Advertisement
ಪ್ರಿಯಾಂಕಾ ಅವರು ತನ್ನ ತಂದೆಯ ಮಾರ್ಗದರ್ಶನದಂತೆ ಸ್ಟ್ರಿಂಗ್ ಆರ್ಟ್ ಮೂಲಕ ರಚಿಸಿದ 37.5 x 38 ಇಂಚಿನ ವಿರಾಟ್ ವಿಶ್ವಕರ್ಮ ಕಲಾಕೃತಿಯನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಮಾರ್ಚ್‌ತಿಂಗಳಲ್ಲಿ ಕಳುಹಿಸಿದ್ದರು. ಎಪ್ರಿಲ್ ತಿಂಗಳಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನವರು ಅದನ್ನು ದಾಖಲೆ ಪುಸ್ತಕಕ್ಕೆ ಸೇರ್ಪಡೆಗೊಳಿಸಿದ್ದಾರೆ.
Related Articles
Advertisement
ಬಂಟಕಲ್ಲು ಹೇರೂರು ಕೃಷ್ಣ ಆಚಾರ್ಯ ಮತ್ತು ಯಶೋದಾ ಆಚಾರ್ಯ ದಂಪತಿಗಳ ಪುತ್ರಿಯಾಗಿರುವ ಪ್ರಿಯಾಂಕಾ ಆಚಾರ್ಯ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿಸಿಎ ಪದವಿ ಪಡೆದು ಪ್ರಸ್ತುತ ಐಟಿ ಕಂಪೆನಿಯೊಂದರಲ್ಲಿ ಪ್ರೋಗ್ರಾಮ್ಮರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.