Advertisement

ವಿವಿಧ ಸಂಘಟನೆಗಳ ವತಿಯಿಂದ ಮುಷ್ಕರ

03:59 PM Nov 27, 2020 | Suhan S |

ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ರೈತ ವಿರೋಧಿ ಜನವಿರೋಧಿ ನೀತಿ ಖಂಡಿಸಿ ಹಾಗೂ ಹೊಸದಾಗಿ ಜಾರಿಗೆ ತಂದಿರುವ ಕಾರ್ಮಿಕ ಕಾಯ್ದೆ ಜಾರಿ ವಿರುದ್ಧ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ವತಿಯಿಂದಕರೆನೀಡಿದ್ದ ಅಖೀಲ ಭಾರತ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ, ತಾಲೂಕಿನ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಕಾರ್ಮಿಕರು ಮುಷ್ಕರ ನಡೆಸಿದರು.

Advertisement

ಮುಷ್ಕರದಅಂಗವಾಗಿಕೈಗಾರಿಕಾಪ್ರದೇಶದ ಬಹುತೇಕ ಕಾರ್ಖಾನೆಗಳನ್ನು ಬಂದ್‌ ಮಾಡಿ, ಕಾರ್ಮಿಕರುಮುಷ್ಕರದಲ್ಲಿಭಾಗವಹಿಸಿದ್ದರು. ಜನ ಜೀವನ ಎಂದಿನಂತಿತ್ತು. ನಗರದ ಸಿದ್ದಲಿಂಗಯ್ಯ ವೃತ್ತದ ಬಳಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ನಗರದ ಬಸ್‌ ನಿಲ್ದಾಣದ ಕೊಂಗಾಡಿಯಪ್ಪ ತಂಗುದಾಣದ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಜೆಸಿ ಟಿಯು ರಾಜ್ಯ ಮುಖಂಡರಾದ ಸತ್ಯಾನಂದ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷಪಿ.ಎ.ವೆಂಕಟೇಶ್‌,ಏಪ್ರಿಲ್‌ ನಿಂದ ಅನುಷ್ಠಾನಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ ಹಾಗೂ ಸಾರ್ವತ್ರಿಕ ಉದ್ಯಮಗಳ ಖಾಸಗೀಕರಣ ಖಂಡಿಸಿ, 7 ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಷ್ಟ್ರಾ ದ್ಯಂತ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು.

ಕೇಂದ್ರ ಸರ್ಕಾರ ಕೋವಿಡ್‌ ಸಂಕಷ್ಟದ ಸಂದರ್ಭ ನೆಪವಾಗಿಟ್ಟುಕೊಂಡು ರೈತ, ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ತರುತ್ತಿದೆ. ದೇಶದಲ್ಲಿ ಯೋಜನಾ ರಹಿತವಾಗಿ ಲಾಕ್‌ ಡೌನ್‌ ಜಾರಿಗೊಳಿಸಿದ ಪರಿಣಾಮ ಲಕ್ಷಾಂತರ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುವಂತಾಯಿತು. ಇಂದಿಗೂ ದೇಶದಲ್ಲಿ ಆರ್ಥಿಕ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ ಎಂದು ದೂರಿದರು,

ಜೆಡಿಎಸ್‌ ಮುಖಂಡ ಟಿ.ಎನ್‌. ಪ್ರಭುದೇವ್‌ ಮಾತನಾಡಿ, ಲಾಕ್‌ಡೌನ್‌ ಸಂಕಷ್ಟದಿಂದಇನ್ನೂಜನತೆಚೇತರಿಸಿಕೊಂಡಿಲ್ಲ. ಈ ಸಮಯದಲ್ಲಿಕೇಂದ್ರ ಸರ್ಕಾರದಕಾರ್ಮಿಕರಹಿತಾಸಕ್ತಿಗೆ ಮಾರಕವಾದ ಕಾನೂನು ಜಾರಿಗೊಳಿಸುತ್ತಿರುವುದು ಖಂಡನೀಯ ಎಂದರು. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಆರ್‌. ಚಂದ್ರತೇಜಸ್ವಿ,ಕನ್ನಡ ಪಕ್ಷದ ತಾಲೂಕು ಅಧ್ಯಕ್ಷ ಎಂ.ಸಂಜೀವ ನಾಯಕ್‌, ಎಐಟಿಯುಸಿ ತಾಲೂಕು ಕಾರ್ಯದರ್ಶಿ ಶಿವಾರೆಡ್ಡಿ, ಸಿಐಟಿಯು ಸಂಚಾಲಕ ರೇಣುಕಾರಾಧ್ಯ, ಕೆಐಇಇಎಫ್‌ ಮುಖಂಡ ಪ್ರಭಾಕರ್‌, ಎಫ್‌ ಕೆಎಆರ್‌ಡಿಯು ಕಾರ್ಯದರ್ಶಿ ಇನಾಯತ್‌ ಪಾಷಾ, ಎಆರ್‌ಡಿಯು ಕಾರ್ಯದರ್ಶಿ ಮುಸ್ತಫಾ, ಬೀದಿ ಬದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ನರೇಶ್‌ಕುಮಾರ್‌, ಸೈಯದ್‌ ಆಲಿ, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಸುಮಾ, ಬಿರ್ಲಾ ಸೂಪರ್‌ ಕಾರ್ಮಿಕ ಸಂಘದ ಮುಖಂಡರಾದ ಭರತ್‌ ಮಣೀಶ್‌ ಎಚ್‌ಎಂಕೆಪಿ ರಾಜಣ್ಣ, ಎಐಟಿಯುಸಿ, ಕೆಐಇಇಎಫ್‌ ಮತ್ತಿತರ ಕಾರ್ಮಿಕ ಸಂಘಗಳ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next