Advertisement

ಜೀವನ ಮೌಲ್ಯಗಳ ಸಂರಕ್ಷಣೆಗಾಗಿ ಶ್ರಮಿಸಿ

11:38 AM Apr 04, 2022 | Team Udayavani |

ಧಾರವಾಡ: ಆಧುನಿಕ ನವ ನಾಗರಿಕತೆಯ ಸಮಾಜದಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದ್ದೇವೆ. ಆದರೆ ನೆಮ್ಮದಿಯ ಶಾಂತಿಪೂರ್ಣ ಬದುಕಿಗೆ ಅಗತ್ಯವಾದ ಅಂಶಗಳನ್ನು ಮರೆಯುತ್ತಿದ್ದೇವೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ| ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.

Advertisement

ಕವಿಸಂನಲ್ಲಿ ಹಮ್ಮಿಕೊಂಡಿದ್ದ ವೀರಶೈವ-ಲಿಂಗಾಯತ ಧರ್ಮ ಸಂಸ್ಥಾಪಕ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮನುಷ್ಯನ ಬದುಕು ಅತೃಪ್ತಿ-ಅಸಮಾಧಾನದಿಂದ ಕೂಡಿದ್ದು, ನೀತಿ-ನಿಯಮ ಇಲ್ಲದ ಸಮಾಜ ಮತ್ತು ಧರ್ಮ ಎಂದಿಗೂ ಬೆಳೆಯುವುದಿಲ್ಲ. ಜೀವನ ಮೌಲ್ಯಗಳ ಸಂರಕ್ಷಣೆಗಾಗಿ ಎಲ್ಲರೂ ಶ್ರಮಿಸುವ ಅಗತ್ಯವಿದೆ ಎಂದರು.

ಸುಳ್ಳದ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು.

ಅಮ್ಮಿನಬಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಜರುಗಿದ ಸಮಾರಂಭದಲ್ಲಿ ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯರು, ಹಣ್ಣಿಕೇರಿ ಹಿರೇಮಠದ ರೇವಣಸಿದ್ಧ ಶಿವಾಚಾರ್ಯರು, ಬ್ಯಾಹಟ್ಟಿ ಹಿರೇಮಠದ ಮರುಳಸಿದ್ಧ ಶಿವಾಚಾರ್ಯರು, ಶಿವಮೊಗ್ಗ ಜಿಲ್ಲೆ ಮಳಲಿಮಠದ ನಾಗಭೂಷಣ ಶಿವಾಚಾರ್ಯರು, ಮೊರಬ ಹಿರೇಮಠದ ಸೋಮಶೇಖರ ಶಿವಾಚಾರ್ಯರು ಹಾಗೂ ಹೊಸಯಲ್ಲಾಪೂರ ಹಿರೇಮಠದ ಗದಗಯ್ಯ ಸ್ವಾಮೀಜಿ ಇದ್ದರು.

Advertisement

ಶಾಸಕ ಅಮೃತ ದೇಸಾಯಿ ಸಮಾರಂಭಕ್ಕೆ ಚಾಲನೆ ನೀಡಿದರು. ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಿತಿ ಸಂಚಾಲಕರಾದ ರಾಜೇಂದ್ರ ಹಿರೇಮಠ, ಸರೋಜಾ ಪಾಟೀಲ, ವಿಜಯಲಕ್ಷ್ಮೀ ಚಿಕ್ಕಮಠ, ಚನ್ನಬಸಯ್ಯ ಬಾಳೆದಮಠ, ಅಮಿತ ಪಾಟೀಲ, ಗುರುಸ್ವಾಮಿ ಹಿರೇಮಠ, ಮಹೇಶ ಗುರುಸ್ಥಲಮಠ, ಮೃತ್ಯುಂಜಯ ರೊಟ್ಟಿಮಠ, ಮಹೇಶ್ವರಿ ಹಿರೇಮಠ, ಶಕುಂತಲಾ ಹಿರೇಮಠ, ಬಸವರಾಜ ಕುರಹಟ್ಟಿಮಠ ಇದ್ದರು.

ಜಯಲಕ್ಷ್ಮೀ ಹಿರೇಮಠ ನಿರೂಪಿಸಿದರು. ಮಂಜುನಾಥ ಹಿರೇಮಠ ಸ್ವಾಗತಿಸಿದರು. ಈಶ್ವರ ಹಿರೇಮಠ ವಂದಿಸಿದರು. ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ರಂಭಾಪುರಿ ಸ್ವಾಮೀಜಿ ಸನ್ಮಾನಿಸಿದರು. ಹೊಸಯಲ್ಲಾಪೂರ ಹಿರೇಮಠದಿಂದ ಕರ್ನಾಟಕ ವಿದ್ಯಾವರ್ಧಕ ಸಂಘದವರೆಗೂ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.

ಧರ್ಮದ ಮೂಲ ಸ್ವರೂಪ ಬದಲಿಸಲಾಗದು: ಕೆಲವರು ಪಂಚ ಪೀಠಗಳ ಸತ್ಕಾರ್ಯ ಮರೆತು ಮೂಢನಂಬಿಕೆ ಎಂದು ಬಿಂಬಿಸುತ್ತಿದ್ದು, ಇಂತಹ ಅಪಪ್ರಚಾರಕ್ಕೆ ಕಿವಿಗೊಡಬಾರದು. ಕೆಲವು ಮಠಾಧೀಶರು, ನಾಸ್ತಿಕ ಬಂಡಾಯ ಸಾಹಿತಿಗಳು ಜನರಿಗೆ ತಪ್ಪು ಮಾರ್ಗದರ್ಶನ ನೀಡುತ್ತಿದ್ದಾರೆ. ಕುಂಕುಮ ಏಕೆ ಇಡುತ್ತೀರಿ, ಬಳೆ ಏತಕ್ಕೆ ಹಾಕುತ್ತೀರಿ, ಹೂ ಏಕೆ ಮುಡಿಯುತ್ತೀರಿ, ದೇವರಿಗೆ ಹಾಲಿನ ಅಭಿಷೇಕ ಏತಕ್ಕಾಗಿ, ಮದುವೆಯಲ್ಲಿ ಮಂಗಲಾಕ್ಷತೆ ಹಾಕುವ ಬಗ್ಗೆಯೂ ಪ್ರಶ್ನೆ ಮಾಡುತ್ತಿದ್ದಾರೆ. ಈ ಮೂಲಕ ನಮ್ಮ ನಿಮ್ಮ ಸಂಬಂಧ ಛಿದ್ರ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಯಾರೂ ಏನೇ ಪ್ರಯತ್ನ ಮಾಡಿದರೂ ಮೂಲ ಧರ್ಮದ ಸ್ವರೂಪವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದು ರಂಭಾಪುರಿ ಶ್ರೀಗಳು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next