Advertisement

ಹರತಾಳ: ಕೊಳ್ತಿಗೆ, ಸವಣೂರು, ಕಾಣಿಯೂರುಗಳಲ್ಲಿ ಸಂಪೂರ್ಣ ಯಶಸ್ವಿ

03:13 PM Feb 26, 2017 | |

ಸವಣೂರು : ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಮಂಗಳೂರು ಭೇಟಿ ವಿರೋಧಿಸಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಹಾಗೂ ಸಂಘ ಪರಿವಾರ ಸಂಘಟನೆಗಳು ಕರೆ ನೀಡಿದ್ದ ಜಿಲ್ಲಾ ಹರತಾಳಕ್ಕೆ ಕೊಳ್ತಿಗೆ, ಸವಣೂರು, ನರಿಮೊಗರು, ಕಾಣಿಯೂರು ಮೊದಲಾದೆಡೆ ಉತ್ತಮ ಬೆಂಬಲ ವ್ಯಕ್ತವಾಗಿದೆ.

Advertisement

ಈ ಭಾಗದಲ್ಲಿ ಹೆಚ್ಚಿನ ಎಲ್ಲ ಅಂಗಡಿಮುಂಗಟ್ಟುಗಳು ಮುಚ್ಚಿದ್ದವು. ಸ್ವಯಂ ಪ್ರೇರಿತರಾಗಿ ಹರತಾಳ ನಡೆಸಿದರು. ಸವಣೂರಿನಲ್ಲಿ ಈ ಹಿಂದಿನ ಬಂದ್‌ ಸಂದರ್ಭ ಗಲಭೆ ನಡೆದಿದ್ದರಿಂದ ವಿಶೇಷ ಪೊಲೀಸ್‌ ಬಂದೋಬಸ್ತ್ ನಡೆಸಲಾಗಿತ್ತು. 

ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಸಂಚಾರ ನಡೆಸಿದ್ದವು. ಜನರ ಸಂಖ್ಯೆ ತೀರಾ ವಿರಳವಾಗಿತ್ತು. ಯಾವುದೇ ಅಹಿತಕರ ಘಟನೆ ನಡೆದಿಲ್ಲ.

ಹಿಂದೂ ಜಾಗರಣ ವೇದಿಕೆಯಿಂದ ಮನವಿ
ಸವಣೂರಿನಲ್ಲಿ ಶುಕ್ರವಾರ ಸಂಜೆ ಹಿಂದೂ ಜಾಗರಣ ವೇದಿಕೆ ಸವಣೂರು ಘಟಕದಿಂದ  ತಾಲೂಕು ಸಹ ಸಂಚಾಲಕ ಪ್ರಜ್ವಲ್‌ ರೈ ಪಾತಾಜೆ, ಸವಣೂರು ಘಟಕದ ಅಧ್ಯಕ್ಷ ಮಹಾಬಲ ಶೆಟ್ಟಿ ಕೊಮ್ಮಂಡ, ಸಂಚಾಲಕ ಪ್ರಶಾಂತ್‌ ನೂಜಾಜೆ, ಕಾರ್ಯದರ್ಶಿ ಜಗದೀಶ್‌ ಕೆಡೆಂಜಿ ನೇತೃತ್ವದಲ್ಲಿ ಕಾಯಕರ್ತರು ವರ್ತಕರಲ್ಲಿ ಮನವಿ ಪತ್ರ ನೀಡಿ ಹರತಾಳಕ್ಕೆ ಬೆಂಬಲ ಯಾಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next