Advertisement
ಜಾವಗಲ್ ಗ್ರಾಮ ಪಂಚಾಯಿತಿಯಿಂದ ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಾವಗಲ್ ಹೋಬಳಿಯ ಗ್ರಾಮ ಪಂಚಾಯಿತಿ ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಯೋಜನೆಯನ್ನು 256ಕೋಟಿ ರೂ. ವೆಚ್ಚದಲ್ಲಿ ಅರಸೀಕೆರೆ ತಾಲೂಕಿನ 530 ಹಳ್ಳಿಗಳಿಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿ ಶುದ್ಧ ಕುಡಿಯುವ ನೀರನ್ನು 24*7 ಮಾದರಿಯಲ್ಲಿ ಸರಬರಾಜುಮಾಡಲಾಗುವುದೆಂದರು.
Related Articles
Advertisement
ಮೀಟರ್ ಅಳವಡಿಕೆ ಮಾಡಲಾಗಿದ್ದು, ಅವುಗಳನ್ನು ದುಷ್ಕಮಿಗಳು ಹಾಳು ಮಾಡದಂತೆ ಅಧಿಕಾರಿಗಳು ವಾಟರ್ ಮನ್‌ಗಳು ಗಮನಹರಿಸುವಂತೆ ಸೂಚಿಸಿದರು. ಅರಸೀಕೆರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ ನಟರಾಜು ಮಾತನಾಡಿ, ಯೋಜನೆಯ ಸಂಪೂರ್ಣ ಯಶಸ್ಸಿಗೆ ಪಿಡಿಒ, ಕಾರ್ಯದರ್ಶಿ, ವಾಟರ್‌ಮನ್‌ಗಳ ಸಂಪೂರ್ಣ ಜವಾಬ್ದಾರಿಯೊಂದಿಗೆ ಸಾರ್ವಜನಿಕರ ಸಹಕಾರ ಮುಖ್ಯವೆಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಮಹದೇವಪ್ಪ, ತಾಪಂ ಸದಸ್ಯರಾದ ವಿಜಯಕುಮಾರ್, ಬಸವರಾಜು, ಪ್ರಭಾಕರ್ , ಪಿಡಿಒ ಮಂಜುನಾಥ್, ಕಾರ್ಯದರ್ಶಿ ಈರೇಗೌಡ, ಮಾತನಾಡಿದರು. ಗ್ರಾಪಂ ಅಧ್ಯಕ್ಷ ಕುಮಾರ್ ನಾಯ್ಕ ಉಪಾಧ್ಯಕ್ಷೆ ಶಂಕರಮ್ಮ , ಎಪಿಎಂಸಿ ಸದಸ್ಯ ಧರ್ಮಪ್ಪ, ಹೋಬಳಿ ಪಿಡಿಒ ಗಳು ಕಾರ್ಯದರ್ಶಿಗಳು ವಾಟರ್‌ಮನ್‌ಗಳು, ಅ ಕಾರಿಗಳು, ಯೋಜನೆಯ ಗುತ್ತಿಗೆದಾರರು ಭಾಗವಹಿಸಿದ್ದರು.
ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕ ಯತ್ನ: ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯಡಿ ಜಾವಗಲ್ ಪಟ್ಟಣ ಸೇರಿದಂತೆ ಹೋಬಳಿಯ ಸುಮಾರು, 23 ಗ್ರಾಮಗಳಿಗೆ ಯಗಚಿ ನೀರು ಸಮರ್ಪಕವಾಗಿ ಸರಬರಾಜು ಆಗದಿರುವುದರಿಂದ ಜಾವಗಲ್ ಪಟ್ಟಣವನ್ನು ಹೇಮಾವತಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸೇರಿಸಿ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನಮಾಡುವುದಾಗಿ ಶಾಸಕ ಶಿವಲಿಂಗೇಗೌಡ ಭರವಸೆನೀಡಿದರು.
183 ಹಳ್ಳಿಗಳಿಗೆ ಪ್ರಾಯೋಗಿಕವಾಗಿ ನೀರು ಸರಬರಾಜು ಮಾಡುತ್ತಿದೆ. 2020ರ ಜನವರಿ ಅಂತ್ಯಕ್ಕೆ ಎಲ್ಲಾ 530 ಗ್ರಾಮಗಳಿಗೂ ನೀರು ಸರಬರಾಜು ಮಾಡಲಾಗುವುದು.-ಶ್ರೀನಿವಾಸ್, ಗ್ರಾಮೀಣ ಕುಡಿಯುವ ನೀರು ವ್ಯವಸ್ಥೆ ಎಇಇ