Advertisement
ದಾವಣಗೆರೆ ವಿಶ್ವವಿದ್ಯಾಲಯ ಮತ್ತು ಅಖೀಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ 158ನೇ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ “ಯುವ ಧ್ವನಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಸ್ವಾಮಿ ವಿವೇಕಾನಂದರ ಸಲಹೆಯಂತೆ ಪ್ರತಿಯೊಬ್ಬ ವ್ಯಕ್ತಿಯ ಗುರಿ ಮತ್ತು ಯೋಚನೆ ಒಂದಾಗಿದ್ದಾಗ ಮಾತ್ರ ಯಶಸ್ಸು ಸಾ ಧಿಸಲು ಸಾಧ್ಯ. ಆದರೆ ಭಾರತೀಯರಲ್ಲಿ ಯೋಚನೆ ಮತ್ತು ಗುರಿ ಭಿನ್ನವಾಗಿದ್ದರಿಂದ ಶತಮಾನಗಳ ಕಾಲ ಪರಕೀಯರು ದೇಶವನ್ನು ಆಳುವಂತಾಯಿತು. ಅವರ ದಾಸ್ಯದಿಂದ ದೇಶದ ಸಂಪತ್ತು, ಸಂಪನ್ಮೂಲಗಳು ನಷ್ಟವಾಗಿ ಈಗಲೂ ಅದರ ಪರಿಣಾಮವನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ದೇಶೀಯತೆಯ ಭಾವನೆಯೊಂದಿಗೆ ಉನ್ನತ ಯೋಚನೆಗಳೊಂದಿಗೆ ನಿರ್ದಿಷ್ಟ ಗುರಿಯತ್ತ ಚಿಂತನೆ ಮಾಡಿ, ಅನುಷ್ಠಾನಕ್ಕೆ ತರಲು ಎಲ್ಲರೂ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ ಪ್ರೊ| ಶರಣಪ್ಪ ವಿ. ಹಲಸೆ ಮಾತನಾಡಿ, ವೈಯಕ್ತಿಕ ಹಿತಾಸಕ್ತಿ ಬಿಟ್ಟು ಜನಪರ ಕಾಳಜಿಯಿಂದ ಸಮಾಜದ ಹಿತಕ್ಕಾಗಿ ದುಡಿದ ವ್ಯಕ್ತಿ ಸಾಧನೆಯ ಎತ್ತರಕ್ಕೆ ಏರುವರು. ಸಮಾಜ ಗುರುತಿಸಿ ಗೌರವಿಸುವುದು. ಓದು, ಅಧ್ಯಯನದಲ್ಲಿಯೂ ಗುರಿ, ಉದ್ದೇಶಗಳನ್ನು ಒಂದಾಗಿ ಮಾಡಿಕೊಂಡರೆ ಉತ್ತಮ ಸಾಧನೆ ಮಾಡಬಹುದು ಎಂದು ತಿಳಿಸಿದರು. ಕುಲಸಚಿವ ಪ್ರೊ| ಬಸವರಾಜ ಬಣಕಾರ, ಪ್ರತಿಯೊಬ್ಬರಲ್ಲಿಯೂ ವಿಶಿಷ್ಟ ವ್ಯಕ್ತಿತ್ವ ಇರುತ್ತದೆ. ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಉತ್ತಮ ಕೆಲಸಗಳಿಗೆ ಬಳಸಿಕೊಂಡಾಗ ಯಶಸ್ಸಿನ ಹಾದಿ ಸುಲಭವಾಗುತ್ತದೆ. ಅದು ವಿವೇಕಾನಂದರ ಆದರ್ಶದ ಭಾರತ ಮರುಸೃಷ್ಟಿಗೆ ನೆರವಾಗುತ್ತದೆ ಎಂದು ನುಡಿದರು.
ಪರೀಕ್ಷಾಂಗ ಕುಲಸಚಿವೆ ಪ್ರೊ| ಎಚ್.ಎಸ್. ಅನಿತಾ, ಹಣಕಾಸು ಅ ಧಿಕಾರಿ ಪ್ರೊ| ಗೋಪಾಲ ಎಂ. ಅಡವಿರಾವ್, ಹಿಂದುಳಿದ ವರ್ಗಗಳ ಸಮಿತಿ ಸಂಯೋಜನಾ ಧಿಕಾರಿ ಕುಮಾರ ಸಿದ್ದಮಲ್ಲಪ್ಪ ಉಪಸ್ಥಿತರಿದ್ದರು.