Advertisement
ಮುಷ್ಕರ ಆರಂಭವಾದಾಗಿನಿಂದ ಗ್ರಾಮೀಣ ಭಾಗದ 11 ಸಾವಿರ ಅಂಚೆ ಕಚೇರಿಗಳ ಟಪಾಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಲಕ್ಷಕ್ಕೂ ಅಧಿಕ ಪತ್ರಗಳು ವಿಲೇವಾರಿ ಯಾಗದೆ ಉಳಿದಿವೆ. ಮುಷ್ಕರವು ಅಂಚೆಯ ಹಣಕಾಸು ವಹಿವಾಟಿನ ಮೇಲೆಯೂ ಪರಿಣಾಮ ಬೀರಿದ್ದು, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಶೇ.60ರಷ್ಟು ಹಣಕಾಸು ವ್ಯವಹಾರ ಕುಗ್ಗಿದೆ.
ಹೇಳುತ್ತಿದ್ದಾರೆ. ಆದರೆ, ಬಹುತೇಕ ಕಡೆ ಭದ್ರತೆಯ ವಿಷಯದಲ್ಲಿ ಹಿಂದೇಟು ಹಾಕಿ ಪತ್ರಗಳನ್ನು ಪುನಃ ಇಲಾಖೆಗಳಿಗೆ ಹಿಂದಿರುಗಿಸಲಾಗುತ್ತಿದೆ.
Related Articles
ಮರುಮೌಲ್ಯಮಾಪನ ಹಾಗೂ ಉತ್ತರ ಪತ್ರಿಕೆ ನಕಲು ಪ್ರತಿ ಪಡೆಯಲು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ
ಸ್ವೀಕರಿಸುವ ಪರೀಕ್ಷಾ ಮಂಡಳಿಗಳು ವಿದ್ಯಾರ್ಥಿಗಳಿಗೆ ಉತ್ತರ ಪ್ರತಿ ನಕಲು ಪ್ರತಿಯನ್ನು ಅಂಚೆ ಮೂಲಕವೇ ರವಾನಿಸುತ್ತಿದ್ದು,ಮುಷ್ಕರದಿಂದ ಪ್ರತಿಗಳು ಗ್ರಾಮೀಣ ವಿದ್ಯಾರ್ಥಿಗಳ ಮನೆ ಅಥವಾ ಶಾಲೆಗೆ ತಲುಪುತ್ತಿಲ್ಲ. ಅಲ್ಲದೇ ಶಾಲೆ ಕಾಲೇಜು ಬದಲಾಯಿಸುತ್ತಿರುವ ಹಾಗೂ ಮುಂದಿನ ಉನ್ನತ ಶಿಕ್ಷಣಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ವರ್ಗಾವಣಾ ಪತ್ರ ಅತ್ಯವಶ್ಯವಾಗಿದ್ದು, ಗ್ರಾಮೀಣ ಭಾಗದ ಶಾಲೆ, ಕಾಲೇಜುಗಳಿಗೆ ವರ್ಗಾವಣಾ ಪತ್ರ ಕೋರಿ ಬಂದ ಅರ್ಜಿಗಳು ಶಾಲೆ ತಲುಪುತ್ತಿಲ್ಲ.
Advertisement
ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನಗಳು ಹಾಗೂ ವಿವಿಧ ಇಲಾಖೆಯ ನೌಕರರ ಪಿಂಚಣಿ ಪಿಂಚಣಿಯೂ ತಲುಪದೆ ಸಮಸ್ಯೆ ಉಂಟಾಗಬಹುದು. ಇದರಿಂದಾಗಿ ಪ್ರತಿ ತಿಂಗಳ ಮೊದಲನೇ ವಾರ ಸರ್ಕಾರದಿಂದ ಬರುವ ಪಿಂಚಣಿಗಳನ್ನೇ ಅವಲಂಬಿಸಿ ಜೀವನ ನಡೆಸುವ ಗ್ರಾಮೀಣ ಫಲಾನುಭವಿಗಳಿಗೆ ತೊಂದರೆಯಾಗುವ ಆತಂಕ ಮೂಡಿದೆ.
ಈ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ನೀಡುತ್ತಿದ್ದೇವೆ. ನಗರ ಭಾಗದ ನೌಕರರ ಸಂಘದ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದು, ಮುಷ್ಕರದ ಮೊರೆ ಹೋಗುವುದಿಲ್ಲ ಎಂಬ ಭರವಸೆ ಇದೆ.– ರಾಜೇಂದ್ರ ಕುಮಾರ್,
ಮುಖ್ಯ ಅಂಚೆ ಅಧಿಕಾರಿ ದಕ್ಷಿಣ ಕರ್ನಾಟಕ ವಲಯ ಕಮಲೇಶ್‌ಚಂದ್ರ ವರದಿ ಜಾರಿಗೆ ಆದೇಶ ಹೊರಡಿಸುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ. ಈಗಾಗಲೇ ರಾಜ್ಯದ 17 ಸಾವಿರ ಗ್ರಾಮೀಣ ಅಂಚೆ ನೌಕರರು ಮುಷ್ಕರದಲ್ಲಿದ್ದು, ಜೂ.11ರಿಂದ ನಗರ ಪ್ರದೇಶಗಳ 4 ಸಾವಿರ ನೌಕರರು ಮುಷ್ಕರಕ್ಕೆ ಕೈಜೋಡಿಸಲಿದ್ದಾರೆ.
– ಕೆ.ಎಸ್.ರುದ್ರೇಶ್, ರಾಜ್ಯ ಕಾರ್ಯದರ್ಶಿ,
ಅಖೀಲ ಭಾರತ ಗ್ರಾಮೀಣ ನೌಕರರ ಸಂಘ
– ಜಯಪ್ರಕಾಶ್ ಬಿರಾದಾರ್