಲೆ. ಮೆದುಳಿನ ರಕ್ತಸಂಚಾರಕ್ಕೆ ಇದ್ದಕ್ಕಿದ್ದ ಹಾಗೆ ಅಡಚಣೆ ಬಂದರೆ ಪಾರ್ಶ್ವವಾಯು ಬರಬಹುದು. ಈ ಅಡಚಣೆ ರಕ್ತ ಹೆಪ್ಪುಗಟ್ಟಿದರೆ/ ರಕ್ತಸ್ರಾವ ಆದರೆ ಬರಬಹುದು. ತ್ವರಿತಗತಿಯಲ್ಲಿ ರಕ್ತ ಅಡಚಣೆ ಆದನಂತರ ಮೆದುಳಿನ ನರದ ಚಟುವಟಿಕೆ ಕಡಿಮೆ ಆಗುತ್ತದೆ.

ಪಾರ್ಶ್ವವಾಯು ಲಕ್ಷಣವೇನು ?
ಪಾರ್ಶ್ವವಾಯು ಬಂದರೆ ಒಂದು ಭಾಗದಲ್ಲಿ ನಿಶ್ಶಕ್ತಿ ಬರಬಹುದು. ಮಾತಿನ ತೊಂದರೆಗಳು ಬರಬಹುದು. ಉದಾಹರಣೆಗೆ – ಮಾತಿನ ಅಸ್ಪಷ್ಟತೆ, ವಾಕ್‌ಸ್ತಂಭನ, ನಡೆದಾಟದಲ್ಲಿ ಅಸಮತೋಲನ, ತಲೆಸುತ್ತು, ತಲೆನೋವು, ದೃಷ್ಟಿ ದೌರ್ಬಲ್ಯ, ಮುಂತಾದ ಲಕ್ಷಣಗಳು ಬರಬಹುದು.

ಪಾರ್ಶ್ವವಾಯು 
ಮುನ್ನ ಲಕ್ಷಣಗಳೇನು ?

ಪಾರ್ಶ್ವವಾಯು ಆಗುವ ಮುಂಚೆ ಮುನ್ಸೂಚನೆ ಕೊಡಬಹುದು. ಮೇಲಿನ ಲಕ್ಷಣಗಳು ಕಡಿಮೆ ಪ್ರಮಾಣದಲ್ಲಿ ಹಾಗೂ ಕಡಿಮೆ ಅವಧಿಯಲ್ಲಿ ಬರಬಹುದು. ಲಕ್ಷಣಗಳು ಒಂದು ಗಂಟೆಯೊಳಗೆ ಸರಿ ಆಗಿದ್ದಲ್ಲಿ   ಖಐಅ ಎಂದು ಹೆಸರಿಡಲಾಗಿದೆ. ಖಐಅ ಬಂದ ತತ್‌ಕ್ಷಣ ಚಿಕಿತ್ಸೆ ಮಾಡಿದರೆ ಪಾರ್ಶ್ವವಾಯನ್ನು ತಡೆಗಟ್ಟಬಹುದು.

ಪಾರ್ಶ್ವವಾಯು ಉಂಟಾದರೆ
ಏನು ಮಾಡಬೇಕು ?

ಪಾರ್ಶ್ವವಾಯು ಲಕ್ಷಣ ಕಂಡುಬಂದರೆ  ರೋಗಿಯನ್ನು ತತ್‌ಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಆಸ್ಪತ್ರೆಯಲ್ಲಿ ನರತಜ್ಞರ ಸಲಹೆ ಪಡೆಯಬೇಕು. ಆಸ್ಪತ್ರೆಯಲ್ಲಿ ತತ್‌ಕ್ಷಣ Scan (CT/MRI) ಮಾಡಲಾಗುತ್ತದೆ. CT/MRI Scanಲ್ಲಿ  ಎರಡು ರೀತಿಯ ಸಮಸ್ಯೆ ಕಾಣಬಹುದು. ರಕ್ತ ಹೆಪ್ಪುಗಟ್ಟುವಿಕೆ (Ischemic ಪಾರ್ಶ್ವವಾಯು ಎಂದು ಕರೆಯತ್ತಾರೆ. ರಕ್ತಸ್ರಾವ ಆದರೆ Hemorragic ಪಾರ್ಶ್ವವಾಯು ಎಂದು ಕರೆಯುತ್ತಾರೆ. Ischemic ಪಾರ್ಶ್ವವಾಯು ಇದ್ದರೆ ರಕ್ತ ಹೆಪ್ಪುಗಟ್ಟಿದ್ದನ್ನು ಸೂಜಿಮದ್ದು ಕೊಟ್ಟು ಸರಿಮಾಡಬಹುದು. ಈ ಸೂಜಿಮದ್ದಿನ ಹೆಸರು Alteplase Tissue Plasminogen Activator) ಈ ಸೂಜಿಮದ್ದು 4 ಗಂಟೆ ಒಳಗೆ ಕೊಟ್ಟರೆ ಪಾರ್ಶ್ವವಾಯು ಗುಣಮುಖವಾಗಬಹುದು. ಈ ಸಮಯವನ್ನು ಕಳೆದುಕೊಂಡರೆ ಪಾರ್ಶ್ವವಾಯು ಚಿಕಿತ್ಸೆ ಮಾಡುವುದು ಬಹಳ ಕಷ್ಟ. ಆದರೆ ಕೆಲವು ವಿಪರೀತ ಸಂದರ್ಭಗಳ‌ಲ್ಲಿ ಈ ಸೂಜಿಮದ್ದು ಕೊಡಬಾರದು.

Advertisement

Alteplase ಸೂಜಿಮದ್ದು
ಕೊಡುವ ವಿರೋಧಾಭಾಸಗಳು 
ಏನು ?

* CT scanಲ್ಲಿ ರಕ್ತಸ್ರಾವ, ಅತಿ ಹೆಚ್ಚು ರಕ್ತವೊತ್ತಡ, ಅತಿ ಕಡಿಮೆ ಅಥವಾ ಅತಿ ಹೆಚ್ಚು ಸಕ್ಕರೆ, CT ಸ್ಕ್ಯಾನ್‌ಲ್ಲಿ ಅತಿ ದೊಡ್ಡ  Hard (Colt) 14 ದಿನದೊಳಗೆ ಶಸ್ತ್ರಕ್ರಿಯೆ ಮಾಡಿದರೆ, 21 ದಿನದೊಳಗೆ ರಕ್ತವಾಂತಿ ಆಗಿದ್ದರೆ, 3 ತಿಂಗಳೊಳಗೆ ಸ್ಟ್ರೋಕ್‌ ಅಥವಾ ಮೆದುಳು ಶಸ್ತ್ರಕ್ರಿಯೆ ಆದರೆ, ಮುಂತಾದ ಸಂದರ್ಭಗಳು ಸೂಜಿಮದ್ದು ಕೊಡುವ ವಿರೋಧಾಭಾಸ.

ಪಾರ್ಶ್ವವಾಯು ಕಾರಣವೇನು ?
ಜಡ ಜೀವನಶೈಲಿ ಒಂದು ಮುಖ್ಯವಾದ ಕಾರಣ. ರಕ್ತದವೊತ್ತಡ, ಮಧುಮೇಹ, ಧೂಮಪಾನ, ಮದ್ಯಸೇವನೆ, ಹೃದಯ ಸಂಬಂಧಪಟ್ಟ ಕಾಯಿಲೆಗಳು. ಸಾಧಾರಣ ಆನುವಂಶಿಕವಾಗಿ ಪಾರ್ಶ್ವವಾಯು ಬರುವುದಿಲ್ಲ.

ಪಾರ್ಶ್ವವಾಯು 
ಹೇಗೆ ತಡೆಗಟ್ಟಬಹುದು ?

ಈವತ್ತಿನ ಒತ್ತಡ ನಿರತ ಜೀವನದಲ್ಲಿ ನಮಗೆ ನಮ್ಮ ಆರೋಗ್ಯದ ಮೇಲೆ ಹೆಚ್ಚು ಲಕ್ಷ್ಯಕೊಡಲಿಕ್ಕೆ ಆಗುವುದಿಲ್ಲ. ಇದೀಗ 21ನೇ ಶತಮಾನದ ಲೋಕ. ಲೋಕವನ್ನು ನಾವು ಬದಲಾಯಿಸಲಿಕ್ಕೆ ಆಗುವುದಿಲ್ಲ. ನಮ್ಮ  ಆರೋಗ್ಯ ಕಾಳಜಿ ನಮ್ಮ ಜವಾಬ್ದಾರಿ. ಪ್ರತಿದಿನ 30 ನಿಮಿಷ ವೇಗ ನಡೆದು (Brisn walk) ಮಾಡಿದರೆ ರಕ್ತವೊತ್ತಡ, ಮಧುಮೇಹ ಕಡಿಮೆ ಆಗುತ್ತದೆ. ಹಾಗೂ ಪಾರ್ಶ್ವವಾಯು ಬರುವ ಅವಕಾಶ ಕಡಿಮೆ ಆಗುತ್ತದೆ. ಆಹಾರದಲ್ಲಿ ಅತಿ ಕಡಿಮೆ ಉಪ್ಪು, ಹಣ್ಣು ಉಪಯೋಗ ಆರೋಗ್ಯಕ್ಕೆ ಮಾರಕ. ತಂಬಾಕು ಹಾಗೂ ಮದ್ಯಸೇವನೆ ಇದ್ದರೆ ಅದನ್ನು ಪೂರ್ತಿಯಾಗಿ ನಿಲ್ಲಿಸಬೇಕು. ಪಾರ್ಶ್ವವಾಯು ಬಂದ ಅನಂತರ ರಕ್ತ ತೆಳು ಮಾಡುವಂತ ಮದ್ಯ ಪ್ರತಿ ದಿನ ಜೀವನಪೂರ್ತಿ ತೆಗೆದುಕೊಳ್ಳಬೇಕು. ಆಹಾರದಲ್ಲಿ ಎಣ್ಣೆ (ತೆಂಗಿನೆಣ್ಣೆ) ಉಪಯೋಗ ಕಡಿಮೆ ಮಾಡಬೇಕು.

ಪಾರ್ಶ್ವವಾಯು 
ಗುಣಪಡಿಸಬಹುದೇ ?

ಹೌದು. ಪಾರ್ಶ್ವವಾಯು ಲಕ್ಷಣ ಕಂಡುಬಂದಿದ್ದ ವರಲ್ಲಿ ಅತಿ ಶೀಘ್ರ ಆಸ್ಪತ್ರೆ ಹೋಗಿ ಸ್ಕ್ಯಾನ್‌ ತಪಾಸಣೆ ಮಾಡಿ, Alteplase ಸೂಜಿಮದ್ದು ಕೊಟ್ಟರೆ ಸ್ಟ್ರೋಕ್‌ ರೋಗಿ ಗುಣಮುಖ ಆಗಬಹುದು. ಸೂಜಿಮದ್ದು ಕೊಡುವುದರಲ್ಲಿ ತಡೆ ಆದರೆ ಹಾಗೂ ಸೂಜಿಮದ್ದು ಕೊಡುವ ವಿರೋಧಾಭಾಸ ಇದ್ದರೆ ಸೇವನೆ ಹಾಗೂ Physiotherpy (ವ್ಯಾಯಾಮ) ಮಾಡಿದರೆ  ಪಾರ್ಶ್ವವಾಯು ಲಕ್ಷಣ ಕಡಿಮೆ ಮಾಡಬಹುದು. ಪಾರ್ಶ್ವವಾಯು ರೋಗಿಗಳಲ್ಲಿ (ಕೈಕಾಲು ಗಟ್ಟಿ ಆಗುವುದು) ಬರಬಹುದು. ಇದು ಸಾಧಾರಣ 3-4 ತಿಂಗಳು. ಅನಂತರ ಬರುವುದು ಇಂತಹ ಸಂದರ್ಭದಲ್ಲಿ ಸೂಜಿಮದ್ದು ಕೊಟ್ಟು ಕಡಿಮೆ ಹೂಡಿ Physiothrapy ಮುಂದುವರಿಸಿದರೆ ನರದೌರ್ಬಲ್ಯದಲ್ಲಿ ಸ್ವಲ್ಪ ಸುಧಾರಣೆ ಬರಬಹುದು.

ರಕ್ತಸ್ರಾವ ಆದರೆ ಚಿಕಿತ್ಸೆಯೇನು ?
ರಕ್ತಸ್ರಾವ ಆದರೆ ಸೂಜಿಮದ್ದು ಕೊಡಬಾರದು. ಬಾವು (Swelly)  ಬರುತ್ತದೆ. ಇದನ್ನು ಕಡಿಮೆ ಮಾಡುವಂತೆ ರಕ್ತದ ಒತ್ತಡ ಕಡಿಮೆ ಮಾಡುವಂಥ ಮದ್ದು ಕೊಟ್ಟು ಚಿಕಿತ್ಸೆ ಮುಂದುವರಿಸಬಹುದು. 

ಮುಕ್ತಾಯ 
ಪಾರ್ಶ್ವವಾಯು  ಗುಣ ಆಗುವ ಕಾಯಿಲೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಮಾಡಿದರೆ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ವಿಳಂಬ ಮಾಡದೆ ತತ್‌ಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಈ ಕಾಯಿಲೆಯನ್ನು ಗುಣಮಾಡಬಹುದು.

ಡಾ| ರೋಹಿತ್‌ ಪೈ 
ನ್ಯುರೋಲಜಿ ವಿಭಾಗ, 
ಕೆಎಂಸಿ ಆಸ್ಪತ್ರೆ, ಅಂಬೇಡ್ಕರ್‌ ವೃತ್ತ, ಮಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next