Advertisement

ಕೆಸರಲ್ಲಿ ನಡೆಯಲು ಹರಸಾಹಸ

05:33 PM Sep 11, 2017 | |

ಯಾದಗಿರಿ: ಜಿಲ್ಲಾ ಕೇಂದ್ರದಿಂದ ಹದಿನೈದು ಕಿ.ಮೀ. ದೂರದಲ್ಲಿ ಹೆಡಗಿಮದ್ರಾ ಗ್ರಾಮದಿಂದ ಖಾನಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಗ್ರಾಮಸ್ಥರು ಪ್ರತಿನಿತ್ಯ ಕಾಲ್ನಡಿಗೆಗೂ ಪರದಾಡುತ್ತಿದ್ದಾರೆ. ಹೆಡಗಿಮದ್ರಾದಿಂದ ಖಾನಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಈ ರಸ್ತೆ ಸಂಪೂರ್ಣ 5 ಕಿ.ಮೀ.

Advertisement

ಕೆಟ್ಟು ಹೋಗಿದ್ದು, ಮನುಷ್ಯರು ಓಡಾಡುವ ಸ್ಥಿತಿಯಲ್ಲಿ ಇಲ್ಲ. ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿದ್ದು, ಈ ಕೆಸರಿಯಲ್ಲಿ ಜನರು ಓಡಾಡುವ ಅನಿವಾರ್ಯತೆ ಎದುರಾಗಿದೆ.

ಈ ರಸ್ತೆ ಮೇಲೆ ವಾಹನ ಸಂಚಾರ ಸಾಧ್ಯವೇ ಇಲ್ಲ. ಮೊನ್ನೆ ಸುರಿದ ಮಳೆಗೆ ರಸ್ತೆ ಮೇಲೆ ನೀರು ನಿಂತಿದ್ದು, ಕೆಸರು ತುಂಬಿಕೊಂಡಿದೆ. ಗ್ರಾಮಸ್ಥರು ಕಾಲ್ನಡಿಗೆಯಲ್ಲಿ ಹೋಗಲು ಹಿಂದೇಟು ಹಾಕುವಂತಾಗಿದೆ. ಇದರಿಂದ ಗ್ರಾಮಸ್ಥರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ.

ಹೆಡಗಿಮದ್ರಾ ಹಾಗೂ ಖಾನಳ್ಳಿಯ ಎರಡು ಗ್ರಾಮಸ್ಥರು ಸಂಚಾರಕ್ಕೆ ಈ ರಸ್ತೆ ಮೇಲೆ ಅವಲಂಬಿಸಿದ್ದು, ಕಳೆದು ಐವತ್ತು
ವರ್ಷಗಳಿಂದಲೂ ಈ ರಸ್ತೆ ಡಾಂಬರ್‌ ಕಂಡಿಲ್ಲ. ರಸ್ತೆ ದುರಸ್ಥಿ ಬಗ್ಗೆ ಸಂಬಂಧಪಟ್ಟ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಬೇಸಿಗೆಯಲ್ಲಿ ಗ್ರಾಮಸ್ಥರು ಕಾಲ್ನಡಿಗೆಗೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ. ಆದರೆ
ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ. ಬಂಡಿ, ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗಳಾದ ಘಟನೆಗಳು ನಡೆದಿವೆ. ಆದರೂ ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರಾದ ಚಂದಪ್ಪ ಶರಣಪ್ಪನೋರ್‌, ರಮೇಶ ಪೆಳಗೇರಿ, ಭಾಗಣ್ಣ ತಳಗೇರಿ ಆರೋಪಿಸಿದ್ದಾರೆ.

Advertisement

ಈ ರಸ್ತೆ ಮೇಲೆ ಗ್ರಾಮಸ್ಥರು ಎತ್ತಿನ ಬಂಡಿ, ಬೈಕ್‌ ತೆಗೆದುಕೊಂಡು ಹೋಗಲು ಸಾಧ್ಯ ಆಗುತ್ತಿಲ್ಲ. ರಸ್ತೆ ಮೇಲೆ ನಡೆದುಕೊಂಡು ಹೋಗಲು ಆಗುತ್ತಿಲ್ಲ. ಪ್ರತಿನಿತ್ಯ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಹಿಡಿಶಾಪ
ಹಾಕುವಂತಾಗಿದೆ. ಇನ್ನೂ ಅಧಿಕಾರಿಗಳು, ಜನಪ್ರತಿನಿಧಿ ಗಳಿಗೆ ಈ ರಸ್ತೆ ಮೇಲೆ ಬಗ್ಗೆ ಅರಿವಿದ್ದರೂ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಮೀಣ ಭಾಗದ ರಸ್ತೆಗಳ ದುರಸ್ತಿ ಹಾಗೂ ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ಸರಕಾರದಿಂದ ಗ್ರಾಮ ಪಂಚಾಯತಗೆ
ಗ್ರಾಮ ಸಡಕ್‌ ಯೋಜನೆ ಸೇರಿದಂತೆ ವಿವಿಧ ಯೋಜನೆಯಡಿ ಅನುದಾನ ನೀಡಲಾಗುತ್ತಿದೆ. ಆದರೂ ರಸ್ತೆಗಳ ದುರಸ್ತಿ ಭಾಗ್ಯ ಕಾಣದೆ ಗ್ರಾಮಸ್ಥರು ಪ್ರತಿನಿತ್ಯ ನರಳುವಂತಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಗ್ರಾಮದ ರಸ್ತೆ ನಿರ್ಮಾಣಕ್ಕೆ ಮುಂದಾಗುವವರೇ ಕಾಯ್ದು ನೋಡಬೇಕಿದೆ.

„ರಾಜೇಶ ಪಾಟೀಲ್‌ ಯಡ್ಡಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next