Advertisement

ಆರನೇ ದಿನ ಮುಷ್ಕರ ಮುಂದುವರಿಕೆ 

11:16 AM Jul 25, 2018 | |

ಬೆಂಗಳೂರು: ಟೋಲ್‌ ವ್ಯವಸ್ಥೆಯಿಂದ ಮುಕ್ತಿ ನೀಡುವಂತೆ ಒತ್ತಾಯಿಸಿ ದೇಶವ್ಯಾಪಿ ನಡೆಯುತ್ತಿರುವ ಸರಕು ಸಾಗಣೆದಾರರ ಮುಷ್ಕರ ಆರನೇ ದಿನವಾದ ಮಂಗಳವಾರವೂ ಮುಂದುವರಿದಿದ್ದು, ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಏರುಪೇರು ಉಂಟಾಗಲಾರಂಭಿಸಿದೆ.

Advertisement

ನಗರದ ಎಪಿಎಂಸಿ ಮಾರುಕಟ್ಟೆಗೆ ನಿತ್ಯ ಆಹಾರಧಾನ್ಯ, ಬೇಳೆಕಾಳು ಹೊತ್ತು ಬರುವ ಲಾರಿಗಳ ಸಂಖ್ಯೆಯಲ್ಲಿ ಶೇ.50ರಷ್ಟು ಇಳಿಕೆಯಾಗಿದೆ. ಇದರಿಂದ ಮಳಿಗೆದಾರರ ಬಳಿಯಿರುವ ದಾಸ್ತಾನು ಕ್ರಮೇಣ ಕರಗಲಾರಂಭಿಸಿದೆ. ಉದ್ದಿಮೆದಾರರು ಸಹ ಕಚ್ಛಾ ಸಾಮಗ್ರಿ ಪೂರೈಕೆಯಲ್ಲಿನ ವ್ಯತ್ಯಯದಿಂದ ಪರದಾಡುವಂತಾಗಿದೆ. 

ರಾಜ್ಯದಲ್ಲಿ ಬಹುತೇಕ ಸರಕು ಸಾಗಣೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಹೆದ್ದಾರಿ ಸೇರಿದಂತೆ ಗಡಿ ಭಾಗಗಳಲ್ಲಿ ಲಾರಿಗಳು ಸಾಲುಗಟ್ಟಿ ನಿಂತಿವೆ. ಮುಷ್ಕರದಿಂದ ಸರಕು ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಡೀಸೆಲ್‌ ಮಾರಾಟ, ವ್ಯಾಪಾರ- ವಹಿವಾಟು ಇಳಿಕೆಯಿಂದ ರಾಜ್ಯ ಸರ್ಕಾರಕ್ಕೂ ನಿತ್ಯ ನೂರಾರು ಕೋಟಿ ರೂ.ನಷ್ಟ ಉಂಟಾಗುತ್ತಿದೆ.

ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಅಖೀಲ ಭಾರತ ಮೋಟಾರು ಟ್ರಾನ್ಸ್‌ಪೊàರ್ಟ್‌ ಕಾಂಗ್ರೆಸ್‌ ದಕ್ಷಿಣ ವಲಯದ ಪ್ರಧಾನ ಕಾರ್ಯದರ್ಶಿ ಜಿ.ಆರ್‌.ಷಣ್ಮುಖಪ್ಪ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next