Advertisement

ಕೋವಿಡ್‌ 19 ಸೋಂಕಿತರ ಮರಣ ಪ್ರಮಾಣ ನಿಯಂತ್ರಿಸಲು ಶ್ರಮಿಸಿ

07:13 AM Jun 26, 2020 | Lakshmi GovindaRaj |

ಹಾಸನ: ಕೋವಿಡ್‌ 19 ಸೋಂಕಿತರಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಿ ಮರಣ ಪ್ರಮಾಣ ಕಡಿಮೆ ಮಾಡಬೇಕು. ಎಲ್ಲಾ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆಹಚ್ಚಿ ಪರೀಕ್ಷೆಗೆ ಒಳಪಡಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ  ಟಿ. ಎಂ. ವಿಜಯಭಾಸ್ಕರ್‌ ಎಲ್ಲ ಜಿಲ್ಲಾಧಿಕಾರಿ ಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿ ಗಳೊಂದಿಗೆ ಕೋವಿಡ್‌ 19  ತಡೆಗಟ್ಟುವ ಕುರಿತು ಗುರುವಾರ ವಿಡಿಯೋ ಸಂವಾದ ನಡೆಸಿದ ಅವರು, ಹೊರ ರಾಜ್ಯದಿಂದ ಬಂದ ಎಲ್ಲರನ್ನೂ ಪತ್ತೆಮಾಡಿ ಪರೀಕ್ಷೆಮಾಡಬೇಕು. ಐಎಲ್‌ಐ ಹಾಗೂ ಸಾರಿ ಪ್ರಕರಣ ಕಂಡು ಬಂದವರ ಪರೀಕ್ಷೆ ನಡೆಸುವ ಆಸ್ಪತ್ರೆಯ  ಸಿಬ್ಬಂದಿ ಪರೀಕ್ಷೆಗೆ ಒಳಗಾದವರ ದೂರವಾಣಿ ಸಂಖ್ಯೆ ಮತ್ತು ಪೂರ್ಣ ವಿಳಾಸವನ್ನು ಕಡ್ಡಾಯ ವಾಗಿ ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿನ ದೊಡ್ಡ ದೊಡ್ಡ ಮಾಲ್‌ ಗಳ ಮತ್ತು ಸಿಬ್ಬಂದಿಗಳು, ಎಪಿಎಂಸಿ  ಹಾಗೂ ಇತರ  ಮಾರುಕಟ್ಟೆ ತರಕಾರಿ ವ್ಯಾಪಾರಸ್ಥರು ಹಾಗೂ ಹಣ್ಣಿನ ಅಂಗಡಿಗಳ ಮಾಲೀಕರು ಮತ್ತು ಕೆಲಸಗಾರರನ್ನು ಕೋವಿಡ್‌ 19 ಪರೀಕ್ಷೆಗೆ ಒಳಪಡಿಸಿ ಅವರೆಲ್ಲರಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ  ಕಾಯ್ದುಕೊಳ್ಳುವಂತೆ ಸೂಚನೆ ನೀಡಬೇಕು ಎಂದರು.

ಕೋವಿಡ್‌ 19 ಸೋಂಕಿತರು ಹಾಗೂ ಆಸ್ಪತ್ರೆಯಿಂದ ಗುಣ ಮುಖರಾಗಿ ಬಿಡು ಗಡೆ ಹೊಂದಿದವರ ಅಕ್ಕ ಪಕ್ಕದ ಮನೆ ಯವರನ್ನೂ ಪರೀಕ್ಷೆಗೆ ಒಳಪಡಿಸಬೇಕು ಎಂದರು. ವೀಡಿಯೋ  ಸಂವಾದದಲ್ಲಿ ಜಿಲ್ಲಾಧಿಕಾರಿ ಆರ್‌. ಗಿರೀಶ್‌, ಎಸ್ಪಿ ಶ್ರೀನಿವಾಸ್‌ ಗೌಡ, ಎಡೀಸಿ ಕವಿತಾ ರಾಜಾರಾಂ, ಡಿಎಚ್‌ಒ ಡಾ.ಸತೀಶ್‌ ಕುಮಾರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣ ಮೂರ್ತಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next